Paris Olympics 2024: ಒಲಿಂಪಿಕ್ಸ್‌ನಲ್ಲಿ ಭಾರತದ ರೋಯಿಂಗ್-ಜೂಡೋ ಪಯಣ ಅಂತ್ಯ!
ಆಗಸ್ಟ್ 2 ಶುಕ್ರವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನ 7ನೇ ದಿನವೂ ಭಾರತದ ಕಳಪೆ ಪ್ರದರ್ಶನ ಮುಂದುವರಿದಿದೆ. ಪುರುಷರ ಸಿಂಗಲ್ಸ್ ಸ್ಕಲ್ಸ್ ಆಥ್ಲೀಟ್ ಬಲರಾಜ್ ಪನ್ವಾರ್ ಮತ್ತು ಜೂಡೋಕಾ ತುಲಿಕಾ ಮಾನ್ ಅವರ ಒಲಿಂಪಿಕ್ಸ್ ಪಯಣ ಅಂತ್ಯಗೊಂಡಿದೆ.
ಬಲರಾಜ್ ಪನ್ವಾರ್ ಪುರುಷರ ಸಿಂಗಲ್ಸ್ ಸ್ಕಲ್ಸ್ ಸ್ಪರ್ಧೆಯ ಅಂತಿಮ ಡಿನಲ್ಲಿ 7:02.37 ಸಮಯದೊಂದಿಗೆ 5ನೇ ಸ್ಥಾನ ಪಡೆದರೆ, ಮಹಿಳೆಯರ 78+ ಕೆಜಿ ತೂಕ ವಿಭಾಗದ 32ನೇ ಸುತ್ತಿನಲ್ಲಿ ಜೂಡೋಕಾ ತುಲಿಕಾ ಮಾನ್ ಕ್ಯೂಬಾದ ಇಡಾಲಿಸ್ ಒರ್ಟಿಜ್ ವಿರುದ್ಧ 28 ಸೆಕೆಂಡುಗಳ ನಂತರ 10-0 ಅಂತರದಲ್ಲಿ ಸೋಲು ಕಂಡಿದ್ದಾರೆ.

ಇವರಿಬ್ಬರ ಸೋಲಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ರೋಯಿಂಗ್ ಮತ್ತು ಜೂಡೋ ಅಭಿಯಾನ ಕೊನೆಗೊಂಡಿತು. ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಸ್ಕಲ್ಸ್ ಸ್ಪರ್ಧೆಯಲ್ಲಿ ಪದಕ ನಿರೀಕ್ಷೆ ಇಟ್ಟುಕೊಂಡಿತ್ತು.
ಒಲಿಂಪಿಕ್ಸ್‌ನಿಂದ ಬಾಲ್‌ರಾಜ್ ಪನ್ವಾರ್ ಔಟ್
ಬಾಲರಾಜ್ ಪನ್ವಾರ್ ಪ್ಯಾರಿಸ್ 2024 ರ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ಸ್ಕಲ್ಸ್ ಸ್ಪರ್ಧೆಯ ಅಂತಿಮ ಡಿ ಪಂದ್ಯದಲ್ಲಿ 7:02.37 ಸಮಯದೊಂದಿಗೆ 5ನೇ ಸ್ಥಾನ ಗಳಿಸಿ ಪ್ಯಾರಿಸ್ ಗೇಮ್ಸ್‌ನಿಂದ ಹೊರಬಿದ್ದಿದ್ದಾರೆ.
ತಮ್ಮ ಮೊದಲ ಒಲಿಂಪಿಕ್ಸ್‌ನಲ್ಲಿ ಬಾಲರಾಜ್ ಒಟ್ಟಾರೆ 23ನೇ ಸ್ಥಾನ ಪಡೆದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ರೋಯಿಂಗ್‌ನಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನವನ್ನು ನೀಡುವಲ್ಲಿ ಬಾಲರಾಜ್ ವಿಫಲವಾದರು.
ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ 11ನೇ ಸ್ಥಾನ ಪಡೆದಿರುವ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಅವರ ಪುರುಷರ ಡಬಲ್ ಸ್ಕಲ್ಸ್ ಜೋಡಿ ಹೆಸರಿನಲ್ಲಿ ಈ ದಾಖಲೆ ಇನ್ನೂ ಇದೆ.
ಮುಗ್ಗರಿಸಿದ ತುಲಿಕಾ ಮಾನ್
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 78+ ಕೆಜಿ 32ರ ಸುತ್ತಿನಲ್ಲಿ ಕ್ಯೂಬಾದ ಇಡಾಲಿಸ್ ಒರ್ಟಿಜ್ ವಿರುದ್ಧ ತುಲಿಕಾ ಮಾನ್ ಕೇವಲ 28 ಸೆಕೆಂಡುಗಳಲ್ಲಿ 10-0 ಅಂತರದಲ್ಲಿ ಸೋತರು.
ಈ ಗೆಲುವಿನೊಂದಿಗೆ, 2012ರ ಲಂಡನ್ ಒಲಿಂಪಿಕ್ಸ್ ಚಾಂಪಿಯನ್ ಒರ್ಟಿಜ್ 16 ರ ಸುತ್ತಿಗೆ ಆರ್ಹತೆ ಪಡೆದುಕೊಂಡಿದ್ದಾರೆ. ತುಲಿಕಾ ಮಾನ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications