ಪ್ಯಾರೀಸ್: ಭಾರತದ ಅಥ್ಲೀಟ್‌ಗಳು ಶುಕ್ರವಾರ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕದ ಬೇಟೆ ನಡೆಸುವ ಸಾಧ್ಯತೆ ಇದೆ. ಪ್ರಸಕ್ತ ಕ್ರೀಡಾ ಕೂಟದಲ್ಲಿ ಭಾರತ ಪದಕಗಳ ಸಂಖ್ಯೆಯನ್ನು 30ಕ್ಕೆ ಏರಿಸಿಕೊಳ್ಳುವತ್ತ ಅಥ್ಲಿಟ್‌ಗಳು ಚಿತ್ತ ನೆಟ್ಟಿದ್ದಾರೆ. ಸದ್ಯ ಭಾರತದ ಬುಟ್ಟಿಯಲ್ಲಿ 5 ಚಿನ್ನ ಸೇರಿದಂತೆ ಒಟ್ಟು 25 ಪದಕಗಳು ಇವೆ.
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ 9ನೇ ದಿನ ಭಾರತೀಯ ಅಥ್ಲೀಟ್ ಪ್ರವೀಣ್ ಕುಮಾರ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆಯನ್ನು ಪುರುಷರ ಟಿ64 ಹೈ ಜಂಪ್ ವಿಭಾಗದಲ್ಲಿ ಮಾಡಿದ್ದರು. ಅಲ್ಲದೆ ಕೊಂಚದರಲ್ಲಿ ಚಿನ್ನದ ಪದಕವನ್ನು ವಂಚಿತರಾಗಿದ್ದರು. ಈ ವರ್ಷ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರವೀಣ್ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ಇವರು ಇಂದು ಅಖಾಡ ಪ್ರವೇಶಿಸಲಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನಾಗಲ್ಯಾಂಡ್‌ನ ಹೊಕಾಟೊ ಹೊಟೊಜೆ ಸೆಮಾ ಮತ್ತು ಸೋಮನ್ ರಾಣಾ ಅವರ ಮೇಲೆ ಭರವಸೆ ಹೆಚ್ಚಿದೆ.
ಮಧ್ಯಾಹ್ನ 1:30 : ಕ್ಯಾನೋಯಿಂಗ್ - ಪುರುಷರ ಕಯಾಕ್ ಸಿಂಗಲ್ 200 ಮೀಟರ್ ಕೆಎಲ್ 1 ಹೀಟ್
ಮಧ್ಯಾಹ್ನ 1:38 : ಅಥ್ಲೆಟಿಕ್ಸ್ - ಮಹಿಳೆಯರ 200 ಮೀಟರ್ ಟಿ12 ಅರ್ಹತೆ 1
ಮಧ್ಯಾಹ್ನ 1:50 : ಕ್ಯಾನೋಯಿಂಗ್ - ಮಹಿಳೆಯರ ವಾ' ಸಿಂಗಲ್ 200 ಮೀಟರ್ ವಿಎಲ್ 2 ಹೀಟ್ಸ್
ಮಧ್ಯಾಹ್ನ 2:07 : ಅಥ್ಲೆಟಿಕ್ಸ್ - ಪುರುಷರ ಜಾವೆಲಿನ್ ಥ್ರೋ ಎಫ್ 54 ಫೈನಲ್
ಮಧ್ಯಾಹ್ನ 2:50 : ಅಥ್ಲೆಟಿಕ್ಸ್, ಪುರುಷರ 400 ಮೀಟರ್ ಟಿ47 ರೌಂಡ್ 1
ಮಧ್ಯಾಹ್ನ 2:55 : ಕ್ಯಾನೋಯಿಂಗ್, ಮಹಿಳೆಯರ ಕಯಾಕ್ ಸಿಂಗಲ್ 200 ಮೀಟರ್ ಕೆಎಲ್ 1 ಹೀಟ್ಸ್
ಮಧ್ಯಾಹ್ನ 3:21 : ಅಥ್ಲೆಟಿಕ್ಸ್, ಪುರುಷರ ಹೈ ಜಂಪ್ ಟಿ 64 ಫೈನಲ್
ರಾತ್ರಿ 8:30 : ಪವರ್‌ಲಿಫ್ಟಿಂಗ್, ಮಹಿಳೆಯರ 67 ಕೆಜಿ ಫೈನಲ್
ರಾತ್ರಿ 10:30 : ಅಥ್ಲೆಟಿಕ್ಸ್ , ಮಹಿಳೆಯರ ಜಾವೆಲಿನ್ ಥ್ರೋ ಎಫ್ 46 ಫೈನಲ್
ರಾತ್ರಿ 10:34 : ಅಥ್ಲೆಟಿಕ್ಸ್, ಪುರುಷರ ಶಾಟ್ ಪುಟ್ ಎಫ್ 57 ಫೈನಲ್
ರಾತ್ರಿ 11:12 : ಅಥ್ಲೆಟಿಕ್ಸ್, ಮಹಿಳೆಯರ 200 ಮೀಟರ್ ಟಿ12 ಸೆಮಿಫೈನಲ್