Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Injury: ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಗಾಯಗೊಂಡ ಭಾರತದ ಸ್ಟಾರ್ ಮಹಿಳಾ ಕುಸ್ತಿಪಟು

ಜುಲೈ 3 ಬುಧವಾರ, ಬಹುನಿರೀಕ್ಷಿತ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಮುನ್ನ ಭಾರತದ ಸ್ಟಾರ್ ಮಹಿಳಾ ಕುಸ್ತಿಪಟು ಗಾಯಗೊಂಡಿದ್ದಾರೆ. ತರಬೇತಿ ವೇಳೆ ಸ್ಟಾರ್‌ ಕುಸ್ತಿಪಟುವಿನ ಎಡ ಭುಜಕ್ಕೆ ಪೆಟ್ಟಾಗಿದೆ.

ಮಹಿಳೆಯರ 57 ಕೆಜಿ ತೂಕ ವಿಭಾಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ 2024ರ ಕ್ರೀಡಾಕೂಟಕ್ಕೆ ಆರ್ಹತೆ ಪಡೆದಿರುವ ಭಾರತದ ಸ್ಟಾರ್‌ ಮಹಿಳಾ ಕುಸ್ತಿಪಟು ಅಂಶು ಮಲಿಕ್‌ ಅವರು ತರಬೇತಿ ಪಡೆಯುವ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ. ಅಂಶು ಮಲಿಕ್‌ ಎಡ ಭುಜ ಉಳುಕಾಗಿರುವ ಹಿನ್ನೆಲೆಯಲ್ಲಿ 2 ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ.

Indian star female wrestler Anshu Malik Injured

ತರಬೇತಿ ವೇಳೆ ಗಾಯಗೊಂಡಿದ್ದ ಅಂಶು ಅವರನ್ನು ಜೂನ್ 23 ರಂದು ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಚಿಕಿತ್ಸೆ ನೀಡಿ ಸ್ವಲ್ಪ ಗುಣಮುಖರಾದ ಮೇಲೆ ಅಂಶು ಅವರನ್ನು ಜೂನ್ 28 ರಂದು ಡಿಸ್ಚಾರ್ಜ್ ಮಾಡಲಾಗಿತ್ತು. ಅಲ್ಲದೆ, ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಕುಸ್ತಿಪಟುದಿಂದ ಸ್ಥಿತಿ ವರದಿಯನ್ನು ಕೇಳಿತ್ತು.

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಡಬ್ಲ್ಯುಎಫ್‌ಐಗೆ ಅಂಶು ಸಲ್ಲಿಸಿದ ಆಸ್ಪತ್ರೆಯ ಡಿಸ್ಚಾರ್ಜ್ ರಿಪೋರ್ಟ್‌ನಲ್ಲಿ ಕುಸ್ತಿಪಟು ವಿಶ್ರಾಂತಿ ತೆಗೆದುಕೊಳ್ಳುವಂತೆ ಮತ್ತು ಮುಂದಿನ ಎರಡು ವಾರಗಳ ಕಾಲ ಕುಸ್ತಿ ಅಭ್ಯಾಸವನ್ನು ನಡೆಸದಂತೆ ಸಲಹೆ ನೀಡಿಲಾಗಿದೆ ಎಂಬುದು ಕಂಡು ಬಂದಿದೆ.

Indian star female wrestler Anshu Malik Injured

ಕುಸ್ತಿಪಟುವಿನ ಸ್ಥಿತಿ ಸುಧಾರಿಸುತ್ತಿದ್ದು, ದಿನ ನಿತ್ಯ 30 ನಿಮಿಷಗಳ ಕಾಲ ವಾಕಿಂಗ್‌ ಮಾಡಿತ್ತಿದ್ದಾರೆ ಎಂದು ವೈದ್ಯಕೀಯ ವರದಿಗಳು ಬಹಿರಂಗಪಡಿಸಿವೆ. ಆದಾಗ್ಯೂ, ಎರಡು ವಾರಗಳ ವಿಶ್ರಾಂತಿಯ ಸಲಹೆಯು ಅಂಶು ಅವರ ಕಾಳಜಿಯ ವಿಷಯವಾಗಿದೆ. ಮಂಗಳವಾರ ಅಂಶು ಅವರ ವೈದ್ಯಕೀಯ ವರದಿಯನ್ನು ಡಬ್ಲ್ಯುಎಫ್‌ಐ ಸ್ವೀಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷದ ಏಪ್ರಿಲ್‌ನಲ್ಲಿ ನಡೆದ ಏಷ್ಯನ್ ಕುಸ್ತಿ ಒಲಿಂಪಿಕ್ ಅರ್ಹತಾ ಪಂದ್ಯಗಳಿಂದ 22 ವರ್ಷ ವಯಸ್ಸಿನ ಅಂಶು ಮಹಿಳೆಯರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ 2024ರ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ತಿಂಗಳು ಜೂನ್‌ನಲ್ಲಿ ಬುಡಾಪೆಸ್ಟ್ ಶ್ರೇಯಾಂಕ ಸರಣಿಯಲ್ಲಿ ಅಂಶು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

Indian star female wrestler Anshu Malik Injured

ಪ್ಯಾರಿಸ್‌ ಕ್ರೀಡಾಕೂಟಕ್ಕೂ ಮುನ್ನ ಅಂಶು ಕುಸ್ತಿಗೆ ಫಿಟ್ ಆದರೆ, ಎರಡನೇ ಒಲಿಂಪಿಕ್ಸ್ ಆಡಲಿದ್ದಾರೆ. ಟೋಕಿಯೊ 2020ರ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅಂಶು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಐರಿನಾ ಕುರಾಚ್ಕಿನಾ ವಿರುದ್ಧ ಸೋಲು ಕಂಡಿದ್ದರು.

ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಮಾರ್ಚ್ 31 ರಂದು ಪ್ಯಾರಿಸ್ ಕ್ರೀಡಾಕೂಟಕ್ಕಾಗಿ ಕುಸ್ತಿಪಟುಗಳು ಸೇರಿದಂತೆ ಅಥ್ಲೀಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಜುಲೈ 8 ರವರೆಗೆ ಬದಲಾವಣೆಗಳನ್ನು ಮಾಡಲು ಅವಕಾಶ ನೀಡಲಾಗಿದೆ.

ಆದರೆ ಗಾಯದ ಕಾರಣದಿಂದ ಬದಲಿ ಅಥ್ಲೇಟ್‌ಗಳನ್ನು ಆಯ್ಕೆ ಮಾಡುವುದು ಕಷ್ಟಕರವಾಗಿದೆ. ಏಕೆಂದರೆ ಪ್ರತಿ ಈವೆಂಟ್‌ನಲ್ಲಿ ಒಬ್ಬ ಹೆಸರಿನ ಕ್ರೀಡಾಪಟುವನ್ನು ಮಾತ್ರ ಬದಲಾಯಿಸಬಹುದಾಗಿದೆ.

Story first published: Wednesday, July 3, 2024, 17:56 [IST]
Other articles published on Jul 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+