ಆರ್ ಪ್ರಜ್ಞಾನಂದ್‌ಗೆ ವೃತ್ತಿ ಜೀವನದ ದೊಡ್ಡ ಗೆಲುವು: ಮ್ಯಾಗ್ನಸ್ ಕಾರ್ಲ್‌ಸನ್ ಸೋಲು
ಚೆಸ್ ಕ್ರೀಡೆಯಲ್ಲಿ ಭಾರತೀಯ ಆಟಗಾರರು ಅಮೋಘ ಸಾಧನೆ ಮಾಡುತ್ತಿದ್ದಾರೆ. ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ ಫ್ರೀಸ್ಟೈಲ್ ಚೆಸ್ ಗ್ರ್ಯಾಂಡ್‌ಸ್ಲಾಮ್‌ನಲ್ಲಿ ಭಾರತದ ಭರವಸೆಯ ಆರ್ ಪ್ರಜ್ಞಾನಂದ್ ತಮ್ಮ ವೃತ್ತಿ ಬದುಕಿನ ದೊಡ್ಡ ಗೆಲುವು ದಾಖಲಿಸಿದ್ದಾರೆ. ಇವರು ನಾಲ್ಕನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂಬರ್-1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಸೋಲಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಆರ್ ಪ್ರಜ್ಞಾನಂದ್ ವೃತ್ತಿ ಜೀವದನ ಅತಿ ದೊಡ್ಡ ಗೆಲುವುಗಳಲ್ಲಿ ಇದು ಒಂದಾಗಿದೆ. ಇವರು ಈ ಪಂದ್ಯದಲ್ಲಿ ಕೇವಲ 39 ನಡೆಗಳಲ್ಲಿ ಪಂದ್ಯಗಳನ್ನು ಮುಗಿಸುವಲ್ಲಿ ಯಶಸ್ವಿಯಾದರು. ಬಿಳಿ ದಳಗೊಳೊಂದಿಗೆ ಆಟವಾಡಿದ ಆರ್ ಪ್ರಜ್ಞಾನಂದ್ ಸೊಗಸಾದ ಚಲನೆಯ ಮೂಲಕ ಎಲ್ಲರ ಚಿತ್ತ ಕದ್ದರು. ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್, ಭಾರತೀಯ ಆಟಗಾರರ ವಿರುದ್ಧ ಪದೇ ಪದೇ ಸೋಲು ಕಾಣುತ್ತಿದ್ದಾರೆ. ಇದಕ್ಕೂ ಮೊದಲು ಇವರು ಪ್ರಸ್ತುತ ವಿಶ್ವ ಚಾಂಪಿಯನ್ ಡಿ ಗುಕೇಶ್ ಅವರ ವಿರುದ್ಧವೂ ಸೋಲು ಕಂಡಿದ್ದರು.

ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಗೆಲುವಿನೊಂದಿಗೆ ಆರ್ ಪ್ರಜ್ಞಾನಂದ್ ನಾಲ್ಕನೇ ಸುತ್ತಿನಲ್ಲಿ ಗೆಲುವು ದಾಖಲಿಸಿದರು. ಈ ಮೂಲಕ ಇವರು ಎಂಟು ಆಟಗಾರರ ವೈಟ್ ಗ್ರೂಪ್‌ನಲ್ಲಿ 4.5 ಅಂಕಗಳೊಂದಿಗೆ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಭಾರತದ ಪ್ರಜ್ಞಾನಂದ್ ಮೂರು ಮಾದರಿ (ಕ್ಲಾಸಿಕಲ್, ರ್ಯಾಪಿಡ್ ಮತ್ತು ಬ್ಲಿಟ್ಜ್)ಗಳಲ್ಲಿ ಜಯ ಸಾಧಿಸಿದ್ದಾರೆ. ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಪ್ರಜ್ಞಾನಂದ್ 10 ನಿಮಿಷಗಳು ಮತ್ತು 10 ಸೆಕೆಂಡುಗಳ ಇನ್‌ಕ್ರಿಮೆಂಟ್ ಸಮಯದಲ್ಲಿ ವಿಶ್ವದ ನಂಬರ್ 1 ಆಟಗಾರರನ್ನು ಮಣಿಸಿ ಅಬ್ಬರಿಸಿದರು.
ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಪ್ರಜ್ಞಾನಂದ್ ಎಲ್ಲ ಮೂವ್ (MOVE)ಗಳನ್ನು ಲೆಕ್ಕಾಚಾರದಲ್ಲಿ ಆಡಿದರು. ಅಲ್ಲದೆ ಹೆಚ್ಚಿನ ಸಮಯ ಆಟದ ಮೇಲೆ ನಿಯಂತ್ರಣ ಕಾಯ್ದುಕೊಂಡರು. ಅಲ್ಲದೆ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ವಿಶ್ವದ ನಂಬರ್ 1ಗೆ ಹೋಲಿಸಿದರೆ ಪ್ರಜ್ಞಾನಂದ್ ನಿಖರತೆ ಅಮೋಘವಾಗಿತ್ತು.
ಪಂದ್ಯವಾಳಿಯಲ್ಲಿ ಪ್ರದರ್ಶನ
ಪ್ರಜ್ಞಾನಂದ್ ಮೊದಲ ಸುತ್ತಿನ ಪಂದ್ಯದಲ್ಲಿ ನೋಡಿರ್ಬೆಕ್ ಅಬ್ದುಸತ್ತೊರೊವ್ ವಿರುದ್ಧ ಡ್ರಾ ಸಾಧಿಸುವ ಮೂಲಕ ಅಭಿಯಾನ ಆರಂಭಿಸಿದರು. ಎರಡನೇ ಸುತ್ತಿನಲ್ಲಿ ಅಸೌಬಯೇವಾ ಅವರನ್ನು ಮಣಿಸಿ ಪೂರ್ಣ ಅಂಕ ಕಲೆ ಹಾಕಿದರು. ಈ ಗೆಲುವಿನೊಂದಿಗೆ ಪ್ರಜ್ಞಾನಂದ್ ಆತ್ಮವಿಶ್ವಾಸ ಇಮ್ಮಡಿಯಾಯಿತು. ಅಲ್ಲದೆ ಮೂರನೇ ಸುತ್ತಿನ ಪಂದ್ಯದಲ್ಲೂ ಇದೇ ಪ್ರದರ್ಶನ ಮುಂದುವರೆಸಿ ಜಯ ಸಾಧಿಸಿದರು. ಇನ್ನು ನಾಲ್ಕನೇ ಸುತ್ತಿನ ಪಂದ್ಯದಲ್ಲೂ ವಿಶ್ವದ ನಂಬರ್ 1 ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಭರ್ಜರಿ ಜಯ ಸಾಧಿಸಿ ಮಿಂಚಿದರು. ಸದ್ಯ ಇವರು ಫಿಡಾ ರ್ಯಾಂಕಿಂಗ್‌ನಲ್ಲಿ 4ನೇ ಕ್ರಮಾಂಕದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications