Paralympics 2024: ಸ್ವರ್ಣ ಪದಕದ ಆಸೆ ಚಿಗುರಿಸಿದ ಕನ್ನಡಿಗ ಸ್ಟಾರ್ ಅಥ್ಲೀಟ್
ಇಂದಿನಿಂದ ಪ್ಯಾರಿಸ್ ಅಂಗಳದಲ್ಲಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಗಳು ಆರಂಭವಾಗಲಿವೆ. ಈ ಕ್ರೀಡಾಕೂಟದಲ್ಲಿ ವಿಶ್ವದ ಪ್ಯಾರಾ ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ. ಈ ಕೂಟದಲ್ಲಿ ಭಾಗವಹಿಸಲು ಭಾರತ ಸಹ ತನ್ನ ದೊಡ್ಡ ತಂಡವನ್ನು ಕಳುಹಿಸಿದೆ. ಈ ಬಾರಿ ಪ್ಯಾರಿಸ್‌ನಲ್ಲಿ ಐತಿಹಾಸಿಕ ಸಾಧನೆಯನ್ನು ಮಾಡುವ ಕನಸನ್ನು ಕ್ರೀಡಾಪಟುಗಳು ಹಾಕಿಕೊಂಡಿದ್ದಾರೆ.
ಜಪಾನ್ ಟೊಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತ ಒಟ್ಟು 19 ಪದಕ ಗೆದ್ದು ಬೀಗಿತ್ತು. ಈ ವೇಳೆ ಎಲ್ಲರ ಕಣ್ಣುಗಳು ಬ್ಯಾಡ್ಮಿಂಟನ್ ಸ್ಟಾರ್ ಆಟಗಾರ ಸುಹಾಸ್ ಯತಿರಾಜ್ ಅವರ ಮೇಲೆ ನೆಟ್ಟಿದ್ದವು. ಈ ಟೂರ್ನಿಯಲ್ಲಿ ಅವರು ಬ್ಯಾಡ್ಮಿಂಟನ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದರು. ಈ ಬಾರಿಯೂ ಕನ್ನಡಿಗನ ಮೇಲೆ ಅಪಾರ ಭರವಸೆಯನ್ನು ಇಟ್ಟುಕೊಳ್ಳಲಾಗಿದೆ.

ದಾಖಲೆಯ ಪದಕದ ಆಸೆ
ಭಾರತ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟಕ್ಕೆ ತನ್ನ ದೊಡ್ಡ ತಂಡವನ್ನು ಕಳುಹಿಸಿಕೊಟ್ಟಿದೆ. 84 ಅಥ್ಲೀಟ್‌ಗಳು ಸೇರಿದಂತೆ ಒಟ್ಟು 170ಕ್ಕೂ ಹೆಚ್ಚು ಜನರ ತಂಡವನ್ನು ಭಾರತ ಕಳುಹಿಸಿಕೊಟ್ಟಿದೆ. ಈ ಬಾರಿ ತಂಡ 25ಕ್ಕೂ ಹೆಚ್ಚು ಪದಕವನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಬುಧವಾರದಿಂದ ಆರಂಭವಾಗಲಿರುವ ಕ್ರೀಡಾಕೂಟದಲ್ಲಿ ಎಲ್ಲರ ಕಣ್ಣು ಭಾರತೀಯ ಅಥ್ಲೀಟ್‌ಗಳ ಮೇಲೆ ನೆಟ್ಟಿರುತ್ತದೆ.
ಕನ್ನಡಿಗನ ಮೇಲೆ ಎಲ್ಲರ ಕಣ್ಣು
ಕರ್ನಾಟಕ ಮೂಲದ ಸುಹಾಸ್, ಸದ್ಯ ಐಎಎಸ್ ಆಫೀಸರ್ ಆಗಿ ಉತ್ತರ ಪ್ರದೇಶದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಪ್ರಯಾಗರಾಜ್ ಹಾಗೂ ಗೌತಮ್ ಬುದ್ಧ ನಗರದಲ್ಲಿ ಕೆಲಸ ಮಾಡುವ ಕನ್ನಡಿಗ ತನ್ನ ಆಟದ ಕಂಪನನ್ನು ವಿಶ್ವದಲ್ಲೇ ಪಸರಿಸಿದ್ದಾರೆ.
ಐಎಎಸ್ ಅಧಿಕಾರಿ
ಸುಹಾಸ್ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಎಸ್‌ಎಲ್ 4 ರಲ್ಲಿ ಸುಹಾಸ್ ಅಮೋಘ ಪ್ರದರ್ಶನ ನೀಡಿ ಫೈನಲ್‌ನಲ್ಲಿ ಎಡವಿದರು. ಈ ಬಾರಿಯೂ ಅವರು ಭಾರತೀಯ ತಂಡದಲ್ಲಿದ್ದಾರೆ ಮತ್ತು ಪುರುಷರ ಸಿಂಗಲ್ಸ್ ಎಸ್‌ಎಲ್ 4 ನಲ್ಲಿ ಅಂಗಳ ಪ್ರವೇಶಿಸಲಿದ್ದಾರೆ.

ಕರ್ನಾಟಕದ ಹಾಸನದಲ್ಲಿ ಜನಿಸಿದ ಸುಹಾಸ್ ಯತಿರಾಜ್ ಹುಟ್ಟಿನಿಂದಲೇ ಅಂಗವಿಕಲರಾಗಿದ್ದರು. ಸುಹಾಸ್ ಅವರಿಗೆ ಬಾಲ್ಯದಲ್ಲಿ ಕ್ರೀಡೆಯ ಬಗ್ಗೆ ತುಂಬಾ ಒಲವು. ತಮ್ಮ ನೆಚ್ಚಿನ ಕ್ರೀಡೆಗೆ ಪಾಲಕರ ಪ್ರೋತ್ಸಾಹವೂ ಇತ್ತು. ಹಾಸನದ ಅರಸಿಕೇರೆ ಮೂಲದವರಾದ ಇವರು, ಶಿವಮೊಗ್ಗದಲ್ಲಿ ಪದವಿ, ಸುರತ್ಕಲ್‌ನಲ್ಲಿ ಎನ್‌ಐಟಿಕೆಯಿಂದ ಎಂಜಿನಿಯರಂಗ್ ಪದವಿ ಪಡೆದಿದ್ದಾರೆ.
2005ರಲ್ಲಿ ತಂದೆ ನಿಧನದ ಬಳಿಕ, ಸುಹಾಸ ಯುಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಿ ನಡೆಸಿದರು. ಅಲ್ಲದೆ ಈ ಪರೀಕ್ಷೆಯಲ್ಲಿ ಉತ್ತೀರರ್ಣರಾದರು. ಅಲ್ಲದೆ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಹಲವು ಪ್ರಶಸ್ತಿಗಳಿಗೆ ಭಾಜನ
ತಮ್ಮ ಸ್ಥಿರ ಪ್ರದರ್ಶನದಿಂದಲೇ ಸುಹಾಸ್ ಯತಿರಾಜ್ ಬಿಡಬ್ಲ್ಯುಎಫ್ ರ್ಯಾಂಕಿಗ್‌ನಲ್ಲೂ ಮೊದಲ ಸ್ಥಾನವನ್ನು ಪಡೆದಿದ್ದರು. ಇವರ ಸಾಧನೆಗೆ ಅರ್ಜುನ ಪ್ರಶಸ್ತಿ ಸಹ ಸಂದಿದೆ. ಪಾದದ ಕೀಲಿನಲ್ಲಿ ನ್ಯೂನತೆ ಹೊಂದಿರುವ ಸುಹಾಸ್ ಎಸ್‌ಎಲ್4 ಕೆಟಗರಿಯಲ್ಲಿ ಆಡುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications