For Quick Alerts
ALLOW NOTIFICATIONS  
For Daily Alerts

Shardul Thakur Marriage : ವೈವಾಹಿಕ ಜೀವನಕ್ಕೆ ಕಾಲಿಟ್ಟ ಶಾರ್ದೂಲ್ ಠಾಕೂರ್: ಪತ್ನಿಗಾಗಿ ಸುಂದರವಾದ ಸಂದೇಶ

Indian Cricketer Shardul Thakur Gets Married To Mitali Parulkar Write A Special Message

ಭಾರತ ತಂಡದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಸೋಮವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಮವಾರ ಸ್ನೇಹಿತರು, ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಅವರು ಬಹುಕಾಲದ ಗೆಳತಿ ಮಿತಾಲಿ ಪಾರುಲ್ಕರ್ ಅವರೊಂದಿಗೆ ವಿವಾಹವಾದರು.

ಮುಂಬೈನಲ್ಲಿ ಈ ಮದುವೆ ಕಾರ್ಯಕ್ರಮ ನಡೆಯಿತು. 2023ರಲ್ಲಿ ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ನಂತರ ಮದುವೆಯಾದ ಭಾರತ ತಂಡದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ ಶಾರ್ದೂಲ್ ಠಾಕೂರ್. ಭಾರತೀಯ ಕ್ರಿಕೆಟಿಗನ ಮದುವೆ ಸಂದರ್ಭದಲ್ಲಿ ಹಲವು ಕ್ರಿಕೆಟಿಗರು ಭಾಗವಹಿಸಿ ಶುಭಾಶಯ ಕೋರಿದ್ದಾರೆ.

ಮದುವೆಯ ನಂತರ ಶಾರ್ದೂಲ್ ಠಾಕೂರ್ ಸಾಮಾಜಿಕ ಮಾಧ್ಯಮಗಳಲ್ಲಿ ಮದುವೆ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮಿತಾಲಿ ಪಾರೂಲ್ಕರ್ ಅವರೊಂದಿಗಿನ ಸುಂದರವಾದ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡಿರುವ 31 ವರ್ಷದ ಶಾರ್ದೂಲ್ ಠಾಕೂರ್ ತನ್ನ ಹೆಂಡತಿಗೆ ಸಿಹಿಯಾದ ಸಂದೇಶವನ್ನು ನೀಡಿದ್ದಾರೆ.

"ನಿನ್ನ ನೆರಳೊಂದಿಗೆ ಮುಖಾಮುಖಿಯಾದಾಗ ಬೆಳಕನ್ನು ಪ್ರಶಂಸಿಸುವುದನ್ನು ಕಲಿತಿದ್ದೇನೆ. ಸಮಯದಲ್ಲಿ ಮತ್ತು ಕೆಟ್ಟ ಸಮಯದಲ್ಲಿ, ಸಂತೋಷ ಮತ್ತು ದುಃಖದಲ್ಲಿ, ನಾನು ಇಂದಿನಿಂದ ಕೊನೆಯವರೆಗೂ ನಿನ್ನ ಸ್ನೇಹಿತನಾಗಿ ಇರುತ್ತೇನೆ ಎಂದು ಭರವಸೆ ನೀಡುತ್ತೇನೆ" ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Indian Cricketer Shardul Thakur Gets Married To Mitali Parulkar Write A Special Message

ಸಂಗೀತ ಕಾರ್ಯಕ್ರಮದಲ್ಲಿ ಹಲವು ಕ್ರಿಕೆಟಿಗರು ಭಾಗಿ

ಮದುವೆಗೆ ಮುನ್ನ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭಾರತ ತಂಡದ ಹಲವು ಕ್ರಿಕೆಟಿಗರು ಭಾಗವಹಿಸಿದ್ದರು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕಾರ್ಯಕ್ರಮಕ್ಕೆ ಆಗಮಿಸಿ ಹೊಸ ಜೋಡಿಗೆ ಶುಭಾಶಯ ಕೋರಿದ್ದರು. ಇಂದೋರ್ ನಲ್ಲಿ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ನಡೆಯುತ್ತಿರುವುದರಿಂದ ಬಹುತೇಕ ಕ್ರಿಕೆಟಿಗರು ಮದುವೆಗೆ ಹಾಜರಾಗಿರಲಿಲ್ಲ.

ಸಂಗೀತ ಕಾರ್ಯಕ್ರಮದಲ್ಲಿ ಶಾರ್ದೂಲ್ ಠಾಕೂರ್ ತಮ್ಮ ಪತ್ನಿ ಮಿತಾಲಿ ಜೊತೆ ಹೆಜ್ಜೆ ಹಾಕಿರುವು ವಿಡಿಯೋವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಶುಭಾಶಯ ಕೋರಿದ್ದಾರೆ. ಹಲವು ಜನಪ್ರಿಯ ಹಾಡುಗಳಿಗೆ ಕುಣಿದು ಸಂಭ್ರಮಿಸಿದ್ದಾರೆ.

Indian Cricketer Shardul Thakur Gets Married To Mitali Parulkar Write A Special Message

ಏಕದಿನ ಸರಣಿಗೆ ಆಯ್ಕೆಯಾಗಿರುವ ಠಾಕೂರ್

ಶಾರ್ದೂಲ್ ಠಾಕೂರ್ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸದ್ಯ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಆಲ್ ರೌಂಡರ್ ಅವರನ್ನು ಆಯ್ಕೆ ಮಾಡಲಾಗಿಲ್ಲ.

ಮಾರ್ಚ್ 17 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲನೇ ಏಕದಿನ ಪಂದ್ಯ ನಡೆಯಲಿದೆ, ಮಾರ್ಚ್ 19ರಂದು ವಿಶಾಖಪಟ್ಟಣಂನಲ್ಲಿ ಎರರಡನೇ ಏಕದಿನ ಪಂದ್ಯ ನಡೆಯಲಿದ್ದು, ಸರಣಿಯ ಅಂತಿಮ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

2023ರ ಐಪಿಎಲ್ ಹರಾಜಿಗೆ ಮುನ್ನ ಶಾರ್ದೂಲ್ ಠಾಕೂರ್ ಅವರನ್ನು ದೆಹಲಿ ಕ್ಯಾಪಿಟಲ್ಸ್ ತಂಡದಿಂದ ಟ್ರೇಡಿಂಗ್ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

Story first published: Tuesday, February 28, 2023, 2:30 [IST]
Other articles published on Feb 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+