Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2020ರ ಒಲಿಂಪಿಕ್‌ಗೆ ಅರ್ಹತೆ ಗಿಟ್ಟಿಸಿಕೊಂಡ ರಸ್ಲರ್ ವಿನೇಶ್ ಫೋಗಟ್

Indian wrestler Vinesh Phogat qualifies for 2020 Olympics

ನೂರ್‌ಸುಲ್ತಾನ್, ಸೆಪ್ಟೆಂಬರ್ 18: ಭಾರತದ ರಸ್ಲರ್ ವಿನೇಶ್ ಪೋಗಟ್ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಕಝಕೀಸ್ತಾನದ ನೂರ್‌ಸುಲ್ತಾನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವ ನಂ.1 ಶ್ರೇಯಾಂಕಿತೆ ಅಮೆರಿಕಾದ ಸಾರಾ ಆನ್ ಹಿಲ್ಡೆಬ್ರಾಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಪೋಗಟ್‌ಗೆ ಒಲಿಂಪಿಕ್‌ಗೆ ಪ್ರವೇಶ ಲಭಿಸಿದೆ.

ಬುಧವಾರ (ಸೆಪ್ಟೆಂಬರ್ 18) ನಡೆದ ಮಹಿಳೆಯರ 53 ಕೆಜಿ ವಿಭಾಗದ ಪಂದ್ಯದಲ್ಲಿ ಅಮೆರಿಕಾ ಬಲಿಷ್ಠೆ ಸಾರಾ ಆನ್ ವಿರುದ್ಧ ರಕ್ಷಣಾತ್ಮಕ ಪ್ರದರ್ಶನ ನೀಡಿದರು. ಸ್ಪರ್ಧೆಯಲ್ಲಿ 8-2ರ ಗೆಲುವು ದಾಖಲಿಸಿದ ವಿನೇಶ್ ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟಿದ್ದರು.

ದ್ವಿತೀಯ ಸುತ್ತಿನಲ್ಲಿ ಹಾಲಿ ಚಾಂಪಿಯನ್, ಜಪಾನ್‌ನ ಮಯು ಮುಕೈದಾ ವಿರುದ್ಧ ವಿನೇಶ್ ಸೋಲನುಭವಿಸಿದರು. ತನ್ನ ಮೊದಲ ಮರುಹಂಚಿಕೆ ಸುತ್ತಿನಲ್ಲಿ ವಿನೇಶ್ ಅವರು ಉಕ್ರೇನ್‌ನ ಯುಲಿಯಾ ಖವಲ್ಡಝಿ ಬ್ಲಹಿನ್ಯ ವಿರುದ್ಧ 5-0ರ ಸುಲಭ ಜಯ ಸಾಧಿಸಿದ್ದಾರೆ. ಹೀಗಾಗಿ ಸಾರಾ ವಿರುದ್ಧದ ಪ್ರದರ್ಶನ ವಿನೇಶ್‌ಗೆ ಒಲಿಂಪಿಕ್ಸ್‌ಗೆ ಅವಕಾಶ ದೊರಕಿಸಿದೆ.

Story first published: Wednesday, September 18, 2019, 16:09 [IST]
Other articles published on Sep 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+