Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಒಲಿಂಪಿಕ್ಸ್‌ನಲ್ಲಿ 13ನೇ ದಿನದ ಭಾರತದ ವೇಳಾಪಟ್ಟಿ; ನೀರಜ್ ಚೋಪ್ರಾ, ಹಾಕಿ ತಂಡದ ಸ್ಪರ್ಧೆ ಯಾವಾಗ?

ಆಗಸ್ಟ್ 8 ಗುರುವಾರ, ಭಾರತೀಯ ಕ್ರೀಡಾಭಿಮಾನಿಗಳಿಗೆ ಪ್ಯಾರಿಸ್ ಒಲಿಂಪಿಕ್ಸ್‌ 2024ರ 12ನೇ ದಿನ ದುಃಖಕರವಾಗಿತ್ತು. ಮಹಿಳೆಯರ 50 ಕೆಜಿ ಕುಸ್ತಿ ಪಂದ್ಯದ ಫೈನಲ್‌ಗೆ ತಲುಪಿದ್ದ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ತೂಕ ಹೆಚ್ಚಾದ ಕಾರಣ ಸ್ಪರ್ಧೆಯಿಂದ ಅನರ್ಹಗೊಂಡಿದ್ದರು. ಇದರಿಂದಾಗಿ ಕುಸ್ತಿಯಲ್ಲಿ ಬಂಗಾರದ ನಿರೀಕ್ಷೆಯಲ್ಲಿದ್ದ ಭಾರತೀಯರ ಕನಸು ಭಗ್ನಗೊಂಡಿತ್ತು.

ಆದರೆ 13ನೇ ದಿನವಾದ ಇಂದು (ಗುರುವಾರ) ನೀರಜ್ ಚೋಪ್ರಾ ಹಾಗೂ ಭಾರತ ಹಾಕಿ ತಂಡದಿಂದ ಪದಕದ ನಿರೀಕ್ಷೆಯಿದೆ. ಈ ಸ್ಪರ್ಧೆಗಳು ಯಾವಾಗ ನಡೆಯಲಿವೆ ಎಂಬುದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

Indian athletes schedule for August 8 of Paris Olympics 2024

ಆಗಸ್ಟ್ 8 ರಂದು ನಡೆಯಲಿರುವ ಭಾರತದ ಅಥ್ಲೀಟ್ಸ್ ಸ್ಪರ್ಧೆಗಳು

ಗಾಲ್ಫ್: ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 2 - ದೀಕ್ಷಾ ಡಾಗರ್- ಮಧ್ಯಾಹ್ನ 12:30 ಗಂಟೆಗೆ

ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 2 - ಅದಿತಿ ಅಶೋಕ್- ಮಧ್ಯಾಹ್ನ 2:47 ಗಂಟೆಗೆ

ಅಥ್ಲೆಟಿಕ್ಸ್: ಮಹಿಳೆಯರ 100 ಮೀಟರ್ ಹರ್ಡಲ್ಸ್ ರಿಲೇ - ಗುಂಪು 1 - ಜ್ಯೋತಿ ಯರ್ರಾಜಿ- ಮಧ್ಯಾಹ್ನ 2:05 ಗಂಟೆಗೆ

ಕುಸ್ತಿ: ಮಹಿಳೆಯರ 57 ಕೆಜಿ ಫ್ರೀಸ್ಟೈಲ್ - 1/8 ಪಂದ್ಯಗಳು - (ಭಾರತ) ಅಂಶು ಮಲಿಕ್ vs ಹೆಲೆನ್ ಮರೂಲಿಸ್ (ಯುಎಸ್ಎ)- ಮಧ್ಯಾಹ್ನ 3 ಗಂಟೆಗೆ

ಪುರುಷರ 57 ಕೆಜಿ ಫ್ರೀಸ್ಟೈಲ್ - 1/8 ಪಂದ್ಯಗಳು - ಅಮನ್ ಸೆಹ್ರಾವತ್ vs ವ್ಲಾಡಿಮಿರ್ ಎಗೊರೊವ್ (ಮ್ಯಾಸಿಡೋನಿಯಾ)- ಮಧ್ಯಾಹ್ನ 3 ಗಂಟೆಗೆ

ಮಹಿಳೆಯರ 57 ಕೆಜಿ ಫ್ರೀಸ್ಟೈಲ್ - 1/4 ಪಂದ್ಯಗಳು (ಅರ್ಹತೆ ಪಡೆದರೆ) - ಅಂಶು ಮಲಿಕ್ vs ಅಲೀನಾ ಅಗೋಪಿಯಾ (ಉಕ್ರೇನ್) ಅಥವಾ ಅನ್ಹೆಲಿನಾ ಲಿಸ್ಜಾಕ್ (ಪೋಲೆಂಡ್)- ಸಂಜೆ 4:20 ಗಂಟೆಗೆ

ಪುರುಷರ 57 ಕೆಜಿ ಫ್ರೀಸ್ಟೈಲ್ - 1/4 ಪಂದ್ಯಗಳು (ಅರ್ಹತೆ ಪಡೆದರೆ) - ಅಮನ್ ಸೆಹ್ರಾವತ್ vs ಡೈಮಂಟಿನೊ ಐಯುನಾ ಫೇ (ಬಿಸುವಾ-ಗಿನಿಯಾ) ಅಥವಾ ಝೆಲಿಮ್ಕಾನ್ ಅಬಕರೋವ್ (ಅಲ್ಬೇನಿಯಾ)- ಸಂಜೆ 4:20 ಗಂಟೆಗೆ

ಹಾಕಿ: ಪುರುಷರ ತಂಡದ ಕಂಚಿನ ಪದಕ ಪಂದ್ಯ - ಭಾರತ vs ಸ್ಪೇನ್- ಸಂಜೆ 5:30 ಗಂಟೆಗೆ

ಕುಸ್ತಿ: ಪುರುಷರ 57 ಕೆಜಿ ಫ್ರೀಸ್ಟೈಲ್ - ಸೆಮಿಫೈನಲ್ (ಅರ್ಹತೆ ಪಡೆದರೆ) - ಅಮನ್ ಸೆಹ್ರಾವತ್- ರಾತ್ರಿ 9:45 ಗಂಟೆಗೆ

ಮಹಿಳೆಯರ 57 ಕೆಜಿ ಫ್ರೀಸ್ಟೈಲ್ - ಸೆಮಿಫೈನಲ್ (ಅರ್ಹತೆ ಪಡೆದರೆ) - ಅಂಶು ಮಲಿಕ್- ರಾತ್ರಿ 10:25 ಗಂಟೆಗೆ

ಅಥ್ಲೆಟಿಕ್ಸ್: ಪುರುಷರ ಜಾವೆಲಿನ್ ಥ್ರೋ ಫೈನಲ್ - ನೀರಜ್ ಚೋಪ್ರಾ- ರಾತ್ರಿ 11:55 ಗಂಟೆಗೆ

Story first published: Thursday, August 8, 2024, 6:54 [IST]
Other articles published on Aug 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+