ಮಹಿಳಾ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್: 10 ಮೀ ಏರ್ ರೈಫಲ್‌ನಲ್ಲಿ ಚಿನ್ನ ಗೆದ್ದ ರಮಿತಾ

ಕೈರೋದಲ್ಲಿ ನಡೆದ ಐಎಸ್‌ಎಸ್‌ಎಫ್ ಮಹಿಳಾ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬುಧವಾರ ನಡೆದ 10 ಮೀಟರ್ ಏರ್ ರೈಫಲ್ ಜೂನಿಯರ್ ಸ್ಪರ್ಧೆಯಲ್ಲಿ ಭಾರತದ ರಮಿತಾ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಚೀನಾದ ಯಿಂಗ್ ಶೆನ್ ವಿರುದ್ಧ 16-12 ಅಂತರದಿಂದ ಗೆಲುವು ಸಾಧಿಸಿದ ರಮಿತಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಈಜಿಪ್ಟ್ ಇಂಟರ್‌ನ್ಯಾಶನಲ್ ಒಲಿಂಪಿಕ್ ಸಿಟಿ(ಇಐಒಸಿ) ಶೂಟಿಂಗ್ ರೇಂಜ್‌ನಲ್ಲಿ ನಡೆದ ಸ್ಪರ್ಧೆಯ ಏಳನೇ ದಿನದಂದು ಮಹಿಳೆಯರ 50 ಮೀಟರ್ ಪಿಸ್ತೂಲ್ ಜೂನಿಯರ್ ಸ್ಪರ್ಧೆಯಲ್ಲಿ ರಮಿತಾ ಚಿನ್ನ ಗೆಲ್ಲುವ ಜೊತೆಗೆ ಭಾರತೀಯ ತಂಡ 1-2-3 ಸ್ಥಾನವನ್ನು ಪಡೆದಿರುವುದು ಈ ದಿನದ ಪ್ರಮುಖ ಅಂಶವಾಗಿದೆ. ಈ ಮೂಲಕ ಭಾರತ ತನ್ನ ಪದಕವನ್ನು 25ಕ್ಕೆ ಹೆಚ್ಚಿಸಿದೆ. 10 ಚಿನ್ನ, ಐದು ಬೆಳ್ಳಿ ಮತ್ತು 10 ಕಂಚಿನ ಪದಕಗಳನ್ನು ಭಾರತ ಗೆದ್ದುಕೊಂಡಿದ್ದಯ ಪದಕ ಪಟ್ಟಿಯಲ್ಲಿ ಚೀನಾದ ನಂತರ ಎರಡನೇ ಸ್ಥಾನದಲ್ಲಿ ಭಾರತ ಇದೆ.
ಚೀನಾದ ಯಿಂಗ್ ವಿರುದ್ಧದ ಚಿನ್ನದ ಪದಕದ ಸೆಣದೆಸಾಟದಲ್ಲಿ ರಮಿತಾ 12-12 ರಿಂದ ಸಮಬಲ ಸಾಧಿಸಿದ್ದರು. ಆದರೆ 10.8 ಮತ್ತು 10.7 ಅಂಕಗಳೊಂದಿಗೆ ಎರಡು ತೀಕ್ಷ್ಣ ಗುರಿಯಿಡುವ ಮೂಲಕ ಒಲಿಂಪಿಕ್ ಕ್ರೀಡಾಕೂಟದ ಜೂನಿಯರ್ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮಹಿಳೆಯರ 50 ಮೀ ಪಿಸ್ತೂಲ್ ಜೂನಿಯರ್ ಸ್ಪರ್ಧೆಯಲ್ಲಿ ದಿವಾನ್ಶಿ 547 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ವರ್ಷಾ ಸಿಂಗ್ 539 ಅಂಕಗಳೊಂದಿಗೆ ಎರಡನೇ ಸ್ಥಾನ ಮತ್ತು ತಿಯಾನಾ 523 ರೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಖುಷಿ ಕಪೂರ್ 521ರ ಅಂಕಗಳಿಸುವ ಮೂಲಕ ನಾಲ್ಕನೇ ಸ್ಥಾನವನ್ನು ಕೂಡ ಭಾರತವೇ ಪಡೆದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications