For Quick Alerts
ALLOW NOTIFICATIONS  
For Daily Alerts

Paris Diamond League 2024: ಭಾರತದ ಅಥ್ಲೀಟ್‌ಗಳು ಸ್ಪರ್ಧೆ; ಲೈವ್ ಸ್ಟ್ರೀಮಿಂಗ್‌ ಯಾವಾಗ, ಎಲ್ಲಿ?

ಜುಲೈ 6 ಶನಿವಾರ, 2024ರ ವಂಡಾ ಡೈಮಂಡ್ ಲೀಗ್‌ನ 8ನೇ ಕ್ರೀಡಾಕೂಟ ಭಾನುವಾರ ಫ್ರಾನ್ಸ್‌ನ ಪ್ಯಾರಿಸ್‌ ಚಾರ್ಲೊಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ಸ್‌ 2024ಕ್ಕೆ ಅರ್ಹತೆ ಪಡೆದಿರುವ ಕಿಶೋರ್ ಜೆನಾ ಮತ್ತು ಅವಿನಾಶ್ ಸೇಬಲ್ ಅವರು ಪ್ರೀಮಿಯರ್ ಟ್ರ್ಯಾಕ್ ಮತ್ತು ಫೀಲ್ಡ್ ಮೀಟ್‌ನಲ್ಲಿ ಭಾಗವಹಿಸಲಿದ್ದಾರೆ.

ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಕಿಶೋರ್ ಜೆನಾ ಅವರು ಆಂಡರ್ಸನ್ ಪೀಟರ್ಸ್ (ಗ್ರೆನಡಾ), ಟೋಕಿಯೊ 2020 ರ ಬೆಳ್ಳಿ ಪದಕ ವಿಜೇತ ಜಾಕುಬ್ ವಡ್ಲೆಜ್ (ಜೆಕ್ ರಿಪಬ್ಲಿಕ್), ಜೂಲಿಯನ್ ವೆಬರ್ (ಜರ್ಮನಿ) ಮತ್ತು ಅರ್ಷದ್ ನದೀಮ್ (ಪಾಕಿಸ್ತಾನ) ರಂತಹ ಆಥ್ಲೀಟ್ಸ್‌ ವಿರುದ್ಧ ಸ್ಪರ್ಧಿಸಲಿದ್ದಾರೆ.

Indian athletes Avinash Sable Kishore Jena to compete in Paris Diamond League 2024

ಅವಿನಾಶ್ ಸೇಬಲ್ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ 17 ಓಟಗಾರರ ವಿರುದ್ಧ ಪ್ರಬಲ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ. ಸ್ಪರ್ಧೆಯಲ್ಲಿ ಸೈಮನ್ ಕಿಪ್ರಾಪ್ ಕೋಚ್ (ಕೀನ್ಯಾ), ಅಬ್ರಹಾಂ ಕಿಬಿವೊಟೆ (ಕೀನ್ಯಾ), ರ್ಯುಜಿ ಮಿಯುರಾ (ಜಪಾನ್) ಮತ್ತು ಡೇನಿಯಲ್ ಆರ್ಸ್ (ಸ್ಪೇನ್) ಇದ್ದಾರೆ.

ಪುರುಷರ ಪೋಲ್ ವಾಲ್ಟ್ ಈವೆಂಟ್‌ನಲ್ಲಿ ಸ್ವೀಡಿಷ್ ಪೋಲ್ ವಾಲ್ಟ್ ಸೆನ್ಸೇಶನ್ ಅರ್ಮಾಂಡ್ ಡುಪ್ಲಾಂಟಿಸ್ ಭಾಗವಹಿಸಲಿದ್ದು, ಈ ಋತುವಿನ ಕ್ಸಿಯಾಮೆನ್ ಈವೆಂಟ್‌ನಲ್ಲಿ ಹೊಸ ವಿಶ್ವ ದಾಖಲೆಯನ್ನು (6.24 ಮೀ) ನಿರ್ಮಿಸಿದ್ದಾರೆ. ಇವರೊಂದಿಗೆ ಐದು ಒಲಿಂಪಿಕ್ ಚಾಂಪಿಯನ್‌ಗಳು, ಆರು ವಿಶ್ವ ಚಾಂಪಿಯನ್‌ಗಳು ಮತ್ತು 12 ಹಾಲಿ ಯುರೋಪಿಯನ್ ಚಾಂಪಿಯನ್‌ಗಳು ಪ್ಯಾರಿಸ್‌ನಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.

ಈ ಹಿಂದೆಯೇ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಪ್ಯಾರಿಸ್ ಡೈಮಂಡ್ ಲೀಗ್ ತನ್ನ ಕ್ಯಾಲೆಂಡರ್‌ನ ಭಾಗವಾಗಿಲ್ಲ. ಪ್ಯಾರಿಸ್ ಒಲಿಂಪಿಕ್ಸ್‌ಗೆ ತಯಾರಿ ನಡೆಸುವುದರತ್ತ ಗಮನ ಹರಿಸುವುದಾಗಿ ಸ್ಪಷ್ಟಪಡಿಸಿದ್ದರು. ಹೀಗಾಗಿ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ನೀರಜ್‌ ಚೋಪ್ರಾ ಭಾಗವಹಿಸುತ್ತಿಲ್ಲ.

Indian athletes Avinash Sable Kishore Jena to compete in Paris Diamond League 2024

ಪ್ಯಾರಿಸ್ ಡೈಮಂಡ್ 2024ರ ಈವೆಂಟ್‌ಗಳು

ಪುರುಷರು: ಪೋಲ್ ವಾಲ್ಟ್, ಜಾವೆಲಿನ್ ಥ್ರೋ, 110 ಮೀ ಹರ್ಡಲ್ಸ್, 400 ಮೀ ಹರ್ಡಲ್ಸ್, 200 ಮೀ, 800 ಮೀ, 3000 ಮೀ ಸ್ಟೀಪಲ್ ಚೇಸ್

ಮಹಿಳೆಯರು: ಹೈ ಜಂಪ್, ಡಿಸ್ಕಸ್ ಥ್ರೋ, ಲಾಂಗ್ ಜಂಪ್, 100ಮೀ, 400ಮೀ, 1500ಮೀ, 3000ಮೀ ಸ್ಟೀಪಲ್ ಚೇಸ್

ಪ್ಯಾರಿಸ್ ಡೈಮಂಡ್ ಲೀಗ್ 2024ರ ಯಾವಾಗ ಆರಂಭ

ಯಾವಾಗ: ಜುಲೈ 7, 2024

ಎಲ್ಲಿ: ಷಾರ್ಲೆಟ್ ಸ್ಟೇಡಿಯಂ, ಪ್ಯಾರಿಸ್, ಫ್ರಾನ್ಸ್‌

ಸಮಯ: ಸಂಜೆ 7:30 ರಿಂದ ಆರಂಭ

ಭಾರತದಲ್ಲಿ ಲೈವ್ ಸ್ಟ್ರೀಮಿಂಗ್: JioCinema

ಭಾರತದಲ್ಲಿ ಟಿವಿ ಪ್ರಸಾರ: Sports18 - 3

Story first published: Saturday, July 6, 2024, 23:49 [IST]
Other articles published on Jul 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+