Pairs Olympics 2024: ಆಗಸ್ಟ್ 10 ರ ಭಾರತದ ಅಥ್ಲೀಟ್ಸ್ ಸ್ಪರ್ಧೆಗಳು; ವೇಳಾಪಟ್ಟಿ ತಿಳಿಯಿರಿ
ಆಗಸ್ಟ್ 9 ಶುಕ್ರವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್ ಇನ್ನೆರಡು ದಿನಗಳಲ್ಲಿ ಮುಕ್ತಾಯವಾಗಲಿದೆ. ಬಹುತೇಕ ಭಾರತೀಯ ಅಥ್ಲೀಟ್ಸ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹೊರಗುಳಿದಿದ್ದಾರೆ. ಆರಂಭದಲ್ಲಿ ಮೂರು ಕಂಚಿನ ಪದಕಗಳನ್ನು ಗೆದ್ದಿದ ಭಾರತ ನಂತರ ಸತತವಾಗಿ ಅಂತಿಮ ಘಟ್ಟದಲ್ಲಿ ಅಥ್ಲೀಟ್ಸ್ ಎಡುವಿದರು. ಹೀಗಾಗಿ ಭಾರತ ಮೂರ್ನಾಲ್ಕು ಪದಕಗಳನ್ನು ಕಳೆದುಕೊಂಡಿದೆ.
ಇದೀಗ ಉಳಿದಿರುವ ಎರಡು ದಿನಗಳಲ್ಲಿ ಭಾರತ ಕೇವಲ ಕುಸ್ತಿಪಟು ಮತ್ತು ಇಬ್ಬರು ಗಾಲ್ಫ್ ಆಟಗಾರರ ಮೇಲೆ ಪದಕದ ನೀರಿಕ್ಷೆಯಲ್ಲಿದೆ. 13ನೇ ದಿನದಂದು ಎರಡು ಪದಕಗಳನ್ನು ಭಾರತ ಗೆದ್ದ ನಂತರ ಪದಕಗಳ ಸಂಖ್ಯೆ 5 ಕ್ಕೇರಿದೆ. ಕುಸ್ತಿಪಟು ಅಮನ್ ಸೆಹ್ರಾವತ್ ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಸ್ಪರ್ಧಿಸಲಿದ್ದು, ಪದಕಗಳ ಸಂಖ್ಯೆ 6ಕ್ಕೆ ಏರು ಸಾಧ್ಯತೆಗಳಿವೆ.

ಮಹಿಳೆಯರ 76 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ರಿತಿಕಾ ಹೂಡಾ ಅವರು ಫೈನಲ್ ತಲುಪಿದರೆ ಭಾರತಕ್ಕೆ ಪದಕ ಖಚಿತವಾಗಲಿದೆ. ಸೆಮಿಫೈನಲ್‌ನಲ್ಲಿ ರಿತಿಕಾ ಸೋತರೂ ಪ್ಯಾರಿಸ್ ಒಲಿಂಪಿಕ್ಸ್‌ನ ಅಂತಿಮ ದಿನದಂದು ಭಾರತ ಮತ್ತೊಂದು ಸವಾಲನ್ನು ಎದುರಿಸಲಿದೆ. ಮತ್ತೊಂದೆಡೆ ಗಾಲ್ಫ್ ಆಟಗಾರರಾದ ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಅವರ ಮೇಲೂ ಹೆಚ್ಚಿನ ನಿರೀಕ್ಷೆಯಿದೆ. 15ನೇ ದಿನದಂದು ಭಾರತದ ವೇಳಾಪಟ್ಟಿಯನ್ನು ತಿಳಿಯಿರಿ.
ಗಾಲ್ಫ್: ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 4- ಅದಿತಿ ಅಶೋಕ್, ದೀಕ್ಷಾ ದಾಗರ್- ಮಧ್ಯಾಹ್ನ 12:30 ಗಂಟೆಗೆ
ಕುಸ್ತಿ: ಮಹಿಳೆಯರ 76 ಕೆಜಿ ಫ್ರೀಸ್ಟೈಲ್ 1/8 ಫೈನಲ್ಸ್ - ರಿತಿಕಾ ಹೂಡಾ vs ಬರ್ನಾಡೆಟ್ ನಾಗಿ (ಹಂಗೇರಿ)- ಮಧ್ಯಾಹ್ನ 3 ಗಂಟೆಗೆ
ಕುಸ್ತಿ: ಮಹಿಳೆಯರ 76 ಕೆಜಿ ಫ್ರೀಸ್ಟೈಲ್ 1/4 ಫೈನಲ್ಸ್ (ಅರ್ಹತೆ ಪಡೆದರೆ)- ರಿತಿಕಾ ಹೂಡಾ vs ಐಪೆರಿ ಮೆಡೆಟ್ ಕೈಜಿ (ಕಿರ್ಗಿಸ್ತಾನ್) ಅಥವಾ ವಾಂಗ್ ಜುವಾನ್ (ಚೀನಾ)- ಸಂಜೆ 4:20 ಮಧ್ಯಾಹ್ನ
ಕುಸ್ತಿ: ಮಹಿಳೆಯರ 76 ಕೆಜಿ ಫ್ರೀಸ್ಟೈಲ್ ಸೆಮಿಫೈನಲ್ (ಅರ್ಹತೆ ಪಡೆದರೆ)- ರಿತಿಕಾ ಹೂಡಾ vs ನಿರ್ಧರಿಸಲಾಗುವುದು- ರಾತ್ರಿ 10:25 ಅಥವಾ 10:35 ಗಂಟೆಗೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications