ಒಲಿಂಪಿಕ್ಸ್‌ನಲ್ಲಿ ವಿವಿಧ ದೇಶಗಳ ಪರವಾಗಿ ಪದಕ ಗೆದ್ದ ಭಾರತೀಯ ಮೂಲದ ಕ್ರೀಡಾಪಟುಗಳು
ವಿವಿಧ ಜನಾಂಗಗಳು, ಸಂಸ್ಕೃತಿಗಳು ಮತ್ತು ಹಿನ್ನೆಲೆಗಳಿಂದ ಬರುವ ಕ್ರೀಡಾಪಟುಗಳು ತಮ್ಮ ರಾಷ್ಟ್ರಗಳನ್ನು ಹೆಮ್ಮೆಯಿಂದ ಪ್ರತಿನಿಧಿಸುವ ಕ್ರೀಡೆಗಳ ಶ್ರೇಷ್ಠ ಆಚರಣೆಯಾಗಿ ಒಲಿಂಪಿಕ್ ಕ್ರೀಡಾಕೂಟ ನಿಂತಿದೆ.
ಅಂತವರಲ್ಲಿ ಭಾರತೀಯ ಮೂಲದ ಅಥ್ಲೀಟ್‌ಗಳು ಜಾಗತಿಕ ಮಟ್ಟದಲ್ಲಿ ಮಿಂಚಿದ್ದಾರೆ. ತಮ್ಮ ಮೂಲ ದೇಶ ಮತ್ತು ತಮ್ಮ ದತ್ತು ಪಡೆದ ದೇಶಗಳಿಗೆ ಕೀರ್ತಿ ತಂದಿದ್ದಾರೆ.

ಇನ್ನು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ ಒಟ್ಟು 35 ಪದಕಗಳನ್ನು ಗೆದ್ದಿದೆ. ಬೇರೆ ದೇಶದ ಪರವಾಗಿ ಭಾಗವಹಿಸಿ ಒಲಿಂಪಿಕ್ ಪದಕ ಗೆದ್ದ ಭಾರತೀಯ ಮೂಲದ ಕ್ರೀಡಾಪಟುಗಳ ಬಗ್ಗೆ ಗಮನಿಸೋಣ.
1. ಮೋಹಿನಿ ಭಾರದ್ವಾಜ್ (ಜಿಮ್ನಾಸ್ಟಿಕ್ಸ್, ಯುಎಸ್ಎ)
ಮೋಹಿನಿ ಭಾರದ್ವಾಜ್, ನೈಜ ಟ್ರಯಲ್‌ಬ್ಲೇಜರ್ ಜಿಮ್ನಾಸ್ಟ್ ಆಗಿದ್ದಾರೆ. ಅವರು ಯುಎಸ್ಎ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿ ಜನಿಸಿದರು.
ಭಾರತದಲ್ಲಿ ಬೇರುಗಳನ್ನು ಹೊಂದಿರುವ ಮತ್ತು ಯುಎಸ್ಎ ಪರಗಾಗಿ ಸ್ಪರ್ಧಿಸುವ ಮೂಲಕ, ಮೋಹಿನಿ ಭಾರದ್ವಾಜ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ-ಅಮೆರಿಕನ್ ಜಿಮ್ನಾಸ್ಟ್ ಆಗಿದ್ದಾರೆ. 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಅವರು ಮಹಿಳಾ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು.

2. ರಾಜ್ ಭಾವಸರ್ (ಜಿಮ್ನಾಸ್ಟಿಕ್ಸ್, ಯುಎಸ್ಎ)
ಮತ್ತೊಬ್ಬ ಅಮೆರಿಕನ್ ಜಿಮ್ನಾಸ್ಟ್ ರಾಜ್ ಭಾವಸರ್. ಅವರು ಯುಎಸ್ಎಯ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಜನಿಸಿದರು. ರಾಜ್ ಭಾವಸರ್ ಅವರ ತಂದೆ ಗುಜರಾತ್‌ನ ವಡೋದರಾದಿಂದ ವಲಸೆ ಬಂದವರು ಮತ್ತು ಅವರ ತಾಯಿ ಉಗಾಂಡಾದ ಕಂಪಾಲಾದಲ್ಲಿ ಜನಿಸಿದರು. ಆದರೆ ರಾಜ್ ಭಾವಸರ್ ಗುಜರಾತ್‌ನಲ್ಲಿ ಶಿಕ್ಷಣ ಪಡೆದರು.
ರಾಜ್ ಭಾವಸರ್ ತಂದೆ ಕೆಲಸದ ಅವಕಾಶಗಳಿಗಾಗಿ ಅಮೆರಿಕಗೆ ವಲಸೆ ಹೋದರು. ಅಲ್ಲಿ ರಾಜ್ ಭಾವಸರ್ ಜಿಮ್ನಾಸ್ಟಿಕ್ಸ್ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡರು ಮತ್ತು ಆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದರು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪುರುಷರ ಕಲಾತ್ಮಕ ತಂಡದ ಆಲ್‌ರೌಂಡ್ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

3. ರಾಜೀವ್ ರಾಮ್ (ಟೆನ್ನಿಸ್, ಯುಎಸ್ಎ)
ಕರ್ನಾಟಕದ ಬೆಂಗಳೂರಿನಿಂದ ಯುಎಸ್ಎ ವಲಸೆ ಬಂದ ಪೋಷಕರಿಗೆ ಅಮೆರಿಕದಲ್ಲಿ ಜನಿಸಿದ ರಾಜೀವ್ ರಾಮ್ ಅವರು ಅದೇ ದೇಶವನ್ನು ಪ್ರತಿನಿಧಿಸಿ ಟೆನ್ನಿಸ್‌ನಲ್ಲಿ ಯಶಸ್ಸು ಸಾಧಿಸಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ವೀನಸ್ ವಿಲಿಯಮ್ಸ್ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಟೆನ್ನಿಸ್ ಡಬಲ್ಸ್ ಸ್ಪೆಷಲಿಸ್ಟ್ ಬೆಳ್ಳಿ ಪದಕ ಗೆದ್ದುಕೊಂಡರು.
4. ಅಲೆಕ್ಸಿ ಗ್ರೆವಾಲ್ (ಸೈಕ್ಲಿಂಗ್, ಯುಎಸ್ಎ)
ಅಲೆಕ್ಸಿ ಸಿಂಗ್ ಗ್ರೆವಾಲ್ ಅವರು ಅಮೆರಿಕದಲ್ಲಿ ಪಂಜಾಬಿ ಸಿಖ್ ಕುಟುಂಬದಲ್ಲಿ ಜನಿಸಿದರು. ಅವರಿಗೆ ರಿಷಿ ಮತ್ತು ರಂಜೀತ್ ಎಂಬ ಇಬ್ಬರು ಸಹೋದರರಿದ್ದಾರೆ, ಅವರು ಸೈಕ್ಲಿಸ್ಟ್‌ಗಳಲ್ಲಿ ನಿಪುಣರಾಗಿದ್ದಾರೆ.
1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ರೋಡ್ ರೇಸ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಅಮೆರಿಕದ ಪರ ಚಿನ್ನದ ಪದಕವನ್ನು ಗೆದ್ದ ಬಳಿಕ ಅಲೆಕ್ಸಿ ಗ್ರೆವಾಲ್ ರಾಷ್ಟ್ರೀಯ ಹೀರೋ ಆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications