Paralympics 2024: ಶನಿವಾರ ಎರಡು ಪದಕದ ನಿರೀಕ್ಷೆಯಲ್ಲಿ ಭಾರತ
ಭಾರತದ ಅಥ್ಲೀಟ್‌ಗಳು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಐತಿಹಾಸಿದ ಸಾಧನೆಯತ್ತ ದಾಪುಗಾಲು ಇಟ್ಟಿದ್ದಾರೆ. ಇತಿಹಾಸದಲ್ಲೇ ಅತಿ ಹೆಚ್ಚು ಪ್ಯಾರಾಲಿಂಪಿಕ್ಸ್ ಪದಕಗಳನ್ನು ಪಡೆದಿರುವ ಭಾರತ ತಂಡ, ತನ್ನ ಸಾಧನೆಯನ್ನು ಉತ್ತಮ ಗೊಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಶುಕ್ರವಾರ ನಡೆದ ಕ್ರೀಡಾ ಕೂಟದಲ್ಲಿ ಭಾರತದ ಅಥ್ಲೀಟ್‌ಗಳು ಪದಕದ ಬೇಟೆಯನ್ನು ಮುಂದುವರೆಸಿದ್ದು, ಶನಿವಾರ ಈ ಸಾಧನೆಯನ್ನು ಮುಂದುವರೆಸುವ ವಿಶ್ವಾಸವನ್ನು ಹೊಂದಿದೆ.
ಶನಿವಾರ ನಡೆಯುವ ಕ್ರೀಡಾ ಕೂಟದಲ್ಲಿ ಭಾರತ ಎರಡು ಪದಕಗಳನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಪುರುಷರ ಜಾವೆಲಿನ್ ಥ್ರೊ ಎಫ್41 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಸಾಧನೆ ಮಾಡಿರುವ ನವದೀಪ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು ತಮ್ಮ ಮೊದಲ ಪ್ಯಾರಾಲಿಂಪಿಕ್ಸ್ ಪದಕವನ್ನು ಪಡೆಯುವ ಕನಸಿನಲ್ಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಇವರು ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ನವದೀಪ್ ಅವರನ್ನು ಬಿಟ್ಟಂತೆ ಎಲ್ಲರ ಚಿತ್ತ ಸಿಮ್ರನ್ ಶರ್ಮಾ ಅವರ ಮೇಲೆ ನೆಟ್ಟಿದೆ. ಇವರು ಮಹಿಳೆಯರ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಕಣಕ್ಕೆ ಇಳಿಯಲಿದ್ದು, ಪದಕದ ಆಸೆಯನ್ನು ಚಿಗುರಿಸಿದ್ದಾರೆ. ಇವರು ಮಹಿಳೆಯರ 100 ಮೀಟರ್ ವಿಭಾಗದಲ್ಲಿ ಕೊಂಚದಲ್ಲಿ ಪದಕವನ್ನು ಕೈ ಚೆಲ್ಲಿದರು.
ಭಾರತದ ಇಂದಿನ ಕ್ರೀಡಾಕೂಟಗಳು
ಮಧ್ಯಾಹ್ನ 1:00: ಈಜು, ಸುಯಶ್ ಜಾಧವ್ - ಪುರುಷರ 50 ಮೀ ಬಟರ್‌ಫ್ಲೈ ಎಸ್7 ಫೈನಲ್
ಮಧ್ಯಾಹ್ನ1:00: ಸೈಕ್ಲಿಂಗ್, ಪುರುಷರ ರೋಡ್ ರೇಸ್ ಸಿ1-ಸಿ3 ಫೈನಲ್
ಮಧ್ಯಾಹ್ನ1:00: ಸೈಕ್ಲಿಂಗ್, ಮಹಿಳೆಯರ ರೋಡ್ ರೇಸ್ ಸಿ1-ಸಿ3 ಫೈನಲ್
ಮಧ್ಯಾಹ್ನ 1:30: ದೋಣಿ, ಪುರುಷರ ಕಯಾಕ್ ಸಿಂಗಲ್ 200ಮೀಟರ್ ಕೆಎಲ್1 ಸೆಮಿಫೈನಲ್
ಮಧ್ಯಾಹ್ನ 1:55: ಈಜು, ಪುರುಷರ 50ಮೀಟರ್ ಬಟರ್‌ಫ್ಲೈ ಎಸ್7 ಹೀಟ್ಸ್
ಮಧ್ಯಾಹ್ನ 1:58: ಕ್ಯಾನೋ, ಮಹಿಳೆಯರ ವಾ' ಸಿಂಗಲ್ 200ಮೀಟರ್ ವಿಎಲ್2 ಸೆಮಿಫೈನಲ್‌ಗಳು
ಮಧ್ಯಾಹ್ನ 2:50: ದೋಣಿ ಸ್ಪರ್ಧೆ (canoe), ಪುರುಷರ ಕಯಾಕ್ ಸಿಂಗಲ್ 200ಮೀಟರ್ ಕೆಎಲ್1 ಫೈನಲ್
ಮಧ್ಯಾಹ್ನ 3:14: ದೋಣಿ ಸ್ಪರ್ಧೆ (canoe), ಮಹಿಳೆಯರ ವಾ' ಸಿಂಗಲ್ 200ಮೀಟರ್ ವಿಎಲ್2 ಫೈನಲ್ ಬಿ
ಮಧ್ಯಾಹ್ನ 3:22 ಮಹಿಳೆಯರ ವಾ' ಸಿಂಗಲ್ 200ಮೀಟರ್ ವಿಎಲ್2 ಫೈನಲ್
ರಾತ್ರಿ 10:30: ಅಥ್ಲೆಟಿಕ್ಸ್, ಪುರುಷರ ಜಾವೆಲಿನ್ ಥ್ರೋ ಎಫ್41 ಫೈನಲ್
ರಾತ್ರಿ 11:03: ಅಥ್ಲೆಟಿಕ್ಸ್, ಮಹಿಳೆಯರ 200ಮೀಟರ್ ಟಿ12 ಫೈನಲ್
ರಾತ್ರಿ 12:29 Aಮೀಟರ್ , ಅಥ್ಲೆಟಿಕ್ಸ್, ಪುರುಷರ 400ಮೀಟರ್ ಟಿ47 ಫೈನಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications