Asian Relay Championship: ಚಿನ್ನ ಗೆದ್ದು ದಾಖಲೆ ನಿರ್ಮಿಸಿದ ಭಾರತದ ಮಿಶ್ರ ರಿಲೇ ತಂಡ
ಮೇ 20 ಸೋಮವಾರ, ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ರಿಲೇ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಭಾರತದ ಮಿಶ್ರ 4×400 ರಿಲೇ ತಂಡ ದಾಖಲೆ ನಿರ್ಮಿಸಿದೆ.
ಮುಹಮ್ಮದ್ ಅಜ್ಮಲ್, ಜ್ಯೋತಿಕಾ ಶ್ರೀ ದಂಡಿ, ಅಮೋಜ್ ಜೇಕಬ್ ಮತ್ತು ಶುಭಾ ವೆಂಕಟೇಶನ್ ಅವರು 3 ನಿಮಿಷ 14.12 ಸೆಕೆಂಡ್‌ಗಳಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಶ್ರೀಲಂಕಾ 3 ನಿಮಿಷ 17.00 ಸೆಕೆಂಡ್‌ಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ವಿಯೆಟ್ನಾಂ 3 ನಿಮಿಷ 18.45 ಸೆಂಕೆಡ್‌ಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ.

ಏಷ್ಯನ್ ರಿಲೇ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದರೂ ಭಾರತ ತಂಡಕ್ಕೆ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ. ಈ ಗೆಲುವಿನೊಂದಿಗೆ ಭಾರತ ತಂಡ 23ನೇ ಸ್ಥಾನದಿಂದ 21ನೇ ಸ್ಥಾನಕ್ಕೇರಿದೆ.
ಆದರೆ ಪ್ಯಾರಿಸ್ ಅಥ್ಲೆಟಿಕ್ಸ್ ಪಟ್ಟಿಯಲ್ಲಿ 15 ಅಥವಾ 16 ನೇ ಸ್ಥಾನದಲ್ಲಿ ವರೆಗಿನ ತಂಡಗಳಿಗೆ ಮಾತ್ರ ಸ್ಪರ್ಧೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ಪ್ಯಾರಿಸ್‌ನಲ್ಲಿ ನಡೆಯುವ ಮಿಶ್ರ 4x400ಮೀ ರಿಲೇ ಸ್ಪರ್ಧೆಯಲ್ಲಿ ಕೇವಲ 16 ತಂಡಗಳು ಮಾತ್ರ ಸ್ಪರ್ಧಿಸಲಿರುವುದರಿಂದ ಈ ಬಾರಿಯೂ ಒಲಿಂಪಿಕ್ಸ್ ನಿಂದ ಭಾರತದ ತಂಡ ದೂರ ಉಳಿದಿದೆ.
ಈ ತಿಂಗಳ ಆರಂಭದಲ್ಲಿ ಬಹಾಮಾಸ್‌ನ ನಸ್ಸೌದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ರಿಲೇಗಳಲ್ಲಿ 14 ಮಿಶ್ರ 4x400 ಮೀ ತಂಡಗಳು ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸ್ವಯಂಚಾಲಿತವಾಗಿ ಅರ್ಹತೆ ಪಡೆದಿವೆ. ಜೂನ್ 30ರ ಅರ್ಹತಾ ಗಡುವಿನವರೆಗೆ ದೇಶಗಳ ಉತ್ತಮ ಸಮಯದ ಆಧಾರದ ಮೇಲೆ ಕೇವಲ ಎರಡು ಸ್ಥಾನಗಳನ್ನು ಭರ್ತಿ ಮಾಡಲು ಉಳಿದಿದೆ.
ಜೆಕ್ ರಿಪಬ್ಲಿಕ್ (3:11.98) ಮತ್ತು ಇಟಲಿ (3:13.56) ಪ್ರಸ್ತುತ ರೋಡ್ ಟು ಪ್ಯಾರಿಸ್ ಪಟ್ಟಿಯಲ್ಲಿ ಕ್ರಮವಾಗಿ 15, 16 ನೇ ಸ್ಥಾನದಲ್ಲಿವೆ. ಭಾರತವು ಬಹಾಮಾಸ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ರಿಲೇ ಸ್ಪರ್ಧೆಯಲ್ಲಿ ಪ್ಯಾರಿಸ್ ಟಿಕೆಟ್ ಕಾಯ್ದಿರಿಸಿದ ಟಾಪ್ 14 ತಂಡಗಳಿಗಿಂತ ಕೆಳಗಿದೆ. .
ಕಳೆದ ವರ್ಷ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡವು ಬೆಳ್ಳಿ ಪದಕ ಗೆದ್ದಿತ್ತು. ಈ ವೇಳೆ 3 ನಿಮಿಷ 14.34 ಸೆಕೆಂಡ್‌ಗಳಲ್ಲಿ ದಾಖಲೆಯ ಓಟವನ್ನು ಪೂರ್ಣಗೊಳಿಸಿತ್ತು.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಪುರುಷ ಮತ್ತು ಮಹಿಳೆಯರ ರಿಲೇ ತಂಡಗಳು
ಬಹಾಮಾಸ್‌ನ ನಸ್ಸೌದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ರಿಲೇ ಸ್ಪರ್ಧೆಯಲ್ಲಿ ಭಾರತದ ಪುರುಷ ಮತ್ತು ಮಹಿಳೆಯರ 4x400 ಮೀಟರ್ ರಿಲೇ ತಂಡಗಳು ತಮ್ಮ ಎರಡನೇ ಸುತ್ತಿನ ಹೀಟ್ಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದುಕೊಂಡಿವೆ.
ಮಹಿಳೆಯರ ತಂಡದಲ್ಲಿ ರೂಪಲ್ ಚೌಧರಿ, ಎಂ ಆರ್ ಪೂವಮ್ಮ, ಜ್ಯೋತಿಕಾ ಶ್ರೀ ದಂಡಿ ಮತ್ತು ಶುಭಾ ವೆಂಕಟೇಶನ್ ಹಾಗು ಪುರುಷರ ತಂಡದಲ್ಲಿ ಮುಹಮ್ಮದ್ ಅನಾಸ್ ಯಾಹಿಯಾ, ಮುಹಮ್ಮದ್ ಅಜ್ಮಲ್, ಅರೋಕಿಯಾ ರಾಜೀವ್ ಮತ್ತು ಅಮೋಜ್ ಜಾಕೋಬ್ ಅವರು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತಮ್ಮ ಟಿಕೆಟ್ ಕಾಯ್ದಿರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications