For Quick Alerts
ALLOW NOTIFICATIONS  
For Daily Alerts

ಏಷ್ಯಾಡ್‌ನಲ್ಲಿ ಪದಕ ಖಚಿತಪಡಿಸಿದ ನಿಖತ್ ಝರೀನ್: ಒಲಿಂಪಿಕ್ಸ್‌ಗೆ ಅರ್ಹತೆ

ಎರಡು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಝರೀನ್ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ತಮ್ಮ ಚೊಚ್ಚಲ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಶುಕ್ರವಾರ ನಡೆದ 50 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಜೋರ್ಡಾನ್‌ನ ಹನಾನ್ ನಾಸರ್ ಅವರ ವಿರುದ್ಧ ಅದ್ಭುತ ಜಯ ಸಾಧಿಸುವ ಮೂಲಕ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತಕ್ಕೆ ಮೊದಲ ಬಾಕ್ಸಿಂಗ್ ಪದಕವನ್ನು ಖಚಿತಪಡಿಸಿದ್ದಾರೆ. ಈವೆಂಟ್‌ನ ಸೆಮಿಫೈನಲ್‌ಗೆ ತಲುಪಲು ಆರ್‌ಎಸ್‌ಸಿ (ರೆಫರಿ ಸ್ಟಾಪ್ಸ್ ಕಾಂಟೆಸ್ಟ್) ಗೆಲುವನ್ನು ಸಾಧಿಸಿ ಎದುರಾಳಿಯನ್ನು ಮಣಿಸಿದರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.

ಜರೀನ್ ಆರಂಭದಿಂದಲೇ ಆಕ್ರಮಣಕಾರಿ ಪ್ರದರ್ಶನಕ್ಕೆ ಮುಂದಾಗಿದ್ದು ಮೂರು ನಿಮಿಷಗಳ ಸುತ್ತಿನಲ್ಲಿ 53 ಸೆಕೆಂಡುಗಳು ಉಳಿದಿರುವಾಗಲೇ ಮೊದಲ ಸುತ್ತಿನಲ್ಲಿಯೇ ಗೆಲುವು ದಾಖಲಿಸಿದರು. ಭಾರತದ ಸ್ಟಾರ್ ಬಾಕ್ಸರ್ ದಾಳಿಯನ್ನು ಎದುರಿಸಲು ಕಷ್ಟು ಪಡುತ್ತಿದ್ದ ನಾಸರ್ ಸುಲಭ ಸವಾಲಾದರು.

Indian boxer Nikhat Zareen confirms maiden medal at Asian Games, reserves Olympic quota

ಜೋರ್ಡಾನ್‌ನ ಬಾಕ್ಸರ್ ರೆಫರಿಯಿಂದ ಮೂರು ಸ್ಟ್ಯಾಂಡಿಂಗ್ ಎಣಿಕೆಗಳನ್ನು ಪಡೆದರು. ಆದರೆ ಜರೀನ್ ಅವರ ಸತತವಾದ ಪಂಚ್‌ಗಳಿಂದಾಗಿ ಅಧಿಕೃತವಾಗಿ ಪಂದ್ಯವನ್ನು ನಿಲ್ಲಿಸಬೇಕಾಯಿತು. ಅಕ್ಟೋಬರ್ 1 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ಥಾಯ್ಕೆಂಡ್‌ನ ಚುತಾಮತ್ ರಕ್ಸತ್ ಅವರನ್ನು ಎದುರಿಸಲಿದ್ದಾರೆ.

ಹ್ಯಾಂಗ್‌ಝೌ ಗೇಮ್ಸ್‌ನಲ್ಲಿ ಮೊದಲ ಆರು ದಿನಗಳಲ್ಲಿ ಭಾರತ ಒಟ್ಟು 32 ಪದಕಗಳನ್ನು ಗೆದ್ದಿದೆ. ಈವರೆಗೆ ಭಾರತಕ್ಕೆ ಶೂಟಿಂಗ್‌ನಲ್ಲಿ ಅದ್ಭುತ ಯಶಸ್ಸು ದೊರೆತಿದ್ದು 18 ಪದಕಗಳು ಶೂಟಿಂಗ್‌ನಿಂದಲೇ ಬಂದಿದೆ. ಇನ್ನು ಭಾರತ ಒಟ್ಟು ಎಂಟು ಚಿನ್ನದ ಪದಕಗಳನ್ನು ಈ ಕ್ಷಣದ ವರೆಗೆ ಗೆದ್ದುಕೊಂಡಿದೆ. ಶೂಟಿಂಗ್ ಆರು ಚಿನ್ನದ ಪದಕಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ. ಇದಲ್ಲದೆ ರೋಯಿಂಗ್‌ನಲ್ಲಿ ಭಾರತಕ್ಕೆ ಎಂಟು ಪದಕಗಳು ದೊರೆತಿದ್ದು ಇನ್ನೂ ಕೆಲವು ಕ್ರೀಡೆಗಳು ಭಾರತಕ್ಕೆ ಪದಕಗಳನ್ನು ತಂದುಕೊಡುವ ನಿರೀಕ್ಷೆಯಿದೆ.

Story first published: Friday, September 29, 2023, 20:34 [IST]
Other articles published on Sep 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+