Paris Paralympics 2024: ಪ್ಯಾರಾ ಸೈಕ್ಲಿಂಗ್‌ನಲ್ಲಿ ಭಾರತ ಯುವ ಅಥ್ಲೀಟ್ ಆರ್ಹತೆ ಪಡೆದು ದಾಖಲೆ!
ಜೂನ್ 20 ಗುರುವಾರ, ಈ ಬಾರಿಯ 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಭಾರತದ ಯುವ ಅಥ್ಲೀಟ್ ಶೇಖ್ ಅರ್ಷದ್ ಅವರು ಸೈಕ್ಲಿಂಗ್‌ನಲ್ಲಿ ಅರ್ಹತೆ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಅಥ್ಲೀಟ್‌ಗಳು ಸೈಕ್ಲಿಂಗ್‌ನಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು. 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಆಗಸ್ಟ್ 28 ರಿಂದ ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ.

ಆಂಧ್ರಪ್ರದೇಶ ಮೂಲದ 30 ವರ್ಷದ ಶೇಖ್ ಅರ್ಷದ್ ಅವರು ಜ್ಯೋತಿ ಗಧೇರಿಯಾ (ಮಹಾರಾಷ್ಟ್ರ) ಅವರೊಂದಿಗೆ ಪ್ಯಾರಾ-ಸೈಕ್ಲಿಂಗ್‌ಗಾಗಿ ಪ್ಯಾರಿಸ್‌ಗೆ ಹೋಗಲಿದ್ದಾರೆ. ಇಲ್ಲಿಯವರೆಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಒಮ್ಮೆಯೂ ಭಾರತವನ್ನು ಯಾರು ಸೈಕ್ಲಿಂಗ್‌ನಲ್ಲಿ ಪ್ರತಿನಿಧಿಸಿರಲಿಲ್ಲ.
ಇತ್ತೀಚೆಗೆ, ಏಷ್ಯನ್ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನ ಎಲೈಟ್ ವೈಯಕ್ತಿಕ ಟೈಮ್ ಟ್ರಯಲ್‌ನ C2 ವಿಭಾಗದಲ್ಲಿ ಜ್ಯೋತಿ ಚಿನ್ನ ಮತ್ತು ಅರ್ಷದ್ ಬೆಳ್ಳಿ ಗೆದಿದ್ದರು. ಇದರೊಂದಿಗೆ ಇಬ್ಬರು ಅಥ್ಲೀಟ್‌ಗಳ ಶ್ರೇಯಾಂಕ ಸುಧಾರಿಸಿ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಆರ್ಹತೆ ಪಡೆಯುವುದರಲ್ಲಿ ಯಶಸ್ವಿಯಾಗಿದ್ದರು.
ಶೇಖ್ ಅರ್ಷದ್ ಜೀವನ ಪಯಣ
ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಶೇಖ್ ಅರ್ಷದ್ (30) ಏಳನೇ ತರಗತಿಯಲ್ಲಿದ್ದಾಗ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಇದರಿಂದಾಗಿ ಅವರು ಮೊಣಕಾಲಿನವರೆಗೆ ತಮ್ಮ ಕಾಲು ಕಳೆದುಕೊಂಡರು.
ಬಳಿಕ ಶಿಕ್ಷಣದ ಕಡೆ ಗಮನ ಹರಿಸಿದರೆ ವಿಶೇಷಚೇತರ ಕೋಟಾದಲ್ಲಿ ಸರ್ಕಾರಿ ನೌಕರಿ ಸಿಗುತ್ತದೆ ಎಂದು ಅರ್ಷದ್ ಅವರ ತಂದೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು. ಅರ್ಷದ್ ಒಂದೆಡೆ ಓದುತ್ತಲೇ ಮತ್ತೊಂದೆಡೆ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಜೊತೆಗೆ ಕರ್ನೂಲ್ ಜಿಲ್ಲೆಯಲ್ಲಿ ಇಂಟರ್ ಮೀಡಿಯೇಟ್ ವರೆಗೆ ಓದಿದ್ದಾರೆ.
ಇದಾದ ನಂತರ ಅರ್ಷದ್ ಪದವಿ ಶಿಕ್ಷಣಕ್ಕಾಗಿ 2017ರಲ್ಲಿ ವಿಜಯವಾಡಕ್ಕೆ ತೆರಳಿದ್ದರು. ಆದರೆ, ಆರ್ಥಿಕ ಸಂಕಷ್ಟದಿಂದ ಮತ್ತೆ ನಂದ್ಯಾಲಕ್ಕೆ ಬಂದು ಹೋಟೆಲ್ ನಲ್ಲಿ ಕೆಲಸ ಆರಂಭಿಸಿದ್ದರು. ಬಳಿಕ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿ ಸೇರಿಕೊಂಡರು.
ಅಲ್ಲಿ ಕೆಲಸ ಮಾಡುವವರ ಪ್ರೋತ್ಸಾಹದಿಂದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅರ್ಷದ್ ಅತ್ಯುತ್ತಮ ಪ್ರದರ್ಶನ ನೀಡಿದರು. ಆದಿತ್ಯ ಮೆಹ್ತಾ ಫೌಂಡೇಶನ್‌ಗೆ ಸೇರಿದ ನಂತರ, ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ಯಾರಾ-ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications