Pairs Olympics 2024: ಆಗಸ್ಟ್ 9 ರಂದು ಭಾರತಕ್ಕೆ ಪದಕ ಗೆಲ್ಲುವ ಅವಕಾಶವಿದೆಯೇ?; ವೇಳಾಪಟ್ಟಿ ತಿಳಿಯಿರಿ
ಆಗಸ್ಟ್ 9 ಶುಕ್ರವಾರ, ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಅಂತಿಮ ಘಟ್ಟದತ್ತ ಸಾಗುತ್ತಿದ್ದು, ಇನ್ನು ಮೂರು ದಿನಗಳಲ್ಲಿ ಕ್ರೀಡಾಕೂಟವು ಮುಗಿಯಲಿದೆ. ಇಲ್ಲಿಯವರೆಗೆ 13 ದಿನಗಳನ್ನು ಪ್ಯಾರಿಸ್ ಕ್ರೀಡಾಕೂಟ ಯಶಸ್ವಿಯಾಗಿ ಪೂರೈಸಿದೆ. ಆಗಸ್ಟ್ 9 ರಂದು ಭಾರತ ಎಷ್ಟು ಪದಕಗಳನ್ನು ಗೆಲ್ಲುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಇದುವರೆ ಭಾರತ ಒಂದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಮಾತ್ರ ಗೆದ್ದಿದೆ. ಮೂರು ಕಂಚಿನ ಪದಕಗಳು ಶೂಟಿಂಗ್‌ನಲ್ಲಿ ಬಂದರೆ, ಹಾಕಿ ಕ್ರೀಡೆಯಲ್ಲಿ ಭಾರತ ಒಂದು ಪದಕವನ್ನು ಗೆದ್ದಿದೆ. ಜಾವೆಲಿನ್ ಥ್ರೋ ಸ್ಫರ್ಧೆಯಲ್ಲಿ ನೀರಜ್ ಚೋಪ್ರಾ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಇಂದು (ಗುರುವಾರ) ಕುಸ್ತಿಯಲ್ಲಿ ಅಮನ್ ಸೆಹ್ರಾವತ್ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. ಇದನ್ನು ಹೊರರುಪಡಿಸಿದರೆ, ಭಾರತಕ್ಕೆ ಬೇರೆ ಯಾವುದೇ ಪದಕದ ಸ್ಪರ್ಧೆಗಳಿಲ್ಲ. ಮಹಿಳೆಯರ ಮತ್ತು ಪುರುಷರ 400 ಮೀಟರ್ ರಿಲೇ ಓಟ, ಮತ್ತು ಗಾಲ್ಫ್ ಸ್ಪರ್ಧೆಗಳು ನಡೆಯಲಿದೆ. ಇದರ ಸಂಪೂರ್ಣ ವೇಳಾಪಟ್ಟಿ ಬಗ್ಗೆ ಇಲ್ಲಿದೆ.
ಆಗಸ್ಟ್ 9 ರಂದು ನಡೆಯಲಿರುವ ಭಾರತದ ಅಥ್ಲೀಟ್ಸ್ ಸ್ಪರ್ಧೆಗಳು
ಗಾಲ್ಫ್: ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 3 - ಅದಿತಿ ಅಶೋಕ್, ದೀಕ್ಷಾ ಥಾಗರ್- ಮಧ್ಯಾಹ್ನ 12:30 ಗಂಟೆಗೆ
ಅಥ್ಲೆಟಿಕ್ಸ್: ಮಹಿಳೆಯರ 4x400 ಮೀ ರಿಲೇ - ರೌಂಡ್ 1 ಗುಂಪು 2 - ಭಾರತ ತಂಡ (ಜ್ಯೋತಿಕಾ ಶ್ರೀ ಥಂಡಿ, ಎಂಆರ್ ಭುವಮ್ಮ, ಶುಭಾ ವೆಂಕಟೇಶನ್ ಮತ್ತು ವಿದ್ಯಾ ರಾಮರಾಜ್)- ಮಧ್ಯಾಹ್ನ 2:22 ಗಂಟೆಗೆ
ಪುರುಷರ 4x400 ಮೀ ರಿಲೇ - ರೌಂಡ್ 1 ಗುಂಪು 2 - ಭಾರತ ತಂಡ (ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್, ಮುಹಮ್ಮದ್ ಅನಾಸ್, ರಾಜೇಶ್ ರಮೇಶ್ ಮತ್ತು ಸಂತೋಷ್ ಕುಮಾರ್)- ಮಧ್ಯಾಹ್ನ 2:47 ಗಂಟೆಗೆ
ಕುಸ್ತಿ: ಪುರುಷರ 57 ಕೆಜಿ ಫ್ರೀಸ್ಟೈಲ್ ಕಂಚಿನ ಪದಕ ಪಂದ್ಯ (ಸೆಮಿಫೈನಲ್ ಸೋಲು) - ಅಮನ್ ಸೆಹ್ರಾವತ್- ರಾತ್ರಿ 11 ಗಂಟೆಗೆ
ಪುರುಷರ 57 ಕೆಜಿ ಫ್ರೀಸ್ಟೈಲ್ - ಚಿನ್ನದ ಪದಕ ಪಂದ್ಯ- ರಾತ್ರಿ 11:25 ಗಂಟೆಗೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications