ಭಾರತದ ಅಥ್ಲೀಟ್ ಅವಿನಾಶ್ ಸಾಬ್ಲೆ ಇದೇ ಮೊದಲ ಬಾರಿಗೆ ಡೈಮಂಡ್ ಲೀಗ್ ಫೇನಲ್‌ಗೆ ಅರ್ಹತೆ ಪಡೆದುಕೊಂಡಿದ್ದು ಮಹತ್ವದ ಸಾಧನೆ ಮಾಡಿದ್ದಾರೆ. ಶಿಯಾಮೆನ್ ಡೈಮಂಡ್ ಲೀಗ್ 2023ಯಲ್ಲಿ ಅವಿನಾಶ್ ಸಾಬ್ಲೆ 3000ಮೀ. ಸ್ಟೀಪಲ್‌ಚೇಸ್‌ನಲ್ಲಿ ಐದನೆಯವರಾಗಿ ಕೊನೆಯಗೊಳಿಸುವ ಮೂಲಕ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಉಗ್ರೇಟ್ ಸ್ಟೇಡಿಯಂನಲ್ಲಿ ನಡೆದ ಸ್ಪರ್ಧೆಯಲ್ಲಿ ಅವಿನಾಶ್ 8:16:27 ನಿಮಿಷದಲ್ಲಿ ಗುರಿ ತಲುಪಿದ್ದರು. ಈ ಮೂಲಕ ಅಮೆರಿಕಾದ ಯೂಜೀನ್‌ನಲ್ಲಿ ಸೆಪ್ಟೆಂಬರ್ 16 ಮತ್ತು 17ರಲ್ಲಿ ಭಾರತದ ಮತ್ತುಬ್ಬರು ಅಥ್ಲೀಟ್‌ಗಳಾದ ನೀರಜ್ ಚೋಪ್ರ ಹಾಗೂ ಮುರಳಿ ಶ್ರೀಶಂಕರ್ ಅವರನ್ನು ಕೂಡಿಕೊಳ್ಳಲಿದ್ದಾರೆ.

28 ವರ್ಷದ ಸಾಬ್ಲೆ ಅವರು ಹಾಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಸೌಫಿಯಾನ್ ಎಲ್ ಬಕ್ಕಲಿ ಅವರಿಗಿಂತ ಸುಮಾರು ಆರು ಸೆಕೆಂಡುಗಳ ಕಾಲ ಹಿಂದುಳಿದಿದ್ದರು. ಬಕ್ಕಲಿ ಈ ಈವೆಂಟ್ ಅನ್ನು 8:10.31 ಸಮಯದೊಂದಿಗೆ ಗೆದ್ದುಕೊಂಡಿದ್ದಾರೆ. ಇನ್ನು ಇಥಿಯೋಪಿಯಾದ ಸ್ಯಾಮ್ಯುಯೆಲ್ ಫೈರ್ವು 8:11.29 ಸಮಯದೊಂದಿಗೆ ಎರಡನೇ ಸ್ಥಾನ ಪಡೆದರೆ ಕೀನ್ಯಾದ ಅಮೋಸ್ ಸೆರೆಮ್ 8:14.41 ಸೆಕೆಂಡ್‌ಗಳಲ್ಲಿ ಮೂರನೇ ಸ್ಥಾನ ಪಡೆದರು.
ಈ ವರ್ಷದ ಡೈಮಂಡ್ ಲೀಗ್‌ನಲ್ಲಿ ಪುರುಷರ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಇದು ಆರನೇ ಮತ್ತು ಕೊನೆಯ ಸ್ಪರ್ಧೆಯಾಗಿತ್ತು. ಇದರಲ್ಲಿ ಅತ್ಯಧಿಕ ಅಂಕಗಳೊಂದಿಗೆ ಅಗ್ರ ಹತ್ತು ಓಟಗಾರರು ಉಳಿದುಕೊಳ್ಳುತ್ತಾರೆ. ಸಾಬ್ಲೆ 11 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ಭಾರತದ ಕ್ರೀಡಾಪಟುಗಳಾದ ನೀರಜ್ ಚೋಪ್ರಾ ಮತ್ತು ಮುರಳಿ ಶ್ರೀಶಂಕರ್ ಅವರೊಂದಿಗೆ ಫೈನಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೀರಜ್ ಚೋಪ್ರ ಜಾವೆಲಿನ್ ಥ್ರೋ ವಿಭಾಗದಲ್ಲಿ ಹಾಗೂ ಮುರಳಿ ಶ್ಈಶಂಕರ್ ಪುರುಷರ ಲಾಂಗ್ ಜಂಪ್ ಸ್ಪರ್ಧೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ
ನೀರಜ್ ಡೈಮಂಡ್ ಲೀಗ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಗಿದ್ದು 2022ರಲ್ಲಿ ಪ್ರಶಸ್ಸತಿ ಗೆದ್ದಿದ್ದರು. ಈ ವರ್ಷ ಕೂಡ ನೀರಜ್ ಚೋಪ್ರ ಅದ್ಭುತ ಲಯದಲ್ಲಿದ್ದು ಗೆಲುವಿನ ಸರಪಳಿ ಮುಂದುವರಿಸಿದ್ದಾರೆ. ಕಳೆದ ಮೇ 5 ರಂದು ದೋಹಾದಲ್ಲಿ ನಡೆದ ಡೈಮಂಡ್ ಲೀಗ್ ಮೀಟಿಂಗ್‌ನಲ್ಲಿ ಗೆಲುವು ಕಂಡಿದ್ ಅವರು ಬಳಿಕ ವಿಶ್ವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 88.17 ಮೀ ದೂರಕ್ಕೆ ಎಸೆದು ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು.