U-20 World Athletics Championships: 4x400 ಮೀ. ಮಿಕ್ಸ್ಡ್ ರಿಲೇಯಲ್ಲಿ ಭಾರತಕ್ಕೆ ಕಂಚು

ನೈರೋಬಿ: ಕೀನ್ಯಾದ ನೈರೋಬಿಯಲ್ಲಿ ನಡೆದ ಅಂಡರ್-20 ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಮಿಕ್ಸ್ಡ್ ರಿಲೇ ತಂಡ ಕಂಚಿನ ಪದಕ ಜಯಿಸಿದೆ. ಬುಧವಾರ (ಆಗಸ್ಟ್ 18) ನಡೆದ ಓಟದ ಸ್ಪರ್ಧೆಯಲ್ಲಿ ಕಂಚು ಗೆಲ್ಲುವುದರೊಂದಿಗೆ ಭಾರತ ಇದು ಈ ಕ್ರೀಡಾಕೂಟದಲ್ಲಿ ಐದನೇ ಪದಕ ತನ್ನದಾಗಿಸಿಕೊಂಡಂತಾಗಿದೆ.
4x400 ಮಿಕ್ಸ್ಡ್ ರಿಲೇ ಫೈನಲ್ ಸ್ಪರ್ಧೆಯಲ್ಲಿ ಭರತ್ ಎಸ್, ಪ್ರಿಯಾ ಮೋಹನ್, ಸುಮ್ಮಿ ಮತ್ತು ಕಪಿಲ್ ಅವರಿದ್ದ ತಂಡ 3:20.60 ಸೆಕೆಂಡ್ ಕಾಲಾವಧಿಯೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ. ಇದೇ ವಿಭಾಗದಲ್ಲಿ ನೈಜೀರಿಯಾ ಮತ್ತು ಪೋಲ್ಯಾಂಡ್ ತಂಡಗಳು ಕ್ರಮವಾಗಿ ಬಂಗಾರ (3:19.70 ಸೆ.) ಮತ್ತು ಬೆಳ್ಳಿ (3:19.80 ಸೆ.) ಪದಕ ಗೆದ್ದವು.
ಬುಧವಾರ ಬೆಳಗ್ಗೆ ನಡೆದ ಹೀಟ್ಸ್‌ನಲ್ಲಿ 3:23.36 ಸೆಕೆಂಡ್ ಕಾಲಾವಧಿಯೊಂದಿಗೆ ಭಾರತ ತಂಡ ಫೈನಲ್‌ಗೆ ಪ್ರವೇಶಿಸಿತ್ತು. 4x400 ಮೀ. ಮಿಕ್ಸ್ಡ್ ರಿಲೇ ಹೀಟ್ಸ್‌ನಲ್ಲಿ 3:23.36 ಸೆ. ಕಾಲಾವಧಿ ಓವರ್‌ಆಲ್ ಆಗಿ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಬೆಸ್ಟ್ ಟೈಮಿಂಗ್ ಆಗಿ ಗುರುತಿಸಿಕೊಂಡಿದೆ.
ಬುಧವಾರ ಮಿಕ್ಸ್ಡ್ ರಿಲೇ ಕಂಚಿಗೂ ಮುನ್ನ ಈ ಕ್ರೀಡಾಕೂಟದಲ್ಲಿ ಅಂದರೆ ಅಂಡರ್ 20 ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸೀಮಾ ಅಂತಿಲ್ (ಡಿಸ್ಕಸ್ ಥ್ರೋನಲ್ಲಿ ಕಂಚು, 2002), ನವಜೀತ್ ಕೌರ್ ಧಿಲ್ಲೊನ್ (ಡಿಸ್ಕಸ್ ಥ್ರೋ ಕಂಚು, 2014), ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ (ಜಾವೆಲಿನ್‌ನಲ್ಲಿ ಬಂಗಾರ, 2016), ಹಿಮಾ ದಾಸ್ (400 ಮೀಟರ್ ಓಟದಲ್ಲಿ ಬಂಗಾರ, 2018) ಬಂಗಾರ ಗೆದ್ದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications