17ನೇ ವಯಸ್ಸಿಗೆ ಸೇನೆ ಸೇರಿ ಸ್ಫೋಟದಲ್ಲಿ ಕಾಲು ಕಳೆದುಕೊಂಡ ಯುವಕ, ಪ್ಯಾರಾಲಿಂಪಿಕ್ಸ್ ಪದಕದ ಸಾಧಕ
ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟ ಪ್ಯಾರಿಸ್‌ನಲ್ಲಿ ನಡೆಯುತ್ತಿದೆ. ಈ ಕ್ರೀಡಾ ಕೂಟದಲ್ಲಿ ಭಾರತೀಯ ಅಥ್ಲೀಟ್‌ಗಳು ಅಮೋಘ ಸಾಧನೆ ಮಾಡಿದ್ದಾರೆ. ಈ ವೇಳೆ ಶುಕ್ರವಾರ ತಡ ರಾತ್ರಿ ಎಲ್ಲರ ಚಿತ್ತವನ್ನು ನಾಗಾಲ್ಯಾಂಡ್‌ನ ಪ್ಯಾರಾ ಅಥ್ಲಿಟ್ ಕದ್ದಿದ್ದಾರೆ.
ಭಾರತದ ಅಥ್ಲೀಟ್‌ಗಳು ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಅಮೋಘ ಸಾಧನೆ ಮುಂದುವರೆಸಿದ್ದಾರೆ. ಈ ವರೆಗೆ ಭಾರತ ಕ್ರೀಡಾ ಕೂಟದಲ್ಲಿ ಒಟ್ಟು 27 ಪದಕಗಳನ್ನು ಬಾಚಿಕೊಂಡಿದ್ದು, ಇದರಲ್ಲಿ 6 ಚಿನ್ನ ಹಾಗೂ 9 ಬೆಳ್ಳಿ ಹಾಗೂ 12 ಕಂಚಿನ ಸಾಧನೆ ಮಾಡಿದೆ. ಈ ಸಾಲಿಗೆ ಶುಕ್ರವಾರ ಕಂಚಿನ ಪದಕ ಒಂದು ಸೇರಿದೆ.

ಮಾಜಿ ಸೈನಿಕನ ಕಂಚಿನ ಸಾಧನೆ
ಪುರುಷರ ಶಾಟ್‌ಪುಟ್‌ನಲ್ಲಿ ಹೊಕಾಟೊ ಹೊಟ್ಜೆ ಸೆಮಾ ಕಂಚಿನ ಪದಕ ಗೆದ್ದಿದ್ದಾರೆ. ಇವರ ಜೀವನ ಬೇರೆಯವರೆಗೆ ಮಾದರಿ. ಇವರು ತಮ್ಮ ಹೋರಾಟದ ಮನೋಭಾವದಿಂದ ಈಗ ದೇಶದ ಚಿತ್ತ ಕದ್ದಿದ್ದಾರೆ. ಶುಕ್ರವಾರ ಐತಿಹಾಸಿ ಕಂಚಿನ ಸಾಧನೆ ಮಾಡುವ ಮೂಲಕ ಇವರು ಎಲ್ಲರನ್ನು ಒಮ್ಮೆ ತಮ್ಮತ್ತ ನೋಡುವಂತೆ ಮಾಡಿದ್ದಾರೆ.
17ನೇ ವಯಸ್ಸಿಗೆ ಸೇನೆ ಸೇರಿದ ಹೊಕಾಟೊ
ಹೊಕಾಟೊ ಭಾರತೀಯ ಮಾಜಿ ಸೇನೆಯ ಸೈನಿಕ. ಮಾಧ್ಯಮ ವರದಿಗಳ ಪ್ರಕಾರ, ಅವರು ಕೇವಲ 17 ನೇ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ಆದರೆ ಅವರ ಹಾದಿ ಸುಲಭವಾಗಿರಲಿಲ್ಲ. ಇವರು ಸೈನ್ಯದಲ್ಲಿ ವಿಶೇಷ ಪಡೆಯ ಭಾಗವಾಗಿದ್ದರು. ಇವರು ಲೈನ್ ಆಫ್ ಕಂಟ್ರೋಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಸ್ಪೋಟ ಒಂದರಲ್ಲಿ ಇವರು ತಮ್ಮ ಕಾಲುಗಳನ್ನು ಕಳೆದುಕೊಂಡರು. ಇಷ್ಟೆಲ್ಲಾ ಆದರೂ ಅವರು ತಮ್ಮ ಹೋರಾಟದ ಮನೋಭಾವನೆಯನ್ನು ಬಿಡಲಿಲ್ಲ.
ಹೊಕಾಟೊ ತಮ್ಮ ನೋವನ್ನು ಮೆಟ್ಟಿನಿಲ್ಲಲು ಕ್ರೀಡೆಯನ್ನು ಆಯ್ಕೆ ಮಾಡಿಕೊಂಡರು. ಇವರು ಶಾಟ್‌ಪುಟ್‌ನತ್ತ ಮುಖ ಮಾಡಿದರು. ಹೊಕಾಟೊ ಅವರು 40 ನೇ ವಯಸ್ಸಿನಲ್ಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕವನ್ನು ಗೆದ್ದಿದ್ದಾರೆ. ಪುರುಷರ ಶಾಟ್‌ಪುಟ್ F57 ವಿಭಾಗದ ಫೈನಲ್‌ನಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದರು. ಅವರ ಅತ್ಯುತ್ತಮ ಎಸೆತ 14.65 ಮೀಟರ್ ದೂರ ಎಸೆದು ಸಾಧನೆ ಮಾಡಿದ್ದಾರೆ.
ಈ ವಿಭಾಗದಲ್ಲಿ ಇರಾನ್‌ನ ಯಾಶಿನ್ ಖೋಸ್ರಾವಿ ಚಿನ್ನ ಗೆದ್ದಿದ್ದಾರೆ. ಅವರು 15.96 ಮೀಟರ್ ದೂರಕ್ಕೆ ಶಾಟ್ ಪುಟ್ ಎಸೆದರು. ಬ್ರೆಜಿಲ್‌ನ ಥಿಯಾಗೊ ಪಾಲಿನೊ ಬೆಳ್ಳಿ ಪದಕ ಗೆದ್ದರು. ಅವರು 15.06 ಮೀಟರ್ ದೂರಕ್ಕೆ ಎಸೆದರು. ಸದ್ಯ ಭಾರತ ತಂಡ ಪದಕ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದೆ. ಭಾರತ ಒಟ್ಟು 27 ಪದಕಗಳನ್ನು ಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications