Neeraj Chopra Wedding: ಸದ್ದಿಲ್ಲದೆ ಸಪ್ತಪದಿ ತುಳಿದ ಗೋಲ್ಡನ್ ಬಾಯ್
ಭಾರತದ ಸ್ಟಾರ್ ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ ಭಾನುವಾರದಂದು ಸದ್ದಿಲ್ಲದೆ ಸಪ್ತಪದಿ ತುಳಿದಿದ್ದಾರೆ. ಆಪ್ತರು ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನೀರಜ್ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನೀರಜ್ ಚೋಪ್ರಾ ತಮ್ಮ ಮದುವೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ನೋಡಿದ ಭಾರತೀಯ ಕ್ರೀಡಾ ಅಭೀಮಾನಿಗಳು ಅಚ್ಚರಿಗೊಂಡಿದ್ದಾರೆ.
ನೀರಜ್ ಚೋಪ್ರಾ ತಮ್ಮ ಮದುವೆ ಬಗ್ಗೆ ಮಾಹಿತಿ ನೀಡಿರುವ ಫೋಟೋದಲ್ಲಿ 'ನೀರಜ್-ಹಿಮಾನಿ ಎಂಬ ಶೀರ್ಷಿಕೆ ಕೊಟ್ಟು, ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಆದರೆ ಮದುವೆಯಾಗಿರುವ ಹುಡುಗಿ ಬಗ್ಗೆಯಾಗಲಿ, ವಿವಾಹದ ಸ್ಥಳದ ಬಗ್ಗೆ ಯಾವುದೇ ಮಾಹಿತಿಯನ್ನು ಗೋಲ್ಡನ್ ಬಾಯ್ ಹಂಚಿಕೊಂಡಿಲ್ಲ.

ವರದಿಗಳ ಪ್ರಕಾರ, ನೀರಜ್ ಚೋಪ್ರಾ ಎರಡು ದಿನಗಳ ಹಿಂದೆ ಮದುವೆಯಾಗಿದ್ದಾರೆ. ಸೋನಿಪತ್ ಮೂಲದ ಹಿಮಾನಿ ಅವರು ಯುಎಸ್‌ನಲ್ಲಿ ವಿಧ್ಯಾಭ್ಯಾಸ ನಡೆಸುತ್ತಿದ್ದಾರೆ. ಇದೀಗ ನವದಂಪತಿಗಳು ಹನಿಮೂನ್‌ಗಾಗಿ ವಿದೇಶಕ್ಕೆ ಹಾರಿದ್ದಾರೆ. ಆದರೆ ದಂಪತಿಗಳು ಯಾವ ಸ್ಥಳಕ್ಕೆ ಹನಿಮೂನ್‌ಗೆ ಹೋಗಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಬಾಲ್ಯದ ಜೀವನ
ಡಿಸೆಂಬರ್ 24, 1997 ರಂದು ನೀರಜ್ ಚೋಪ್ರಾ ಹರಿಯಾಣದ ಸಮೀಪವಿರುವ ಖಂಡ್ರಾ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ರೈತ ಕುಟುಂಬಕ್ಕೆ ಸೇರಿದ ನೀರಜ್ ಅವರ ತಂದೆ ಕೃಷಿಕರು, ತಾಯಿ ಸರೋಜ ದೇವಿ ಗೃಹಿಣಿ. ತಮ್ಮ 11ನೇ ವಯಸ್ಸಿನಲ್ಲೇ ಜಾವೆಲಿನ್ ಥ್ರೋ ನಲ್ಲಿ ನೀರಜ್ ಆಸಕ್ತಿ ಬೆಳೆಸಿಕೊಂಡರು. ಇದಾದ ಬಳಿಕ ಪಾಣಿಪತ್ ಕ್ರೀಡಾಂಗಣದಲ್ಲಿ ನೀರಜ್ ಜಾವೆಲಿನ್ ಅಭ್ಯಾಸ ಮಾಡುತ್ತಿದ್ದರು. ಎಲ್ಲಿಯೂ ತರಬೇತಿ ಪಡೆಯದೆ ನೀರಜ್ ಸುಮಾರು 40 ಮೀಟರ್ ದೂರ ಎಸೆದು ಗಮನ ಸೆಳೆದಿದ್ದರು. ಇದನ್ನು ಕಂಡ ಜೈವೀರ್ ಅವರು ನೀರಜ್‌ಗೆ ಮೊದಲ ಕೋಚ್ ಆದರು. ಜೈವೀರ್ ಮಾರ್ಗದರ್ಶನದ ಮೂಲಕ ನೀರಜ್ ಹಂತ ಹಂತವಾಗಿ ತಮ್ಮ ವೃತ್ತಿಜೀವನದಲ್ಲಿ ಮೇಲೆರಿದರು.
ಟೋಕಿಯೋ ಒಲಿಂಪಿಕ್ಸ್ 2020ರ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇಡೀ ದೇಶವನ್ನು ಹೆಮ್ಮೆಪಡುವಂತೆ ಮಾಡಿದರು. ಮೊದಲ ಬಾರಿಗೆ ಬೀಜಿಂಗ್ ಒಲಿಂಪಿಕ್ಸ್ 2008ರಲ್ಲಿ 10 ಮೀಟರ್ ಏರ್ ರೈಫಲ್‌ನಲ್ಲಿ ಶೂಟರ್ ಅಭಿನವ್ ಬಿಂದ್ರಾ ಚಿನ್ನದ ಪದಕ ಗೆದ್ದಿದ್ದರು. ಇದಾದ ನಂತರ ಭಾರತ ಪರ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆಲ್ಲುವಲ್ಲಿ ನೀರಜ್ ಚೋಪ್ರಾ ಯಶಸ್ವಿಯಾಗಿದ್ದರು. ಇದರೊಂದಿಗೆ ಚಿನ್ನ ಗೆದ್ದ ದೇಶದ ಮೊದಲ ಹಾಗೂ ಏಕೈಕ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎನಿಸಿಕೊಂಡಿದ್ದರು.
ಕಳೆದ ವರ್ಷ ನಡೆದ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದರು. ನೀರಜ್ ಅವರು 89.45 ಮೀಟರ್‌ಗಳ ಎಸೆತದೊಂದಿಗೆ ಬೆಳ್ಳಿ ಪದಕವನ್ನು ಗೆದ್ದಿದ್ದರು. ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ಎಸೆದು ಒಲಿಂಪಿಕ್ ದಾಖಲೆ ಮುರಿದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಈ ಮೂಲಕ ನೀರಜ್ ಚೋಪ್ರಾ ಪ್ಯಾರಿಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಸತತ 2 ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಮೂರನೇ ಭಾರತದ ಆಟಗಾರ ಎಂಬ ವಿಶೇಷ ದಾಖಲೆ ಸೃಷ್ಟಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications