Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಳ್ಳಬೇಟೆ ಆರೋಪದಡಿ ಭಾರತದ ಗಾಲ್ಫರ್ ಜ್ಯೋತಿ ರಾಂಧವ ಬಂಧನ

ರಾಂಧವ ಹೆಸರಿನಲ್ಲಿ ರಿಜಿಸ್ಟರ್ಡ್ ಆಗಿದ್ದ ಕಾರಿನಲ್ಲಿ ಕಾಡು ಹಂದಿಯ ಚರ್ಮ, ಬೈನಾಕ್ಯುಲರ್ ಮತ್ತು ಬಂಧೂಕನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

ಲಕ್ನೋ, ಡಿಸೆಂಬರ್ 26: ವನ್ಯ ಮೃಗಗಳನ್ನು ಬೇಟೆಯಾಡಿದ ಆರೋಪದಡಿಯಲ್ಲಿ ಭಾರತದ ಗಾಲ್ಫರ್ ಜ್ಯೂತಿ ರಾಂಧವ ಅವರನ್ನು ಉತ್ತರ ಪ್ರದೇಶದ ಅರಣ್ಯ ಇಲಾಖಾ ಪೊಲೀಸರು ಬುಧವಾರ (ಡಿಸೆಂಬರ್ 26) ಬಂಧಿಸಿದ್ದಾರೆ. ಬಂಧಿತ ಖ್ಯಾತ ಗಾಲ್ಫರ್‌ನಿಂದ ಬಂದೂಕು ವಶಪಡಿಸಿಕೊಳ್ಳಲಾಗಿದೆ.

ಬಾಲಿವುಡ್ ನಟಿ ಚಿತ್ರಾಂಗದ ಸಿಂಗ್ ಅವರ ಮಾಜಿ ಪತಿಯಾಗಿರುವ ರಾಂಧವ್ ಅವರನ್ನು ಬಂಧಿಸಿರುವ ಪೊಲೀಸರು ಕಳ್ಳಬೇಟೆಗೆ ಬಳಸಿದ್ದರೆನ್ನಲಾದ ಕಾರು, ಮಾರಕಾಸ್ತ್ರ ಇನ್ನಿತರ ವಸ್ತುಗಳನ್ನೂ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಾಂಧವ ಹೆಸರಿನಲ್ಲಿ ರಿಜಿಸ್ಟರ್ಡ್ ಆಗಿದ್ದ ಕಾರಿನಲ್ಲಿ ಕಾಡು ಹಂದಿಯ ಚರ್ಮ, ಬೈನಾಕ್ಯುಲರ್ ಮತ್ತು ಬಂಧೂಕನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ. ಮಾಹಿತಿಯ ಪ್ರಕಾರ, ಜ್ಯೋತಿಂಧರ್ ಸಿಂಗ್ ರಾಂಧವ ಅವರು ತನ್ನ ಸಹಚರನೊಂದಿಗೆ ಕತಾರ್ನಿಘಾಟ್​ ಮೋತಿಪುರ್​ ಅರಣ್ಯ ವಲಯದಲ್ಲಿ ಬೇಟೆಯಾಡಿದ ಪ್ರಕರಣ ಸಂಬಂಧ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

Story first published: Wednesday, December 26, 2018, 13:20 [IST]
Other articles published on Dec 26, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+