ಎರಡನೇ ದಿನ ಭಾರತೀಯ ಅಥ್ಲೀಟ್‌ಗಳ ಮೇಲೆ ಎಲ್ಲರ ಕಣ್ಣು: ಇಂದು ತೆರೆಯುತ್ತಾ ಪದಕದ ಖಾತೆ?
ಪ್ಯಾರಾ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಶುಕ್ರವಾರ ಭಾರತದ ಪಾಲಿಗೆ ಮಹತ್ವದಾಗಿದೆ. ಕ್ರೀಡಾ ಕೂಟದ ಎರಡನೇ ದಿನ ಭಾರತದ ಸ್ಟಾರ್ ಅಥ್ಲೀಟ್‌ಗಳು ಅಂಗಳ ಪ್ರವೇಶಿಸಲಿದ್ದಾರೆ. ಇಷ್ಟೇ ಅಲ್ಲದೆ ಪದಕದ ಆಸೆಯನ್ನು ಚಿಗುರಿಸಿದ್ದಾರೆ. ಭಾರತ ಇಂದು ಏಳು ಪದಕ ವಿಭಾಗಗಳಲ್ಲಿ ಸ್ಪರ್ಧೆಯನ್ನು ಮಾಡುತ್ತಿದೆ.
ಶುಕ್ರವಾರ ಭಾರತೀಯ ಕ್ರೀಡಾಭಿಮಾನಿಗಳ ಕಣ್ಣು ಮಹಿಳಾ ಡಿಸ್ಕಸ್ ಥ್ರೋ ಅಥ್ಲೀಟ್‌ಗಳ ಮೇಲೆ ನೆಟ್ಟಿರಲಿದೆ. ಈ ವೇಳೆ ಭಾರತದ ಸ್ಟಾರ್ ಶೂಟರ್ ಅವನಿ ಲೆಖರಾ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ. ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಚಿನ್ನ ಪಡೆದಿದ್ದರು. ಪ್ಯಾರಿಸ್‌ನಲ್ಲೂ ಅವನಿ ಲೆಖರಾ ಇಂತಹದ್ದೇ ಸಾಧನೆ ಮಾಡುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಬ್ಯಾಡ್ಮಿಂಟನ್ ಹಾಗೂ ಆರ್ಚರಿಯಲ್ಲಿ ಕ್ರೀಡಾಪಟುಗಳು ತಮ್ಮ ಅಬ್ಬರದ ಪ್ರದರ್ಶನವನ್ನು ಮುಂದುವರೆಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಆಗಸ್ಟ್ 30 ರಂದು ಭಾರತದ ಅಥ್ಲೀಟ್‌ಗಳು ಯಾವೆಲ್ಲಾ ಕ್ರೀಡಾ ಕೂಟದಲ್ಲಿ ಭಾಗವಹಿಸುತ್ತಾರೆ ಎಂಬ ಮಾಹಿತಿ ಇಲ್ಲಿದೆ
ಮಧ್ಯಾಹ್ನ 12:00 : ಬ್ಯಾಡ್ಮಿಂಟನ್ - SL3 ಗುಂಪು ಹಂತ
ಮಧ್ಯಾಹ್ನ 12:30 : ಶೂಟಿಂಗ್ ಮಹಿಳೆಯರ SH1, 10m ಏರ್ ರೈಫಲ್ ಸ್ಟ್ಯಾಂಡಿಂಗ್
ಮಧ್ಯಾಹ್ನ 12:30 : ಆರ್ಚರಿ - ಮಹಿಳೆಯರ R32 ವೈಯಕ್ತಿಕ ಕಾಂಪೌಂಡ್ ಓಪನ್
ಮಧ್ಯಾಹ್ನ 1:30 : ಅಥ್ಲೆಟಿಕ್ಸ್ - ಮಹಿಳೆಯರ ಡಿಸ್ಕಸ್ ಥ್ರೋ F55 ಫೈನಲ್
ಮಧ್ಯಾಹ್ನ 2:40 : ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL4 ಗ್ರುಪ್ ಸ್ಟೇಜ್
ಮಧ್ಯಾಹ್ನ 2:45 : ಶೂಟಿಂಗ್ P1 ಪುರುಷರ SH1, 10m ಏರ್ ಪಿಸ್ತೂಲ್, ಅರ್ಹತಾ ಸುತ್ತು
ಮಧ್ಯಾಹ್ನ 3:00 : ರೋಯಿಂಗ್ PR 3 ಮಿಶ್ರ ಡಬಲ್ಸ್ ಸ್ಕಲ್ಸ್
ಮಧ್ಯಾಹ್ನ 3:15 : ಶೂಟಿಂಗ್ R2 ಮಹಿಳೆಯರ SH1, 10m ಏರ್ ರೈಫಲ್ ಸ್ಟ್ಯಾಂಡಿಂಗ್ ಫೈನಲ್
ಸಂಜೆ 4:24 : ಸೈಕ್ಲಿಂಗ್ ಪುರುಷರ 3000 ಮೀಟರ್ C2
ಸಂಜೆ 4:39 : ಅಥ್ಲೆಟಿಕ್ಸ್ ಮಹಿಳೆಯರ 100ಮೀಟರ್ T35
ಸಂಜೆ 4:40 : ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ SL4 ಗ್ರುಪ್ ಸ್ಟೇಜ್
ಸಂಜೆ 5:00 : ಶೂಟಿಂಗ್ R4,SH2 ಮಿಕ್ಸಡ್ ಈವೆಂಟ್ 10m ಏರ್ ರೈಫಲ್ ಸ್ಟ್ಯಾಂಡಿಂಗ್
ಸಂಜೆ 5:30 : ಶೂಟಿಂಗ್ P1 ಪುರುಷರ SH1, 10m ಏರ್ ಪಿಸ್ತೂಲ್ ಫೈನಲ್
ಸಂಜೆ 7:00 :ಆರ್ಚರಿ ಪುರುಷರ ವೈಯಕ್ತಿಕ ಕಾಂಪೌಂಡ್
ಸಂಜೆ 7:10 : ಸೈಕ್ಲಿಂಗ್ ಪುರುಷರ 3000m C2 ಅರ್ಹತಾ ಸುತ್ತು
ಸಂಜೆ 7:30 : ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ SU5 ಗ್ರುಪ್ ಸ್ಟೇಜ್
ಸಂಜೆ 7:45 : ಶೂಟಿಂಗ್, R4 ಮಿಕ್ಸಡ್ ಟೀಮ್ ಇವೆಂಟ್ SH2 10m ಏರ್ ರೈಫಲ್ ಫೈನಲ್
ರಾತ್ರಿ 8:10 : ಬ್ಯಾಡ್ಮಿಂಟನ್, ಪುರುಷರ ಸಿಂಗಲ್ಸ್ SH6,
ರಾತ್ರಿ8:50 : ಬ್ಯಾಡ್ಮಿಂಟನ್, ಮಹಿಳೆಯರ ಸಿಂಗಲ್ಸ್ SH6 ಗ್ರುಪ್ ಸ್ಟೇಜ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications