ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಹಲವು ಮಹಿಳಾ ಕ್ರೀಡಾ ಪಟುಗಳು ಸಾಧನೆ ಮಾಡಿದ್ದಾರೆ. ಈ ಮೂಲಕ ಹಲವು ದೇಶಕ್ಕೆ ಕೀರ್ತಿಯನ್ನು ತಂದಿದ್ದಾರೆ. ತಮ್ಮ ಶಿಸ್ತು ಬದ್ಧ ಆಟದ ಮೂಲಕ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ನಾರಿಯರು, ದೇಶಕ್ಕೆ ಕೀರ್ತಿ ತಂದಿದ್ದಾರೆ. ಅಲ್ಲದೆ ಬೇರೆ ಕ್ರೀಡಾ ಪಟುಗಳು ಬೆಳವಣಿಗೆಗೆ ಉತ್ತೇಜನ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕೀರ್ತಿ ತಂದ ಮಹಿಳಾ ಆಟಗಾರ್ತಿಯರ ಬಗ್ಗೆ ವರದಿ ಇಲ್ಲಿದೆ.
ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಒಟ್ಟು 8 ಮಹಿಳಾ ಆಟಗಾರ್ತಿಯರು ಪದಕದ ಸಾಧನೆ ಮಾಡಿದ್ದಾರೆ. 2000ರ ಒಲಿಂಪಿಕ್ಸ್ ಕ್ರೀಡಾ ಕೂಟದಿಂದ ಇಲ್ಲಿಯವರೆಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 8 ಜನ ಮಹಿಳಾ ಆಟಗಾರ್ತಿಯರು ಪದಕದ ಸಾಧನೆಯನ್ನು ಮಾಡಿದ್ದಾರೆ.

ಸಿಡ್ನಿಯಲ್ಲಿ ಕಂಚು
ಸಿಡ್ನಿಯಲ್ಲಿ 2000ರಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟ ಆಯೋಜಿಸಲಾಗಿತ್ತು. ಈ ಕ್ರೀಡಾ ಕೂಟದಲ್ಲಿ ಭಾರತೀಯ ಮಹಿಳೆ ತಮ್ಮ ಸ್ಥಿರ ಪ್ರದರ್ಶನವನ್ನು ನೀಡಿದ್ದರು. ಭಾರತದ ಹೆಮ್ಮೆಯ ಕರ್ಣಂ ಮಲ್ಲೇಶ್ವರಿ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದರು. ಇವರು ಕ್ಲೀನ್ ಆಂಡ್ ಜರ್ಕ್‌ನಲ್ಲಿ 130 ಕೆಜಿ ಭಾರವನ್ನು ಎತ್ತಿದ್ರೆ, ಸ್ಯ್ನಾಚ್‌ನಲ್ಲಿ 110 ಕೆಜಿ ಎತ್ತಿ ಇತಿಹಾಸದ ಪುಟದಲ್ಲಿ ಸ್ಥಾನ ಪಡೆದರು.
ಸೈನಾ ಮಿಂಚು
2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತಕ್ಕೆ ಮತ್ತೊಮ್ಮೆ ಪದಕವನ್ನು ತೊಡಿಸುವಲ್ಲಿ ಕ್ರೀಡಾ ಪಟು ಯಶಸ್ವಿಯಾಗಿದ್ದಳು. ಈ ಕ್ರೀಡಾ ಕೂಟದ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸೈನಾ ನೈಹ್ವಲ್ ಬ್ಯಾಡ್ಮಿಂಟನ್ ಕ್ರೀಡಾ ಕೂಟದಲ್ಲಿ ಕಂಚಿನ ಸಾಧನೆ ಮಾಡಿದ್ದಾರೆ. ಇವರು ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಚೀನಾದ ವಾಂಗ್ ಕ್ಸಿನ್ ಅವರನ್ನು ಮಣಿಸಿದ್ದರು. ಈ ಮೂಲಕ ಭಾರತಕ್ಕೆ ಕೀತ್ತಿ ತಂದಿದ್ದರು.

ಪದಕದ ಬೇಟೆ
ಇದೇ ಒಲಿಂಪಿಕ್ಸ್‌ನಲ್ಲಿ ಲಂಡನ್‌ನಲ್ಲಿ ನಡೆದ 2012ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮಹಿಳಾ ಅಥ್ಲೀಟ್ ಮೇರಿ ಕೋಮ್ ದೊಡ್ಡ ಸಾಧನೆ ಮಾಡಿದ್ದಾರೆ. ಇವರು ಬಾಕ್ಸಿಂಗ್ ಕ್ರೀಡಾ ಕೂಟದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಮೇರ ಕೋಮ್ ಮೊದಲ ಎರಡು ಸುತ್ತುಗಳಲ್ಲಿ ಪೋಲೆಂಡ್‌ನ ಕರೋಲಿನಾ ಮಿಚಲ್‌ಜುಕ್ ಮತ್ತು ಟುನೀಶಿಯಾದ ಮರೋವಾ ರಹಾಲಿ ಅವರನ್ನು ಸೋಲಿಸಿದ್ದರು ಆದರೆ ನಂತರ ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕ ಸಾಧನೆ ಮಾಡಿದ್ದಾರೆ.
ಎರಡು ಪದಕದ ಸಾಧನೆ
ಭಾರತಕ್ಕೆ ಎರಡು ಒಲಿಂಪಿಕ್ಸ್ ಪದಕ ಗೆದ್ದ ಕೀರ್ತಿ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರಿಗೆ ಸಲ್ಲುತ್ತದೆ. ಇವರು 2016 ರಿಯೋ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಕರೋಲಿನಾ ಮರಿನ್ ವಿರುದ್ಧ ಸೋತು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಇನ್ನು 2021ರ ಟೋಕಿಯೊ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲೂ ಇವರು ತಮ್ಮ ಸ್ಥಿರ ಪ್ರದರ್ಶನವನ್ನು ಮುಂದುವರೆಸಿದ್ದರು. ಈ ಮೂಲಕ ಕಂಚಿನ ಸಾಧನೆಯನ್ನು ಮಾಡಿದರು. ಈ ಮೂಲಕ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಎರಡು ಪದಕ ಗೆದ್ದ ಮೊದಲ ಮಹಿಳಾ ಕ್ರೀಡಾ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕುಸ್ತಿ ವಿಭಾಗದಲ್ಲಿ ಕಂಚು
ಭಾರತದ ಸ್ಟಾರ್ ಮಹಿಳಾ ಕುಸ್ತಿ ಪಟು ಸಾಕ್ಷಿ ಮಲಿಕ್ ರಿಯೋ ಒಲಿಂಪಿಕ್ಸ್ 2016ರಲ್ಲಿ ದೊಡ್ಡ ಸಾಧನೆ ಮಾಡಿದ್ದರು. ಇವರು 58 ಕೆಜಿ ವಿಭಾಗದ ಕುಸ್ತಿಯಲ್ಲಿ ಕಂಚಿನ ಸಾಧನೆ ಮಾಡಿದ್ದಾರೆ. ಇದರೊಂದಿಗೆ, ಸಾಕ್ಷಿ ಮಲಿಕ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದ ದೇಶದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.
ಮೀರಾ ಸಾಧನೆ
ಸುಮಾರು 20 ವರ್ಷಗಳ ಬಳಿಕ ಒಲಿಂಪಿಕ್ಸ್‌ನ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಪರ ಮತ್ತೊಂದು ಪದಕ ಬಂದಿತು. ಈ ಬಾರಿ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಅವರು ಅಮೋಘ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಈ ಮೂಲಕ ಪ್ರತಿಷ್ಠಿತ ಕ್ರೀಡಾ ಕೂಟದಲ್ಲಿ ಪದಕ ಸಾಧನೆ ಮಾಡಿದ ಎರಡನೇ ವೇಟ್‌ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಟೋಕಿಯೋದಲ್ಲಿ ನಡೆದ ಓಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತದ ಪರ ಮತ್ತೊಬ್ಬ ಸ್ಟಾರ್ ಅಥ್ಲೀಟ್ ಕಂಚಿನ ಸಾಧನೆ ಮಾಡಿದ್ದಾರೆ. ಮೇರಿ ಕೋಮ್ ಬಳಿಕ ಬಾಕ್ಸಿಂಗ್ ವಿಭಾಗದಲ್ಲಿ ಪದಕ ಸಾಧನೆ ಮಾಡಿರುವ ಕೀರ್ತಿ, ಲೊವ್ಲಿನಾ ಬೋರ್ಹೆಗನ್ ಅವರಿಗೆ ಸಲ್ಲುತ್ತದೆ. ಇವರು ವೆಲ್ಟರ್‌ವೇಟ್ ಸ್ಪರ್ಧೆಯಲ್ಲಿ 69 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.

ಮನು ಡಬಲ್ ಸಾಧನೆ
ಇತ್ತೀಚಿಗೆ ಪ್ಯಾರೀಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತದ ಹೆಮ್ಮೆಯ ಮನು ಭಾಕರ ಒಂದೇ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಎರಡು ಪದಕದ ಸಾಧನೆಯನ್ನು ಮಾಡಿದ ಹಿರಿಮೆ ಹೊಂದಿದ್ದಾರೆ. ಇವರು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆ ಹಾಗೂ 10 ಮೀಟರ್ ಮಿಶ್ರ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಪದಕದ ಸಾಧನೆ ಮಾಡಿದ್ದಾರೆ. ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕವನ್ನು ಗೆದಿದ್ದರು.