For Quick Alerts
ALLOW NOTIFICATIONS  
For Daily Alerts

ಲೆಜೆಂಡರಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ನಿಧನಕ್ಕೆ ಭಾರತೀಯ ಕ್ರಿಕೆಟ್ ದಿಗ್ಗಜರಿಂದ ಭಾವಪೂರ್ಣ ಸಂತಾಪ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಲೆಜೆಂಡರಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ತಮ್ಮ 77ನೇ ವಯಸ್ಸಿನಲ್ಲಿ ಸೋಮವಾರ, ಅಕ್ಟೋಬರ್ 23ರಂದು ಇಹಲೋಕ ತ್ಯಜಿಸಿದರು. ಲೆಜೆಂಡರಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ನಿಧನಕ್ಕೆ ಕ್ರಿಕೆಟ್ ಲೋಕದ ದಿಗ್ಗಜರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪ್ರಸಿದ್ಧ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ 1967 ಮತ್ತು 1979ರ ನಡುವೆ ಭಾರತ ತಂಡಕ್ಕಾಗಿ 67 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 266 ವಿಕೆಟ್‌ಗಳನ್ನು ಕಬಳಿಸಿದರು. ಇದೇ ವೇಳೆ ಬಿಷನ್ ಸಿಂಗ್ ಬೇಡಿ 10 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 7 ವಿಕೆಟ್‌ಗಳನ್ನು ಪಡೆದಿದ್ದಾರೆ.

Indian Former Cricketers Pays Tribute To Legendary Spinner Bishan Singh Bedi Passes Away

ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಎಕ್ಸ್ ಖಾತೆಯಲ್ಲಿ "ಬಿಷನ್ ಸಿಂಗ್ ಬೇಡಿ ಜಿ ಅವರ ನಿಧನದ ಬಗ್ಗೆ ಕೇಳಿ ತೀವ್ರ ದುಃಖವಾಯಿತು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು," ಎಂದು ಪೋಸ್ಟ್ ಮಾಡಿದ್ದಾರೆ.

ಬಿಷನ್ ಸಿಂಗ್ ಬೇಡಿ ಅವರಿಗೆ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ (ಟ್ವಿಟ್ಟರ್)ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

"ನಮ್ಮ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಬಿಷನ್ ಸಿಂಗ್ ಬೇಡಿ ಇನ್ನಿಲ್ಲ. ಇದು ನಮ್ಮ ಕ್ರಿಕೆಟ್ ಲೋಕಕ್ಕೆ ನಷ್ಟ. ಅವರ ಕುಟುಂಬಕ್ಕೆ ನನ್ನ ಆಳವಾದ ಸಂತಾಪಗಳು," ಎಂದು ಇರ್ಫಾನ್ ಪಠಾಣ್ ಪೋಸ್ಟ್ ಮಾಡಿದ್ದಾರೆ.

Indian Former Cricketers Pays Tribute To Legendary Spinner Bishan Singh Bedi Passes Away

ಇನ್ನು ಭಾರತದ ಮಾಜಿ ಬ್ಯಾಟರ್ ಸುರೇಶ್ ರೈನಾ ಕ್ರೀಡೆಯ ಮೇಲೆ ಬಿಷನ್ ಸಿಂಗ್ ಬೇಡಿ ಅವರ ಪ್ರಭಾವವು ಅಳೆಯಲಾಗದು ಎಂದು ಹೇಳಿದ್ದಾರೆ. "ಕ್ರಿಕೆಟ್ ಲೆಜೆಂಡ್ ಬಿಷನ್ ಸಿಂಗ್ ಬೇಡಿ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಕ್ರೀಡೆಯ ಮೇಲೆ ಅವರ ಪ್ರಭಾವವು ಅಳೆಯಲಾಗದು. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು," ಸುರೇಶ್ ರೈನಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಷನ್ ಸಿಂಗ್ ಬೇಡಿ ಯಾವಾಗಲೂ ಭಾರತೀಯ ಕ್ರಿಕೆಟ್‌ಗೆ ಬೆನ್ನೆಲುಬಾಗಿ ನಿಂತವರು ಮತ್ತು ಆಟದ ಬಗ್ಗೆ ತಮ್ಮ ಆಲೋಚನೆಗಳನ್ನು ಪ್ರಾಮಾಣಿಕವಾಗಿ ಹಂಚಿಕೊಂಡವರು ಎಂದು ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

"ಬಿಷನ್ ಪಾಜಿ ಅವರ ನಿಧನವನ್ನು ಕೇಳಿ ತೀವ್ರ ದುಃಖವಾಯಿತು. ಅವರು ಯಾವಾಗಲೂ ನನ್ನ ಬೆನ್ನಿಗೆ ನಿಂತಿದ್ದರು ಮತ್ತು ಆಟದ ಬಗ್ಗೆ ತಮ್ಮ ಆಲೋಚನೆಗಳನ್ನು ಪ್ರಾಮಾಣಿಕವಾಗಿ ಹಂಚಿಕೊಂಡರು. ಕ್ರಿಕೆಟ್ ಜಗತ್ತು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತದೆ. ಅವರ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ಹೃತ್ಪೂರ್ವಕ ಸಂತಾಪಗಳು," ಎಂದು ಕನ್ನಡಿಗ ಅನಿಲ್ ಕುಂಬ್ಳೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇದೇ ವೇಳೆ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು ಬಿಷನ್ ಸಿಂಗ್ ಬೇಡಿ ಅವರನ್ನು ದಂತಕಥೆ ಮತ್ತು ಕ್ರೀಡೆಯ ನಿಜವಾದ ರಾಯಭಾರಿ ಎಂದು ಕರೆದರು.

"ಒಬ್ಬ ದಂತಕಥೆ ಮತ್ತು ಕ್ರೀಡೆಯ ನಿಜವಾದ ರಾಯಭಾರಿಯಾಗಿದ್ದ ಬಿಷನ್ ಸಿಂಗ್ ಬೇಡಿ ಸರ್ ಅವರ ನಿಧನದ ಬಗ್ಗೆ ಕೇಳಿ ತೀವ್ರ ದುಃಖವಾಯಿತು. ಭಾರತೀಯ ಕ್ರಿಕೆಟ್‌ಗೆ ಅವರ ಕೊಡುಗೆ ಎಂದೆಂದಿಗೂ ಸ್ಮರಣೀಯ. ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು," ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.

ಜನಪ್ರಿಯ ಕ್ರಿಕೆಟ್ ನಿರೂಪಕ ಹರ್ಷಾ ಭೋಗ್ಲೆ ಕೂಡ ಬಿಷನ್ ಸಿಂಗ್ ಬೇಡಿ ಅವರನ್ನು ನಿಜವಾದ ಕ್ರಿಕೆಟ್ ಶ್ರೇಷ್ಠ ಎಂದಿದ್ದಾರೆ. "ಒಬ್ಬ ನಿಜವಾದ ಕ್ರಿಕೆಟ್ ಶ್ರೇಷ್ಠ, ಹೆಮ್ಮೆಯ ಭಾರತೀಯ ಮತ್ತು ಶುದ್ಧ ಕ್ರಿಕೆಟ್ ಪ್ರೇಮಿ ಯಾವಾಗಲೂ ಅಮರ. ಬಿಷನ್ ಸಿಂಗ್ ಬೇಡಿ ಅವರ ನಿಧನ ಭಾರತಕ್ಕೆ ಮತ್ತು ಕ್ರಿಕೆಟ್‌ಗೆ ಅತ್ಯಂತ ದುಃಖಕರ ದಿನವಾಗಿದೆ. ಅವರು ಯಾವಾಗಲೂ ಪ್ರೋತ್ಸಾಹಿಸುತ್ತಿದ್ದರು ಮತ್ತು ಅವರ ನಗುವನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ," ಎಂದು ಹರ್ಷಾ ಭೋಗ್ಲೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದು, "ಬಿಷನ್ ಸಿಂಗ್ ಬೇಡಿ ಅವರ ನಿಧನವನ್ನು ಕೇಳಿ ದುಃಖವಾಗಿದೆ. ಭಾರತೀಯ ಕ್ರಿಕೆಟ್ ಇಂದು ಒಂದು ಐಕಾನ್ ಅನ್ನು ಕಳೆದುಕೊಂಡಿದೆ. ಬೇಡಿ ಸರ್ ಅವರು ಕ್ರಿಕೆಟ್ ಯುಗವನ್ನು ವ್ಯಾಖ್ಯಾನಿಸಿದರು ಮತ್ತು ಅವರು ಸ್ಪಿನ್ ಬೌಲರ್ ಮತ್ತು ತಮ್ಮ ಕಲಾತ್ಮಕತೆಯಿಂದ ಆಟದ ಮೇಲೆ ಅಳಿಸಲಾಗದ ಛಾಪನ್ನು ಮೂಡಿಸಿದ್ದಾರೆ," ಎಂದು ಹೇಳಿದ್ದಾರೆ.

ಎರಪಳ್ಳಿ ಪ್ರಸನ್ನ, ಬಿಎಸ್ ಚಂದ್ರಶೇಖರ್ ಮತ್ತು ಎಸ್. ವೆಂಕಟರಾಘವನ್ ಅವರೊಂದಿಗೆ ಬಿಷನ್ ಸಿಂಗ್ ಬೇಡಿ, ಭಾರತೀಯ ಸ್ಪಿನ್ ಬೌಲಿಂಗ್ ಇತಿಹಾಸದಲ್ಲಿ ಒಂದು ರೀತಿಯ ಕ್ರಾಂತಿಯ ವಾಸ್ತುಶಿಲ್ಪಿಯಾಗಿದ್ದರು. ಈ ನಾಲ್ಕು ಸ್ಪಿನ್ನರ್‌ಗಳು ಭಾರತ ಟೆಸ್ಟ್ ತಂಡದಲ್ಲಿ ಪ್ರಮುಖ ಸ್ಪಿನ್ನರ್‌ಗಳಾಗಿದ್ದರು.

ಭಾರತ ತನ್ನ ಮೊದಲ ಏಕದಿನ ಪಂದ್ಯ ಗೆಲುವಿನಲ್ಲಿ ಬಿಷನ್ ಸಿಂಗ್ ಬೇಡಿ ಪ್ರಮುಖ ಪಾತ್ರ ವಹಿಸಿದ್ದರು. 1975ರ ವಿಶ್ವಕಪ್ ಪಂದ್ಯದಲ್ಲಿ 12-8-6-1 ಅಂಕಿಅಂಶಗಳೊಂದಿಗೆ ಪೂರ್ವ ಆಫ್ರಿಕಾವನ್ನು 120 ರನ್‌ಗಳಿಗೆ ನಿಯಂತ್ರಿಸಿದ್ದರು.

ಸೆಪ್ಟೆಂಬರ್ 25, 1946ರಂದು ಪಂಜಾಬ್‌ನ ಅಮೃತಸರದಲ್ಲಿ ಜನಿಸಿದ ಬಿಷನ್ ಸಿಂಗ್ ಬೇಡಿ, ಅತ್ಯಂತ ನುರಿತ ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ ಆಗಿದ್ದರು. ಅವರ ಆಕರ್ಷಕವಾದ ಬೌಲಿಂಗ್ ಶೈಲಿಯು ವಿಭಿನ್ನವಾಗಿತ್ತು. ಅವರು 1966ರಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರಯಾಣವನ್ನು ಪ್ರಾರಂಭಿಸಿದರು, 1979ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದರು.

ಬಿಷನ್ ಸಿಂಗ್ ಬೇಡಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ವಂಚಿಸಲು ಸೂಕ್ಷ್ಮ ವ್ಯತ್ಯಾಸಗಳನ್ನು ಬಳಸಿಕೊಂಡು ಗಾಳಿಯಲ್ಲಿ ಬೌಲಿಂಗ್ ಮಾಡುವುದು ಮತ್ತು ಸ್ಪಿನ್‌ನಲ್ಲಿ ಅವರ ಪಾಂಡಿತ್ಯಕ್ಕಾಗಿ ಹೆಸರುವಾಸಿಯಾಗಿದ್ದರು.

1971ರಲ್ಲಿ ಗಾಯಗೊಂಡಿದ್ದ ಅಜಿತ್ ವಾಡೇಕರ್ ಅನುಪಸ್ಥಿತಿಯಲ್ಲಿ ಬಿಷನ್ ಸಿಂಗ್ ಬೇಡಿ ಭಾರತ ತಂಡದ ನಾಯಕತ್ವ ವಹಿಸಿ ಇಂಗ್ಲೆಂಡ್ ವಿರುದ್ಧ ಭಾರತದ ಐತಿಹಾಸಿಕ ಸರಣಿ ವಿಜಯದಲ್ಲಿ ಅವರ ನಾಯಕತ್ವವು ಪ್ರಮುಖವಾಗಿತ್ತು. ಇದು ಸ್ಪರ್ಧಾತ್ಮಕ ಕ್ರಿಕೆಟ್ ರಾಷ್ಟ್ರವಾಗಿ ಭಾರತದ ಖ್ಯಾತಿಯನ್ನು ಜಗದ್ವಿಖ್ಯಾತಿಗೊಳಿಸಿದರು.

Story first published: Monday, October 23, 2023, 19:00 [IST]
Other articles published on Oct 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+