Paris Olympics 2024: ಭಾರತದ ಮಹಿಳಾ ಶೂಟರ್‌ಗೆ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್
ಏಪ್ರಿಲ್ 29, ಭಾನುವಾರ ಕತಾರ್‌ನ ದೋಹಾದಲ್ಲಿ ನಡೆದ ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ ಫೈನಲ್ ಒಲಿಂಪಿಕ್ಸ್ ಶಾಟ್‌ಗನ್ ಅರ್ಹತಾ ಚಾಂಪಿಯನ್‌ಶಿಪ್ ನಲ್ಲಿ ಭಾರತ ಮಹಿಳಾ ಶೂಟರ್ ಅಮೋಘ ಪ್ರದರ್ಶನ ನೀಡಿದ್ದಾರೆ.
ಭಾರತ ಮಹಿಳಾ ಶೂಟರ್ ಮಹೇಶ್ವರಿ ಚೌಹಾಣ್ ಅವರು ಫೈನಲ್ ಒಲಿಂಪಿಕ್ಸ್ ಶಾಟ್‌ಗನ್ ಅರ್ಹತಾ ಚಾಂಪಿಯನ್‌ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಜೊತೆಗೆ ಮುಂಬರುವ 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಕೂಟಕ್ಕೆ ಭಾರತದ 21ನೇ ಕೋಟಾವನ್ನು ಪಡೆದುಕೊಂಡಿದ್ದಾರೆ. ಇದು ಪ್ಯಾರಿಸ್ ಒಲಿಂಪಿಕ್ಸ್‌ಗೆ ಮಹಿಳಾ ಸ್ಕೀಟ್‌ನಲ್ಲಿ ಭಾರತದ ಎರಡನೇ ಕೋಟಾ ಸ್ಥಾನವಾಗಿದೆ.

ಫೈನಲ್‌ನಲ್ಲಿ ಚಿಲಿ ದೇಶದ ಫ್ರಾನ್ಸಿಸ್ಕಾ ಕ್ರೊವೆಟ್ಟೊ ವಿರುದ್ಧ ಮಹೇಶ್ವರಿ ಚೌಹಾಣ್ ಅವರು ತೀವ್ರ ಪೈಪೋಟಿ ನಡೆಸಿದರು. 60 ಶಾಟ್‌ಗಳ ಫೈನಲ್‌ನಲ್ಲಿ 54 ಹಿಟ್‌ಗಳಲ್ಲಿ ಮಹೇಶ್ವರಿ ಸಮಬಲ ಸಾಧಿಸಿದರು. ಆದರೆ ಚಿನ್ನದ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಮಹೇಶ್ವರಿ ಎದುರು ಫ್ರಾನ್ಸಿಸ್ಕಾ ಕ್ರೊವೆಟ್ಟೊ ಮೇಲುಗೈ ಸಾಧಿಸಿದರು. ಹೀಗಾಗಿ 3-4 ಅಂತರದಿಂದ ಸೋತ ಮಹೇಶ್ವರಿ ಅವರು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.
ಫೈನಲ್ ನಂತರ ಮಾತನಾಡಿದ ಮಹೇಶ್ವರಿ, ನಾನು ಇಲ್ಲಿಗೆ ಬರಲು ಹಲವು ವರ್ಷಗಳಿಂದ ಸಾಕಷ್ಟು ಶ್ರಮವಹಿಸಿದ್ದೇನೆ. ಆದರೆ ಶೂಟ್ ಆಫ್ ಬಗ್ಗೆ ಸ್ವಲ್ಪ ಬೇಸರವಾಗಿದ್ದೇನೆ. ಒಟ್ಟಾರೆಯಾಗಿ ಈ ಚಾಂಪಿಯನ್‌ಶಿಪ್ ನನಗೆ ತುಂಬಾ ತೃಪ್ತಿ ನೀಡಿದೆ ಎಂದು ಹೇಳಿದ್ದಾರೆ.

ಮಹೇಶ್ವರಿ ಚೌಹಾಣ್ ಹಿನ್ನೆಲೆ :
ರಾಜಸ್ಥಾನ್ ಮೂಲದವರಾದ 27 ವರ್ಷದ ಮಹೇಶ್ವರಿ ಚೌಹಾಣ್ ಅವರು ಅಂತರರಾಷ್ಟ್ರೀಯ ಕ್ರೀಡಾಕೂಡದಲ್ಲಿ ಮಹಿಳಾ ಸ್ಕೀಟ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಮೊದಲ ಭಾರತೀಯ ಎಂಬ ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ ಕೋಚ್ ವಿಕ್ರಮ್ ಸಿಂಗ್ ಚೋಪ್ರಾ ಅವರ ಬಳಿ ತರಬೇತಿ ಪಡೆದಿರುವ ಮಹೇಶ್ವರಿ ಚೌಹಾಣ್, ಕಜಕಿಸ್ತಾನ್ ನಲ್ಲಿ ನಡೆದ 7ನೇ ಏಷ್ಯನ್ ಚಾಂಪಿಯನ್‌ಶಿಪ್ ಶಾಟ್‌ಗನ್‌ನಲ್ಲಿ ತಮ್ಮ 25 ವಯಸ್ಸಿನಲ್ಲಿ ಕಂಚು ಗೆದ್ದಿದ್ದರು. ಇದೀಗ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಡಕ್ಕೆ ಮಹೇಶ್ವರಿ ಚೌಹಾಣ್ ಆರ್ಹತೆ ಪಡೆಯುವ ಮೂಲಕ ಭಾರತದ ಕೀರ್ತಿಯನ್ನು ಮತ್ತೊಂಮ್ಮೆ ವಿಶ್ವ ಮಟ್ಟದಲ್ಲಿ ಹಾರಿಸಲು ಸಜ್ಜಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications