Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶಾಟ್ ಫುಟ್ ಆಟಗಾರ್ತಿ ಮನ್ ಪ್ರೀತ್ ವಿರುದ್ಧ ತಾತ್ಕಾಲಿಕ ನಿಷೇಧ

ನವದೆಹಲಿ, ಜುಲೈ 20: ಇತ್ತೀಚೆಗೆ ನಡೆಸಲಾದ ಉದ್ದೀಪನಾ ಮದ್ದು ಪರೀಕ್ಷೆ ವೇಳೆಯಲ್ಲಿ ಅನುತ್ತೀರ್ಣರಾಗಿದ್ದ ರಾಷ್ಟ್ರೀಯ ದಾಖಲೆ ಬರೆದ ಶಾಟ್ ಫುಟ್ ಆಟಗಾರ್ತಿ ಮನ್ ಪ್ರೀತ್ ಕೌರ್ ಅವರಿಗೆ ಸದ್ಯದ ಮಟ್ಟಿಗೆ ನಿಷೇಧ ಹೇರಲಾಗಿದೆ.

ಇತ್ತೀಚೆಗೆ, ಪಟಿಯಾಲಾದಲ್ಲಿ ಜುಲೈ 1ರಿಂದ 4ವರೆಗೆ ಫೆಡರೇಷನ್ ಕಪ್ ಕ್ರೀಡಾಕೂಟ ನಡೆದಿತ್ತು. ಅದರಲ್ಲಿ ಪಾಲ್ಗೊಂಡಿದ್ದ ಮನ್ ಪ್ರೀತ್ ಕೌರ್ ಅವರನ್ನು ರಾಷ್ಟ್ರೀಯ ಉದ್ದೀಪನಾ ನಿಗ್ರಹ ದಳ (ನಾಡಾ) ಪರೀಕ್ಷೆಗೊಳಪಡಿಸಿತ್ತು. ಅದರಲ್ಲಿ ಅವರು ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅವರ ಮೇಲೆ ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆಯು (ಐಎಎಫ್) ತಾತ್ಕಾಲಿಕ ನಿಷೇಧ ಹೇರಿದೆ.

ಪರೀಕ್ಷೆಯ ವೇಳೆ, ಅವರು ನಿಷೇಧಿತ ರಾಸಾಯನಿಕವಾದ ಡೈಮಿಥೈಲ್ ಬ್ಯುಟೈಲ್ ಅಮಿನ್ ಸೇವಿಸಿರುವುದು ಕಂಡುಬಂದಿದೆ ಎಂದು ನಾಡಾ ಹೇಳಿದೆ.

ಶಾಟ್ ಫುಟ್ ನಲ್ಲಿ ರಾಷ್ಟ್ರೀಯ ದಾಖಲೆಯನ್ನು ಗಳಿಸಿದ್ದ ಮನ್ ಪ್ರೀತ್ ಕೌರ್ ಅವರೀಗ ಡ್ರಗ್ಸ್ ಸುಳಿಯಲ್ಲಿ ಸಿಲುಕಿರುವುದು ಕ್ರೀಡಾವಲಯಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಇದೀಗ, ಮನ್ ಪ್ರೀತ್ ಕೌರ್ ವಿರುದ್ಧ ಯಾವ ರೀತಿಯ ನಿಷೇಧಗಳು ಹೇರಬಹುದು ಎಂಬಿತ್ಯಾದಿ ಮಾಹಿತಿಗಳನ್ನು ನೀಡಲಾಗಿದೆ.

ನಿಷೇಧಿತ ವಸ್ತು ಸೇವನೆ ಖಾತ್ರಿ

ನಿಷೇಧಿತ ವಸ್ತು ಸೇವನೆ ಖಾತ್ರಿ

ಅವರ ರಕ್ತ 'ಎ' ಹಾಗೂ 'ಬಿ' ಸ್ಯಾಂಪಲ್ ಗಳನ್ನು ಪಡೆಯಲಾಗಿದೆ. ಇವುಗಳಲ್ಲಿ ಎ ಸ್ಯಾಂಪಲ್ ನಲ್ಲಿ ಅವರು ಉದ್ದೀಪನಾ ಮದ್ದು ಸೇವಿಸಿರುವುದು ಖಾತ್ರಿಯಾಗಿದೆಯಷ್ಟೆ.

ಬಿ ಸ್ಯಾಂಪಲ್ ನಲ್ಲಿ ಸಾಬೀತಾದರೆ ಶಿಕ್ಷೆ ಖಾತ್ರಿ

ಬಿ ಸ್ಯಾಂಪಲ್ ನಲ್ಲಿ ಸಾಬೀತಾದರೆ ಶಿಕ್ಷೆ ಖಾತ್ರಿ

ಬಿ ಸ್ಯಾಂಪಲ್ ನಲ್ಲಿ ಪಡೆಯಲಾಗಿರುವ ಮೂತ್ರ ಪರೀಕ್ಷೆಯಲ್ಲೂ ಅವರು ಉದ್ದೀಪನಾ ಮದ್ದು ಸೇವನೆ ದೃಢಪಟ್ಟರೆ, ಅವರ ಮೇಲಿನ ನಿಷೇಧದ ಅವಧಿಯನ್ನು ನಿಗದಿಗೊಳಿಸಲಾಗುತ್ತದೆ.

ಚೀನಾ ಕ್ರೀಡಾಕೂಟದಲ್ಲೂ ಉದ್ದೀಪನಾ ಮದ್ದು ಸೇವನೆ ಸಾಬೀತು

ಚೀನಾ ಕ್ರೀಡಾಕೂಟದಲ್ಲೂ ಉದ್ದೀಪನಾ ಮದ್ದು ಸೇವನೆ ಸಾಬೀತು

ಇದೇ ವರ್ಷ ಏಪ್ರಿಲ್ ನಲ್ಲಿ ಚೀನಾದ ಜಿನ್ ಹುವಾದಲ್ಲಿ ನಡೆದಿದ್ದ ಏಷ್ಯನ್ ಗ್ರಾಂಡ್ ಪ್ರಿಕ್ಸ್ ಕ್ರೀಡಾಕೂಟದ ವೇಳೆಯಲ್ಲೂ ಅವರಿಂದ ಎ ಸ್ಯಾಂಪಲ್ ರಕ್ತ ಹಾಗೂ ಮೂತ್ರವನ್ನು ಪರೀಕ್ಷೆಗಾಗಿ ಪಡೆಯಲಾಗಿತ್ತು. ಅದರಲ್ಲೂ ಅವರು ಉದ್ದೀಪನಾ ಮದ್ದು ಸೇವಿಸಿರುವುದು ದೃಢಪಟ್ಟಿದೆ. ಹಾಗಾಗಿ, ಆ ಕ್ರೀಡಾಕೂಟದಲ್ಲಿ ಅವರು ಗಳಿಸಿದ್ದ ಚಿನ್ನದ ಪದಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಐಎಎಫ್ ಹೇಳಿದೆ.

ಲಂಡನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಅನುಮಾನ

ಲಂಡನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಅನುಮಾನ

ಅವರ ಮೇಲೆ ಈಗ ತಾತ್ಕಾಲಿಕ ನಿಷೇಧ ಹೇರಿರುವುದರಿಂದಾಗಿ, ಇದೇ ವರ್ಷ ಆಗಸ್ಟ್ 5ರಿಂದ 13ರವರೆಗೆ ಲಂಡನ್ ನಲ್ಲಿ ನಡೆಯಲಿರುವ ಐಎಎಎಫ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+