Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ಯಾರೀಸ್‌ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳ ಅಮೋಘ ಸಾಧನೆ

ಪ್ಯಾರೀಸ್‌ನಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಭಾರತ ಅಮೋಘ ಸಾಧನೆ ಮಾಡಿದೆ. ಭಾರತ ಒಟ್ಟು ಒಂದು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳೊಂದಿಗೆ, ಒಟ್ಟು ಆರು ಪದಕಗಳ ಬೇಟೆ ನಡೆಸಿದೆ. ಈ ಬಾರಿಯ ಒಲಿಂಪಿಕ್ಸ್‌ ಹಲವು ಯುವ ಕ್ರೀಡಾ ಪಟುಗಳು ಸಾಧನೆ ಮಾಡಿದ್ದಾರೆ. ಹಾಗಿದ್ದರೆ ಟೀಮ್ ಇಂಡಿಯಾದ ಅಭಿಮಾನಿಗಳಲ್ಲಿ ಉತ್ಸಾಹ ತುಂಬಿದ ಪದಕ ವೀರರ ಸಾಧನೆಯ ಮೆಲಕು ಇಲ್ಲಿದೆ.

ವರ್ಷದಿಂದ ವರ್ಷಕ್ಕೆ ಒಲಿಂಪಿಕ್ಸ್‌ನಲ್ಲಿ ಭಾರತ ಅಮೋಘ ಪ್ರದರ್ಶನ ನೀಡುತ್ತಿದೆ. ಈ ವೇಳೆ ಶೂಟಿಂಗ್‌ನಲ್ಲಿ ಭಾರತದ ಪರ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮೂರು ಪದಕಗಳು ಬಂದಿವೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿನ ಭಾರತದ ಪರ ಮನು ಭಾಕರ್ ಡಬಲ್‌ ಒಲಿಂಪಿಕ್ಸ್‌ ಮೆಡಲ್‌ ಒಂದೇ, ಒಲಿಂಪಿಕ್ಸ್‌ ಪಡೆದು ಸಾಧನೆ ಮಾಡಿದ್ದಾರೆ.

Indian Athletes Shine at Paris Olympics and Paralympics with Exceptional Performances

ಮನು ಭಾಕರ್ ಡಬಲ್ ಸಾಧನೆ

ಮಹಿಳೆಯರ 10 ಮೀಟರ್ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಮನು ಭಾಕರ್‌ ಅಮೋಘ ಪ್ರದರ್ಶನ ನೀಡಿ ಪದಕ ಬಾಚಿಕೊಂಡರು. ಈ ಮೂಲಕ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಾಧಿಸಲು ಆಗದನ್ನು ಸಾಧಿಸಿ ತೋರಿಸಿದ್ದಾರೆ. ಈ ಟೂರ್ನಿಯಲ್ಲಿ ಮನು ಕಂಚಿನ ಸಾಧನೆ ಮಾಡಿದ್ದಾರೆ. ಇನ್ನು 10 ಮೀಟರ್ ಮಿಶ್ರ ತಂಡ ವಿಭಾಗದಲ್ಲಿ ಮನು ಪದಕದ ನಗೆ ಬೀರಿದ್ದಾರೆ. ಇವರು ಸರ್ಬಜೋತ್ ಸಿಂಗ್ ಅವರೊಂದಿಗೆ ಕಂಚಿನ ಪದಕಕ್ಕೆ ಕೊರಳು ಒಡ್ಡಿದರು. ಈ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ ಡಬಲ್ ಪದಕ ಸಾಧನೆ ಮಾಡಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸ್ವಪ್ನಿಲ್ ಕುಸಾಳೆಗೆ ಕಂಚು

ಪುರುಷರ 50 ಮೀಟರ್ ರೈಫಲ್‌ 3 ಪೋಜಿಶನ್‌ ಈವೆಂಟ್‌ನಲ್ಲಿ ಭಾರತದ ಸ್ವಪ್ನಿಲ್ ಕುಸಾಳೆ ಅಮೋಘ ಸಾಧನೆ ಮಾಡಿದ್ದಾರೆ. ಇವರು ಈ ಸ್ಪರ್ಧೆಯಲ್ಲಿ ಕಂಚಿನ ಸಾಧನೆ ಮಾಡುವ ಮೂಲಕ ಗಮನ ಸೆಳೆದರು.

Indian Athletes Shine at Paris Olympics and Paralympics with Exceptional Performances

ಪುರುಷರ ಕಂಚಿನ ನಗೆ

ಭಾರತ ಪುರುಷರ ತಂಡ ಒಲಿಂಪಿಕ್ಸ್ ಹಾಕಿ ಟೂರ್ನಿಯಲ್ಲಿ ಅಬ್ಬರದ ಆಟವನ್ನು ಪ್ರದರ್ಶಿಸಿತ್ತು. ಆದರೆ ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ 3-2ರಿಂದ ಸೋಲು ಕಂಡಿತು. ಆದರೆ ಕಂಚಿನ ಪದಕದ ಹೋರಾಟದಲ್ಲಿ ಭಾರತ, ಸ್ಪೇನ್ ತಂಡವನ್ನು ಮಣಿಸಿತು. ನಿರ್ಣಾಯಕ ಪಂದ್ಯದಲ್ಲಿ ಭಾರತ 2-1 ರಿಂದ ಗೆಲುವು ಸಾಧಿಸಿ, ಸತತ ಎರಡನೇ ಬಾರಿಗೆ ಒಲಿಂಪಕ್ಸ್‌ ಪೋಡಿಯಂ ಹತ್ತಿ ಸಾಧನೆ ಮಾಡಿತು.

ನೀರಜ್‌ ಬೆಳ್ಳಿ ಸಾಧನೆ

ಭಾರತದ ಸ್ಟಾರ್ ಜಾವೆಲಿನ್ ಥ್ರೋ ಪಟು ನೀರಜ್‌ ಚೋಪ್ರಾ ಅವರು ಪುರುಷರ ಜಾವೇಲಿನ್ ಥ್ರೋ ವಿಭಾಗದಲ್ಲಿ ಅಮೊಘ ಸಾಧನೆ ಮಾಡಿದ್ದಾರೆ. ಇವರು ಟ್ರ್ಯಾಕ್‌ ಆಂಡ್ ಫೀಲ್ಡ್‌ ವಿಭಾಗದಲ್ಲಿ ಸತತ ಎರಡನೇ ಒಲಿಂಪಿಕ್ಸ್‌ ಪದಕವನ್ನು ತಮ್ಮದಾಗಿಸಿಕೊಂಡರು. ಟೊಕಿಯೋದಲ್ಲಿ ಬಂಗಾರದ ಸಾಧನೆ ಮಾಡಿದ್ದ ನೀರಜ್‌, ಪ್ಯಾರಿಸ್‌ನಲ್ಲಿ ಬೆಳ್ಳಿಗೆ ಕೊರಳೊಡ್ಡಿದರು.

ಕುಸ್ತಿಯಲ್ಲೂ ಕಂಚು

ಭಾರತದ ಕುಸ್ತಿ ಪಟುಗಳು ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲೂ ತಮ್ಮ ಪದಕದ ಬೇಟೆಯನ್ನು ಮುಂದುವರೆಸಿದ್ದಾರೆ. ಮಹಿಳೆಯರ 50 ಕೆಜಿ ಫ್ರಿ ಸ್ಟೈಲ್‌ ವಿಭಾಗದ ಫೈನಲ್‌ಗೂ ಮುನ್ನ ಅನರ್ಹರಾಗಿದ್ದ ವಿನೇಶ್ ಪೋಗಟ್ ಆಘಾತ ಅನುಭವಿಸಿದರು. ಆದರೆ ಅಮನ್ ಶೇರಾವತ್ ಪುರುಷರ 57 ಕೆ.ಜಿ ವಿಭಾಗದಲ್ಲಿ ಕಂಚಿನ ಸಾಧನೆಯನ್ನು ಮಾಡಿ ದೇಶಕ್ಕ ಕೀರ್ತಿ ತಂದಿದ್ದಾರೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಅಬ್ಬರ

ಭಾರತದ ಕ್ರೀಡಾ ಪಟುಗಳು ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲೂ ಅಮೋಘ ಪ್ರದರ್ಶನ ನೀಡಿ ಪದಕದ ಬೇಟೆ ನಡೆಸಿದ್ದಾರೆ. ಈ ಕೂಟದಲ್ಲಿ ಭಾರತ 7 ಬಂಗಾರ, 9 ಬೆಳ್ಳಿ, 13 ಕಂಚಿನ ಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ 18ನೇ ಸ್ಥಾನದಲ್ಲಿದೆ.

Story first published: Thursday, December 12, 2024, 7:02 [IST]
Other articles published on Dec 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+