Paris Olympic 2025: ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಭಾರೀ ಹಿನ್ನಡೆ; ಸ್ಟಾರ್ ಮಹಿಳಾ ಬಾಕ್ಸರ್ ಔಟ್!
ಆಗಸ್ಟ್ 1 ಗುರುವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ನಿಖತ್ ಝರೀನ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ.
ನಿಖತ್ ಝರೀನ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ಸುತ್ತಿನ 16 ಪಂದ್ಯದಲ್ಲಿ ಚೀನಾದ ವು ಯು ವಿರುದ್ಧ 5-0 ಸೋಲು ಅನುಭವಿಸಿದರು. ಈ ಸೋಲಿನೊಂದಿಗೆ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಝರೀನ್ ಅಭಿಯಾನ ಅಂತ್ಯಗೊಂಡಿದೆ.

ಭಾರತೀಯ ಕ್ರೀಡಾಭಿಮಾನಿಗಳು ಪ್ಯಾರಿಸ್‌ನಲ್ಲಿ ನಿಖತ್ ಝರೀನ್ ಅವರಿಂದ ಪದಕದ ನಿರೀಕ್ಷೆಯಲ್ಲಿದ್ದರು. ಆದರೆ ಚೀನಾದ ಬಾಕ್ಸರ್ ಎದುರು ಸೋತು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಝರೀನ್ ಹೊರಗುಳಿದಿದ್ದಾರೆ.
ಮೊದಲ ಶ್ರೇಯಾಂಕದ ಚೀನಾದ ವು ಯು ಆಕ್ರಮಣಕಾರಿ ರೀತಿಯಲ್ಲಿ ಪ್ರಾರಂಭಿಸಿದರು. ಮೊದಲ ಸುತ್ತಿನಲ್ಲಿಯೇ ಜರೀನ್ ಮೇಲೆ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದರು.
ಆದಾಗ್ಯೂ, ಎರಡು ಬಾರಿಯ ವಿಶ್ವ ಚಾಂಪಿಯನ್ ಭಾರತದ ಝರೀನ್ ಎರಡನೇ ಸುತ್ತಿನಲ್ಲಿ ಅದ್ಭುತ ಪುನರಾಗಮನವನ್ನು ಮಾಡಿದರು. ಆದರೆ ಚೀನಾದ ಬಾಕ್ಸರ್ ಈ ಸುತ್ತಿನಲ್ಲಿಯೂ ಗೆಲುವಿನ ನಗೆ ಬೀರಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications