ಆಗಸ್ಟ್ 5 ಸೋಮವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನ 11ನೇ ದಿನವಾದ ನಾಳೆ (ಮಂಗಳವಾರ) ಭಾರತ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ಇದುವರೆಗೆ ಭಾರತ ಕೇವಲ ಮೂರು ಕಂಚಿನ ಪದಕಗಳನ್ನು ಮಾತ್ರ ತನ್ನ ಖಾತೆಯಲ್ಲಿ ಹೊಂದಿದೆ.
ಭಾರತಕ್ಕೆ ಆಗಸ್ಟ್ 6 ರಂದು ನಡೆಯಲಿರುವ ಕುಸ್ತಿಯಲ್ಲಿ ಬೆಳ್ಳಿ ಅಥವಾ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಹೆಚ್ಚಾಗಿದೆ. ಕುಸ್ತಿ ಮಾತ್ರವಲ್ಲದೆ, ಬಹು ನಿರೀಕ್ಷಿತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಕೂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತಮ್ಮ ಅಭಿಯಾನ ಆರಂಭಿಸಲು ಸಜ್ಜಾಗಿದ್ದಾರೆ.

ಈ ಸ್ಪರ್ಧೆಯಲ್ಲಿ ಅರ್ಹತೆ ಪಡೆದರೆ ಅಂತಿಮ ಸುತ್ತಿಗೆ ನೀರಜ್ ಚೋಪ್ರಾ ಮುನ್ನಡೆಯಲಿದ್ದಾರೆ. ಈ ಎಲ್ಲಾ ಸ್ಪರ್ಧೆಗಳು ನಡೆಯುವ ಸಮಯದ ಬಗ್ಗೆ ಇಲ್ಲಿ ಮಾಹಿತಿ ತಿಳಿಯಿರಿ.
ಟೇಬಲ್ ಟೆನ್ನಿಸ್: ಪುರುಷರ ತಂಡ (16 ರ ರೌಂಡ್) - ಭಾರತ vs ಚೀನಾ - ಮಧ್ಯಾಹ್ನ 1:30 ಗಂಟೆಗೆ
ಅಥ್ಲೆಟಿಕ್ಸ್: ಪುರುಷರ ಜಾವೆಲಿನ್ ಥ್ರೋ ಅರ್ಹತಾ ಪಂದ್ಯ - ಗುಂಪು ಎ - ಕಿಶೋರ್ ಜೆನಾ- ಮಧ್ಯಾಹ್ನ 1:50 ಗಂಟೆಗೆ
ಕುಸ್ತಿ: ಮಹಿಳೆಯರ 68 ಕೆಜಿ ಫ್ರೀಸ್ಟೈಲ್ ರೆಪೆಚೇಜ್ (ಅರ್ಹತೆ ಪಡೆದರೆ) - ನಿಶಾ ದಹಿಯಾ- ಮಧ್ಯಾಹ್ನ 2:30 ಗಂಟೆಗೆ
ಅಥ್ಲೆಟಿಕ್ಸ್ : ಮಹಿಳೆಯರ 400 ಮೀಟರ್ ರೆಪೆಚೇಜ್ - ಹೀಟ್ 1- ಕಿರಣ್ ಪಹಲ್- ಮಧ್ಯಾಹ್ನ 2:50 ಗಂಟೆಗೆ
ಕುಸ್ತಿ: ಮಹಿಳೆಯರ 50 ಕೆಜಿ ಫ್ರೀಸ್ಟೈಲ್ - 1/8 ಸ್ಪರ್ಧೆ - ವಿನೇಶ್ ಫೋಗಟ್- ಮಧ್ಯಾಹ್ನ 3 ಗಂಟೆಗೆ
ಅಥ್ಲೆಟಿಕ್ಸ್: ಪುರುಷರ ಜಾವೆಲಿನ್ ಥ್ರೋ ಅರ್ಹತೆ - ಗುಂಪು ಎ - ನೀರಜ್ ಚೋಪ್ರಾ- ಮಧ್ಯಾಹ್ನ 3:20 ಗಂಟೆಗೆ
ಕುಸ್ತಿ: ಮಹಿಳೆಯರ 50 ಕೆಜಿ ಫ್ರೀಸ್ಟೈಲ್ - ಕ್ವಾರ್ಟರ್ ಫೈನಲ್ಸ್ (ಅರ್ಹತೆ ಪಡೆದರೆ) - ವಿನೇಶ್ ಫೋಗಟ್- ಸಂಜೆ 4:20 ಗಂಟೆಗೆ
ಟೇಬಲ್ ಟೆನ್ನಿಸ್: ಮಹಿಳಾ ತಂಡ ಕ್ವಾರ್ಟರ್ ಫೈನಲ್ - ಭಾರತ vs ಯುಎಸ್‌ಎ ಅಥವಾ ಜರ್ಮನಿ- ಸಂಜೆ 6:30 ಅಥವಾ ರಾತ್ರಿ 11:30 ಗಂಟಗೆ
ಕುಸ್ತಿ: ಮಹಿಳೆಯರ 50 ಕೆಜಿ ಫ್ರೀಸ್ಟೈಲ್ - ಸೆಮಿ-ಫೈನಲ್ (ಅರ್ಹತೆ ಪಡೆದರೆ)- ವಿನೇಶ್ ಫೋಗಟ್- ರಾತ್ರಿ 10:25 ಗಂಟೆಗೆ
ಹಾಕಿ: ಪುರುಷರ ಸೆಮಿಫೈನಲ್ - ಭಾರತ vs ಜರ್ಮನಿ- ರಾತ್ರಿ 10:30 ಗಂಟೆಗೆ
ಕುಸ್ತಿ : ಮಹಿಳೆಯರ 68 ಕೆಜಿ ಫ್ರೀಸ್ಟೈಲ್ - ಕಂಚಿನ ಪದಕ ಪಂದ್ಯ (ಅರ್ಹತೆ ಪಡೆದರೆ) - ನಿಶಾ ದಹಿಯಾ- ಆಗಸ್ಟ್ 7 ರಂದು ಬೆಳಗಿನ ಜಾವ- 12:20 AM
ಕುಸ್ತಿ: ಮಹಿಳೆಯರ 68 ಕೆಜಿ ಫ್ರೀಸ್ಟೈಲ್ ಚಿನ್ನದ ಪದಕ ಪಂದ್ಯ (ಅರ್ಹತೆ ಪಡೆದರೆ)- ನಿಶಾ ದಹಿಯಾ- 12:45 AM