Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

BFI: ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಅಮಾನತು; ಐಒಎ ಮಹತ್ವದ ನಿರ್ಧಾರ

ಭಾರತ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಸೋಮವಾರ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್‌ಐ) ಅನ್ನು ಅಮಾನತುಗೊಳಿಸಿದೆ. ಏಕೆಂದರೆ ಬಿಎಫ್‌ಐನ ಪದಾಧಿಕಾರಿಗಳ ಚುನಾವಣೆಗಳು ನಡೆದಿಲ್ಲ. ಇದರ ಪರಿಣಾಮವಾಗಿ ಫೆಡರೇಶನ್‌ಯೊಳಗೆ ಆಡಳಿತಾತ್ಮಕ ಅಸ್ಥಿರತೆ ಉಂಟಾಗಿದೆ. ಆದ್ದರಿಂದ ಬಿಎಫ್‌ಐ ಅನ್ನು ಅಮಾನತುಗೊಳಿಸು ಮೂಲಕ ದೇಶದಲ್ಲಿ ಬಾಕ್ಸಿಂಗ್‌ನ ದಿನನಿತ್ಯದ ಕಾರ್ಯಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಐಒಎ ಐದು ಸದಸ್ಯರ ತಾತ್ಕಾಲಿಕ ಸಮಿತಿಯನ್ನು ರಚಿಸಿದೆ.

ಆಡಳಿತ ನಿಯಮಗಳ ಪ್ರಕಾರ, ಬಿಎಫ್‌ಐನ ಪದಾಧಿಕಾರಿಗಳ ಚುನಾವಣೆಯನ್ನು ಫೆಬ್ರವರಿ 2, 2025 ರಂದು ಅಥವಾ ಅದಕ್ಕೂ ಮೊದಲು ನಡೆಸಬೇಕಿತ್ತು. ಆದರೆ ಬಿಎಫ್‌ಐ ತನ್ನ ಪದಾಧಿಕಾರಿಗಳ ಚುನಾವಣೆಗಳನ್ನು ನಡೆಸುವಲ್ಲಿ ವಿಫಲವಾಗಿದೆ ಎಂದು ಐಒಎ ಹೇಳಿದೆ.

Indian Olympic Association suspends Boxing Federation of India

ಜಾರ್ಖಂಡ್‌ನ ಅನುಭವಿ ಕ್ರೀಡಾ ಆಡಳಿತಾಧಿಕಾರಿ ಮಧುಕಾಂತ್ ಪಾಠಕ್ ಅವರನ್ನು ತಾತ್ಕಾಲಿಕ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಿಮಾಚಲ ಪ್ರದೇಶದ ಮತ್ತೊಬ್ಬ ಅನುಭವಿ ಕ್ರೀಡಾ ಆಡಳಿತಾಧಿಕಾರಿ ರಾಜೇಶ್ ಭಂಡಾರಿ ಅವರು ಉಪಾಧ್ಯಕ್ಷರಾಗಿದ್ದಾರೆ. ಉತ್ತರಾಖಂಡದ ತಾಂತ್ರಿಕ ಅಧಿಕಾರಿ ಡಿಪಿ ಭಟ್, ಅಸ್ಸಾಂನ ಅಂತರರಾಷ್ಟ್ರೀಯ ಬಾಕ್ಸರ್ ಶಿವ ಥಾಪಾ ಮತ್ತು ವೀರೇಂದ್ರ ಸಿಂಗ್ ಠಾಕೂರ್ ಅವರು ಐಒಎ ರಚಿಸಿದ ತಾತ್ಕಾಲಿಕ ಸಮಿತಿಯ ಇತರ ಮೂವರು ಸದಸ್ಯರು.

ನಿಗದಿತ ಸಮಯದ ಹೊರತಾಗಿಯೂ ಚುನಾವಣೆಗಳು ನಡೆದಿಲ್ಲ. ಇದು ಒಕ್ಕೂಟದೊಳಗೆ ಅಸ್ಥಿರತೆಗೆ ಕಾರಣವಾಗಿದೆ. ಬಾಕ್ಸಿಂಗ್ ಒಕ್ಕೂಟದಲ್ಲಿರುವ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಭಾರತದ ಬಾಕ್ಸರ್‌ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವುದನ್ನು ಖಚಿತಪಡಿಸಿಕೊಳ್ಳಲು ಸಮಿತಿಯು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಐಒಎ ತಿಳಿಸಿದೆ.

ಬಿಎಫ್‌ಐನ ಪದಾಧಿಕಾರಿಗಳ ಚುನಾವಣೆಗಳು ನವೆಂಬರ್ 2024 ರಲ್ಲಿ ನಡೆಯಬೇಕಿತ್ತು. ಹಲವಾರು ರಾಜ್ಯ ಘಟಕಗಳು ಹಾಲಿ ಬಿಎಫ್‌ಐ ಮುಖ್ಯಸ್ಥ ಅಜಯ್ ಸಿಂಗ್ ಮತ್ತು ಕಾರ್ಯದರ್ಶಿ ಹೇಮಂತ ಕುಮಾರ್ ಕಲಿತಾ ಅವರಿಗೆ ಚುನಾವಣೆಗಳನ್ನು ನಡೆಸುವಂತೆ ತಿಳಿಸಿದ್ದವು. ಆದರೆ ಈ ಬಗ್ಗೆ ಬಿಎಫ್‌ಐ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಐಒಎ ಬಿಎಫ್‌ಐನ ಪದಾಧಿಕಾರಿಗಳ ಚುನಾವಣೆಯನ್ನು 2025ರ ಮಾರ್ಚ್ ತಿಂಗಳಲ್ಲಿ ನಡೆಸಲು ಸಜ್ಜಾಗಿದೆ.

Story first published: Monday, February 24, 2025, 22:16 [IST]
Other articles published on Feb 24, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+