Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIP Padel 2024: ಭಾರತದಲ್ಲಿ ಮೊದಲ ಬಾರಿಗೆ ಎಫ್‌ಐಪಿ ಪ್ಯಾಡಲ್ ಟೂರ್ನಿ ಆಯೋಜನೆ

ನೋಯ್ಡಾದಲ್ಲಿರುವ ಬೆನೆಟ್ ವಿಶ್ವವಿದ್ಯಾಲಯದಲ್ಲಿ ಪ್ರೊಮೋಶನ್ ಇಂಡಿಯಾ ಪ್ಯಾಡಲ್ (ಎಫ್ಐಪಿ) ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ಭಾರತದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಪ್ಯಾಡೆಲ್ ಟೂರ್ನಿ ಇದಾಗಿದೆ. ಮೊದಲ ದಿನ ನಡೆದ ಪಂದ್ಯಗಳಲ್ಲಿ ಭಾರತದ ಸ್ಟಾರ್ ಆಟಗಾರರಾದ ದಿಗ್ವಿಜಯ ಪ್ರತಾಪ್ ಸಿಂಗ್, ಮಿಗ್ವೆಲ್ ವೇಗಾ, ಆರ್ಯನ್ ಗೋವಿಯಾಸ್, ರಾಹುಲ್ ಮೋಟ್‌ವಾಣಿ ಮತ್ತು ಮೋಹಿತ್ ದಾಹಿಯಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ಮೆಚ್ಚುಗೆ ಪಡೆದಿದ್ದಾರೆ.

ಎಫ್‌ಐಪಿ ಪ್ಯಾಡಲ್ ಟೂರ್ನಿ ಈಗಾಗಲೇ ನವೆಂಬರ್ 21 ರಂದು ಆರಂಭವಾಗಿದೆ. ಮುಂದಿನ ಮೂರು ದಿನಗಳ ಕಾಲ ಅಂದರೆ ನವೆಂಬರ್‌ 24 ರವರೆಗೆ ಬೆನೆಟ್ ವಿಶ್ವವಿದ್ಯಾಲಯದ ಆಧುನಿಕ ಪ್ಯಾಡಲ್ ಕೋರ್ಟ್‌ಗಳಲ್ಲಿ ನಡೆಯಲಿದೆ. ಪ್ಯಾಡಲ್ ಅಂತಹ ಹೊಸ ಕ್ರೀಡೆಗಳ ಟೂರ್ನಿಯನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಬೆನೆಟ್ ವಿಶ್ವವಿದ್ಯಾಲಯ ಮುಂದಾಗಿದೆ.

India s 1st FIP Padel Tournament has started

ಅಂತಾರಾಷ್ಟ್ರೀಯ ಪ್ಯಾಡಲ್ ಫೆಡರೇಶನ್ (ಎಫ್‌ಐಪಿ) ಅನುಮೋದಿಸಿದ ಈ ಟೂರ್ನಿ ಪಿಟಿಎಲ್‌ ಸ್ಪೋರ್ಟ್ಸ್ ಗ್ರೂಪ್‌ನ ಅಂಗಸಂಸ್ಥೆಯಾದ ಪ್ಯಾಡಲ್ ಲೀಗ್ ಪ್ರೈವೇಟ್ ಲಿಮಿಟೆಡ್ ಹಾಗೂ ಟೈಮ್ಸ್ ಗ್ರೂಪ್ ಸಹಯೋಗದಲ್ಲಿ ಆಯೋಜಿಸಲಾಗಿದೆ. ಸ್ಪೇನ್, ಜಪಾನ್, ನೆದರ್‌ಲ್ಯಾಂಡ್ಸ್, ಫ್ರಾನ್ಸ್, ಇಟಲಿ, ಮತ್ತು ಇರಾನ್ ಸೇರಿದಂತೆ ಹಲವು ದೇಶಗಳ ಆಟಗಾರರು ಹಾಗೂ ಭಾರತದ ಸ್ಟಾರ್ ಆಟಗಾರರು ಎಫ್‌ಐಪಿ ಪ್ಯಾಡಲ್ ಟೂರ್ನಿ ಭಾಗವಹಿಸಿದ್ದಾರೆ.

ಎಫ್‌ಐಪಿ ಪ್ಯಾಡಲ್ ಟೂರ್ನಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಟೈಮ್ಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಜೈನ್, 'ಬೆನೆಟ್ ವಿಶ್ವವಿದ್ಯಾಲಯವು ಹೊಸ ಕ್ರೀಡೆಗಳ ಕೇಂದ್ರವಾಗಿ ಬೆಳೆಯುತ್ತಿರುವುದು ನಮಗೆ ಹೆಮ್ಮೆಯ ವಿಷಯ. ದೇಶದ ಟಾಪ್ ಪ್ಯಾಡಲ್ ಆಟಗಾರರು ಹಾಗೂ ವಿಶ್ವದ ಶ್ರೇಷ್ಠ ಆಟಗಾರರನ್ನು ಈ ಟೂರ್ನಿ ಮೂಲಕ ಸ್ವಾಗತಿಸುತ್ತಿದ್ದೇನೆ. ಬೆನೆಟ್ ವಿಶ್ವವಿದ್ಯಾಲಯ, ತನ್ನ ಶೈಕ್ಷಣಿಕ ಕೌಶಲ್ಯ ಮತ್ತು ಕ್ರೀಡಾ ಅವಕಾಶಗಳ ಮೂಲಕ ಹೊಸ ಕ್ರೀಡೆಗಳಿಗೆ ವೇದಿಕೆಯಾಗಿದೆ ಎಂದು ಹೊಗಳಿದ್ದಾರೆ.

Story first published: Friday, November 22, 2024, 19:17 [IST]
Other articles published on Nov 22, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+