ಆಗಸ್ಟ್ 4 ಭಾನುವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಾಳೆ (ಸೋಮವಾರ) ಭಾರತ ಪದಕ ಗೆಲ್ಲವ ಅವಕಾಶಗಳನ್ನ ಹೊಂದಿದೆ. ಯುವ ಬ್ಯಾಡ್ಮಿಂಟನ್ ತಾರೆ ಲಕ್ಷ್ಯಸೇನ್ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.
ಇದಲ್ಲದೆ ಓಟ, ಸೇಲಿಂಗ್, ಟೇಬಲ್ ಟೆನ್ನಿಸ್ ಮತ್ತು ಶೂಟಿಂಗ್ ಸ್ಪರ್ಧೆಗಳಲ್ಲಿ ಭಾರತದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಆಗಸ್ಟ್ 5 ರಂದು ಭಾರತದ ಅಥ್ಲೀಟ್ಸ್ ಸ್ಫರ್ಧಿಸಲಿರುವ ವೇಳಾಪಟ್ಟಿ ಬಗ್ಗೆ ಮಾಹಿತಿ ಇಲ್ಲಿದೆ.

ಶೂಟಿಂಗ್: ಸ್ಕೀಟ್ ಮಿಶ್ರ ತಂಡ ಅರ್ಹತಾ ಪಂದ್ಯಗಳು- ಮಧ್ಯಾಹ್ನ 12.30 ಗಂಟೆಗೆ
ಟೇಬಲ್ ಟೆನಿಸ್: ಮಹಿಳಾ ತಂಡ ವಿಭಾಗ- ಮಧ್ಯಾಹ್ನ 1.30 ಗಂಟೆಗೆ
ಓಟ: ಮಹಿಳೆಯರ 400 ಮೀಟರ್ ಮೊದಲ ಸುತ್ತು - ಕಿರಣ್ ಪಹಲ್ - ಮಧ್ಯಾಹ್ನ 3.25 ಗಂಟೆಗೆ
ಸೇಲಿಂಗ್: ಮಹಿಳೆಯರ ಡಿಂಘಿ- ರೇಸಿಂಗ್- ನೇತ್ರಾ ಕುಮನನ್- ಮಧ್ಯಾಹ್ನ 3.45 ಗಂಟೆಗೆ
ಪುರುಷರ ಡಿಂಘಿ - ರೇಸಿಂಗ್ - ವಿಷ್ಣು ಸರವಣನ್- ಸಂಜೆ 6.10 ಗಂಟೆಗೆ
ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್ - ಕಂಚಿನ ಪದಕ ಪಂದ್ಯ - ಲಕ್ಷ್ಯಸೇನ್- ಸಂಜೆ 6.00 ಗಂಟೆಗೆ
ಅಥ್ಲೆಟಿಕ್ಸ್: ಪುರುಷರ ಸ್ಟೀಪಲ್ ಚೇಸ್ 3000 ಮೀಟರ್ ಮೊದಲ ಸುತ್ತು - ಅವಿನಾಶ್ ಮುಕುಂದ್- ರಾತ್ರಿ 11.34 ಗಂಟೆಗೆ