Paris Olympics 2024: ಭಾರತದ 15 ಸದಸ್ಯರ ರೈಫಲ್, ಪಿಸ್ತೂಲ್ ತಂಡ ಪ್ರಕಟ
ಜೂನ್ 11 ಮಂಗಳವಾರ, ಮುಂಬರುವ 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವು ಶೂಟಿಂಗ್‌ನಲ್ಲಿ 21 ಕೋಟಾಗಳನ್ನು ಗಳಿಸಿದ್ದು, ಇದು ದಾಖಲೆಯಾಗಿದೆ.
ಇಂದು ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ (ಎನ್ಆರ್‌ಎಐ) ಹಿರಿಯ ಆಯ್ಕೆ ಸಮಿತಿಯ ವರ್ಚುವಲ್ ಸಭೆಯ ನಂತರ 15 ಸದಸ್ಯರ ಭಾರತದ ಶೂಟರ್‌ಗಳ ತಂಡವನ್ನು ಪ್ರಕಟಿಸಿದೆ. ತಂಡವು 8 ರೈಫಲ್ ಮತ್ತು 7 ಪಿಸ್ತೂಲ್ ಶೂಟರ್‌ಗಳನ್ನು ಒಳಗೊಂಡಿದೆ.

ಮಹಿಳಾ ಪಿಸ್ತೂಲ್ ಶೂಟರ್ ಮನು ಭಾಕರ್ ಈ ತಂಡದಲ್ಲಿ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸುವ ಏಕೈಕ ಆಟಗಾರ್ತಿಯಾಗಿದ್ದಾರೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು ಮಹಿಳೆಯರ 25 ಮೀಟರ್ ಪಿಸ್ತೂಲ್ ನಲ್ಲಿ ಭಾಗವಹಿಸಲಿದ್ದಾರೆ.
ಎನ್‌ಆರ್‌ಎಐ ಹಿರಿಯ ಉಪಾಧ್ಯಕ್ಷ ಕಾಲಿಕೇಶ್ ನಾರಾಯಣ ಸಿಂಗ್ ದೇವ್ ಮಾತನಾಡಿ, 'ಆಯ್ಕೆ ಸಮಿತಿ ಸಭೆ ನಡೆಸಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಅರ್ಹತೆ ಮತ್ತು ನೀತಿಯ ಪ್ರಕಾರ ನಾವು ಪ್ರಸ್ತುತ ಫಾರ್ಮ್ ಅನ್ನು ಆಧರಿಸಿ ಉತ್ತಮ ತಂಡವನ್ನು ಆಯ್ಕೆ ಮಾಡಿದ್ದೇವೆ.
ತಂಡದ ಉತ್ತಮ ಪ್ರದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂಬ ವಿಶ್ವಾಸ ನಮಗಿದೆ. ರೈಫಲ್ ಮತ್ತು ಪಿಸ್ತೂಲ್‌ನಲ್ಲಿ ನಮ್ಮ ಆಳವನ್ನು ಗಮನಿಸಿದರೆ, ಕೆಲವು ಉತ್ತಮ ಶೂಟರ್‌ಗಳು ತಂಡದ ಭಾಗವಾಗಿಲ್ಲ. ಆದಾಗ್ಯೂ, ಅವರು ಮರಳಿ ಬರುವ ಅವಕಾಶವನ್ನು ಹೊಂದಿದ್ದು, ತಂಡಕ್ಕೆ ಶುಭ ಹಾರೈಸುತ್ತೇವೆ ಎಂದಿದ್ದಾರೆ.
ಇದೇ ವೇಳೆ ಎನ್‌ಆರ್‌ಎಐ ಪ್ರಧಾನ ಕಾರ್ಯದರ್ಶಿ ಕೆ ಸುಲ್ತಾನ್ ಸಿಂಗ್ ಪ್ರತಿಕ್ರಿಯಿಸಿ, 'ತಂಡವು ಉತ್ತಮ ಫಾರ್ಮ್‌ನಲ್ಲಿದ್ದು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸಿದ್ಧವಾಗಿದೆ. ತಂಡದಲ್ಲಿ ನಾಲ್ವರು ಒಲಿಂಪಿಯನ್‌ಗಳು, ಹಿರಿಯ ಶೂಟರ್‌ಗಳು ಮತ್ತು ಅನೇಕ ಯುವ ಪ್ರತಿಭೆಗಳು ಇದ್ದಾರೆ.
ಎಚ್‌ಪಿಡಿ, ವಿದೇಶಿ ತರಬೇತುದಾರರು, ರಾಷ್ಟ್ರೀಯ ತರಬೇತುದಾರರು, ಕ್ರೀಡಾ ವಿಜ್ಞಾನ ತಂಡ, ಫಿಸಿಯೋಗಳು ಇತ್ಯಾದಿಗಳ ಸಂಪೂರ್ಣ ತರಬೇತಿ ತಂಡದ ಮಾರ್ಗದರ್ಶನ ಮತ್ತು ಬೆಂಬಲದಲ್ಲಿ ಆಟಗಾರರಿಗೆ ದೀರ್ಘಕಾಲದವರೆಗೆ ಬಹಳ ವ್ಯವಸ್ಥಿತವಾಗಿ ತರಬೇತಿ ನೀಡುತ್ತಿದ್ದಾರೆ. ಪ್ಯಾರಿಸ್‌ನಲ್ಲಿ ನಮ್ಮ ತಂಡವು ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024ರ ಭಾರತದ ರೈಫಲ್ ಮತ್ತು ಪಿಸ್ತೂಲ್ ತಂಡ
ರೈಫಲ್-
ಸಂದೀಪ್ ಸಿಂಗ್, ಅರ್ಜುನ್ ಬಾಬುತಾ (10 ಮೀ ಏರ್ ರೈಫಲ್ ಪುರುಷರು)
ಎಲವೆನಿಲ್ ವಲರಿವನ್, ರಮಿತಾ (10 ಮೀ ಏರ್ ರೈಫಲ್ ಮಹಿಳೆಯರು)
ಸಿಫ್ಟ್ ಕೌರ್ ಸಮ್ರಾ, ಅಂಜುಮ್ ಮೌದ್ಗಿಲ್ (50 ಮೀ ರೈಫಲ್ 3 ಸ್ಥಾನಗಳು ಮಹಿಳೆಯರು)
ಐಶ್ವರ್ಯಾ ತೋಮರ್, ಸ್ವಪ್ನಿಲ್ ಕುಸಾಲೆ (50 ಮೀ ರೈಫಲ್ 3 ಸ್ಥಾನಗಳು ಪುರುಷರು)
ಪಿಸ್ತೂಲು-
ಸರಬ್ಜೋತ್ ಸಿಂಗ್, ಅರ್ಜುನ್ ಚೀಮಾ (10 ಮೀ ಏರ್ ಪಿಸ್ತೂಲ್ ಮಹಿಳೆಯರು)
ಮನು ಭಾಕರ್, ರಿದಮ್ ಸಾಂಗ್ವಾನ್ (10 ಮೀ ಏರ್ ಪಿಸ್ತೂಲ್ ಮಹಿಳೆಯರು)
ಅನೀಶ್ ಭನ್ವಾಲ್, ವಿಜಯವೀರ್ ಸಿಧು (25 ಮೀ ಆರ್‌ಎಫ್‌ಪಿ ಮಹಿಳೆಯರು)
ಮನು ಭಾಕರ್, ಇಶಾ ಸಿಂಗ್ (25 ಮೀ ಪಿಸ್ತೂಲ್ ಮಹಿಳೆಯರು)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications