ಪ್ಯಾರಿಸ್: ಶನಿವಾರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಉತ್ಸಾಹದಿಂದ ಕಣಕ್ಕೆ ಇಳಿಯಲಿದ್ದಾರೆ. ಶುಕ್ರವಾರ ಭಾರತೀಯ ಅಥ್ಲೀಟ್‌ಗಳು ನಾಲ್ಕು ಪದಕ ಪಡೆದು ಅಬ್ಬರಿಸಿದ್ದರು. ಮೂರನೇ ದಿನವೂ ಭಾರತ ತಂಡ ಪದಕದ ಸಂಖ್ಯೆಯನ್ನು ಏರಿಸುವ ಸಾಧ್ಯತೆ ಇದೆ.
ಶನಿವಾರ ಭಾರತ ಕ್ರೀಡಾಪಟುಗಳು ಒಟ್ಟು ಆರು ಮೆಡ್ಲಿ ಈವೆಂಟ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಶೂಟಿಂಗ್, ಆರ್ಚರಿ, ಅಥ್ಲೀಟಿಕ್ಸ್, ಸೈಕ್ಲಿಂಗ್‌ನಲ್ಲಿ ಕ್ರೀಡಾಪಟುಗಳು ಪದಕದ ಆಸೆಯನ್ನು ಚಿಗುರಿಸಿದ್ದಾರೆ. ಮೂರನೇ ದಿನ ಎಲ್ಲರ ಕಣ್ಣು ಶೀತಲ್ ದೇವಿ ಹಾಗೂ ಸರಿತಾ ಅವರ ಮೇಲೆ ನೆಟ್ಟಿದೆ. ಆಗಸ್ಟ್ 31 ರಂದು ಭಾರತ ಯಾವೆಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಮಧ್ಯಾಹ್ನ 12:00: ಬ್ಯಾಡ್ಮಿಂಟನ್ - ಮಹಿಳೆಯರ ಸಿಂಗಲ್ಸ್ SL3 ಗ್ರುಪ್ ಸ್ಟೇಜ್
ಮಧ್ಯಾಹ್ನ 1:00 - ಶೂಟಿಂಗ್ - R1 ಪುರುಷರ SH1 10 ಮೀಟರ್ ಎರ್ ರೈಫಲ್ ಸ್ಟ್ಯಾಂಡಿಂಗ್ ಅರ್ಹತಾ ಸುತ್ತು
ಮಧ್ಯಾಹ್ನ 1:20 - ಬ್ಯಾಡ್ಮಿಂಟನ್ - ಪುರುಷರ ಸಿಂಗಲ್ಸ್ SL3 ಗ್ರುಪ್ ಸ್ಟೇಜ್
ಮಧ್ಯಾಹ್ನ 1:30 -ಸೈಕ್ಲಿಂಗ್ - ಮಹಿಳೆಯರ 500 ಮೀಟರ್, C1-C3 ಅರ್ಹತಾ ಸುತ್ತು
ಮಧ್ಯಾಹ್ನ 1:49 -ಸೈಕ್ಲಿಂಗ್ - ಪುರುಷರ 1000 ಮೀಟರ್ C1-C3 ಅರ್ಹತಾ ಸುತ್ತು
ಮಧ್ಯಾಹ್ನ 2:00 - ಬ್ಯಾಡ್ಮಿಂಟನ್ - ಪುರುಷರ ಸಿಂಗಲ್ಸ್ SL3 ಗ್ರುಪ್ ಸ್ಟೇಜ್
ಮಧ್ಯಾಹ್ನ 2:40 - ರೋಯಿಂಗ್ - PR 3 ಮಿಕ್ಸ್ ಟೀಮ್ ಸ್ಕಲ್ಸ್
ಮಧ್ಯಾಹ್ನ 2:40 - ಬ್ಯಾಡ್ಮಿಂಟನ್ - ಪುರುಷರ ಸಿಂಗಲ್ಸ್ SL4 ಗ್ರುಪ್ ಸ್ಟೇಜ್
ಮಧ್ಯಾಹ್ನ 3:20 - ಬ್ಯಾಡ್ಮಿಂಟನ್ - ಪುರುಷರ ಸಿಂಗಲ್ಸ್ SL4 ಗ್ರುಪ್ ಸ್ಟೇಜ್
ಮಧ್ಯಾಹ್ನ 3:30 - ಶೂಟಿಂಗ್ - P2 ಮಹಿಳೆಯರ SH1 10ಮೀಟರ್ ಏರ್ ಪಿಸ್ತೂಲ್ ಅರ್ಹತಾ ಸುತ್ತು
ಮಧ್ಯಾಹ್ನ 3:45 - ಶೂಟಿಂಗ್ - R1 ಪುರುಷರ, SH1 10ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್, ಫೈನಲ್
ಸಂಜೆ 4:00 - ಬ್ಯಾಡ್ಮಿಂಟನ್ - ಮಹಿಳೆಯರ ಸಿಂಗಲ್ಸ್ SU5 ಗ್ರುಪ್ ಸ್ಟೇಜ್
ಸಂಜೆ 5:05 -ಸೈಕ್ಲಿಂಗ್ - ಮಹಿಳೆಯರ 500 ಮೀಟರ್ C1-C3 ಫೈನಲ್
ಸಂಜೆ 5:32 -ಸೈಕ್ಲಿಂಗ್ - ಪುರುಷರ 1000m C1-C3 ಫೈನಲ್
ಸಂಜೆ 6:15 - ಶೂಟಿಂಗ್ - P2 ಮಹಿಳೆಯರ SH1 10m ಏರ್ ಪಿಸ್ತೂಲ್ ಫೈನಲ್
ಸಂಜೆ 7.00 - ಆರ್ಚರಿ - ಮಹಿಳೆಯರ ವೈಯಕ್ತಿಕ ಕಪೌಂಡ್ 16ರ ಸುತ್ತು
ರಾತ್ರಿ 8:59 - ಆರ್ಚರಿ - ಮಹಿಳೆಯರ ವೈಯಕ್ತಿಕ ಕಪೌಂಡ್ 16ರ ಸುತ್ತು
ರಾತ್ರಿ 9:16 - ಆರ್ಚರಿ - ಮಹಿಳೆಯರ ವೈಯಕ್ತಿಕ ಕಪೌಂಡ್ ಕ್ವಾರ್ಟರ್‌ಫೈನಲ್ಸ್
ರಾತ್ರಿ 10:24 - ಆರ್ಚರಿ - ಮಹಿಳೆಯರ ವೈಯಕ್ತಿಕ ಕಪೌಂಡ್ ಸೆಮಿಫೈನಲ್ಸ್
ರಾತ್ರಿ 10:30 - ಅಥ್ಲೇಟಿಕ್ಸ್ - ಪುರುಷರ ಜಾವೆಲಿನ್ F57 ಫೈನಲ್
ರಾತ್ರಿ 11:13 - ಆರ್ಚರಿ - ಮಹಿಳೆಯರ ವೈಯಕ್ತಿಕ ಕಪೌಂಡ್ (ಕಂಚಿನ ಪದಕದ ಪಂದ್ಯ)
ರಾತ್ರಿ 11:30 - ಆರ್ಚರಿ - ಮಹಿಳೆಯರ ವೈಯಕ್ತಿಕ ಕಪೌಂಡ್ ಫೈನಲ್