For Quick Alerts
ALLOW NOTIFICATIONS  
For Daily Alerts

ಮಹಿಳಾ ಚೆಸ್ ಸ್ಪರ್ಧೆಗಳಿಂದ ತೃತೀಯ ಲಿಂಗಿಗಳಿಗೆ ನಿಷೇಧ ಹೇರಿದ FIDE

ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್(FIDE) ಟ್ರಾನ್ಸ್‌ಜಂಡರ್ ಮಹಿಳೆಯರನ್ನು ತನ್ನ ಟೂರ್ನಮೆಂಟ್‌ನ ಮಹಿಳಾ ವಿಭಾಗದಿಂದ ತಾತ್ಕಾಲಿಕವಾಗಿ ನಿಷೇಧಿಸುವ ನಿರ್ಧಾರ ತೆಗೆದುಕೊಂಡಿದೆ. ಈ ವಿಚಾರವಾಗಿ ವೈಯಕ್ತಿಕವಾಗಿ ಪುನರ್‌ವಿಮರ್ಶೆ ನಡೆಸುವ ಅಗತ್ಯವಿದೆ ಎಂದಿರುವ FIDE ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಎರಡು ವರ್ಷಗಳ ಕಾಲಾವಕಾಶ ಬೇಕಾಗಬಹುದು ಎಂದಿದೆ.

ಈ ನಿರ್ಧಾರ ಈಗ ಹಲವು ಕ್ರೀಡಾಪಟುಗಳು ಹಾಘೂ ಉತ್ಸಾಹಿಗಳಿಂದ ಟೀಕೆಗೆ ಗುರಿಯಾಗಿದೆ. ಅನೇಕ ಕ್ರೀಡಾ ಆಡಳಿತ ಮಂಡಳಿಗಳು ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳ ಬಗ್ಗೆ ಈಗ ಇರುವ ನೀತಿಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಆದರೆ ಚೆಸ್ ದೈಹಿಕ ಚಟುವಟಿಕೆಯನ್ನು ಒಳಗೊಂಡಿಲ್ಲವಾದರೂ ಇಂಥಾ ನಿರ್ಧಾರ ತೆಗೆದುಕೊಂಡಿರುವುದು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯನ್ನಯ ಹುಟ್ಟುಹಾಕಿದೆ.

International Chess Federation bans transgender players from competing in womens events

ಆದರೆ FIDE ಈ ವಿಚಾರವಾಗಿ ಬಿಬಿಸಿಗೆ ಪ್ರತಿಕ್ರಿಯೆ ನೀಡಿದ್ದು ತನ್ನ ನಿಲುವಿನ ಬಗ್ಗೆ ಸ್ಪಷ್ಟಪಡಿಸಿದೆ. ಈ ನೀತಿಗಳ ಪರಿಣಾಮವನ್ನು ವಿಶ್ಲೇಷಿಸಲು ಬಯಸಿದ್ದು ಈ ಪ್ರಕ್ರಿಯೆಯನ್ನು ಆತುರದಿಂದ ನಡೆಸಲು ಇಷ್ಟಪಡುವುದಿಲ್ಲ ಎಂದು ಮಾಹಿತಿನೀಡಿರುವುದಾಗಿ ಬಿಬಿಸು ವರದಿ ಮಾಡಿದೆ. "ಅನೇಕ ದೇಶಗಳಲ್ಲಿ ಟ್ರಾನ್ಸ್ಜೆಂಡರ್‌ಗೆ ಸಂಬಂಧಿಸಿದ ನಿಯಮಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಮತ್ತು ಅನೇಕ ಕ್ರೀಡಾ ಸಂಸ್ಥೆಗಳು ತಮ್ಮದೇ ಆದ ನೀತಿಗಳನ್ನು ಅಳವಡಿಸಿಕೊಳ್ಳುತ್ತಿವೆ" ಎಂದು ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ಹೇಳಿದೆ.

"ಜಗತ್ತಿನಲ್ಲಿ ಟ್ರಾನ್ಸ್‌ಜಂಡರ್ ನಿಯಮಗಳಿಗೆ ಸಂಬಂಧಿಸಿದ ಬೆಳವಣಿಗೆಯನ್ನು FIDE ಗಮನಿಸುತ್ತಿದೆ, ಮತ್ತು ನಾವು ಅವುಗಳನ್ನು ಚೆಸ್ ಜಗತ್ತಿನಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ನೋಡುತ್ತೇವೆ. ಹೀಗಾಗಿ ಈ ವಮರ್ಶೆಗಾಗಿ ಎರಡು ವರ್ಷಗಳ ಕಾಲಾವಕಾಶ ಅಗತ್ಯವಿದೆ ಎನ್ನುವುದು ನಮಗೆ ಸಮಂಜಸವೆನಿಸುತ್ತಿದೆ" ಎಂದು ತಿಳಿಸಿದೆ. ಇನ್ನು ಇದೇ ಸಂದರ್ಭದಲ್ಲಿ ಇದೇ ಸಂದರ್ಭಲ್ಲಿ ಮುಕ್ತ ವಿಭಾಗದಲ್ಲಿ ಟ್ರಾನ್ಸ್‌ಜಂಡರ್‌ಗಳಿಗೆ ಅವಕಾಶವಿದೆ ಎಂಬುದನ್ನು ಕೂಡ ಸ್ಪಷ್ಟಪಡಿಸಿದೆ.

ಇನ್ನು ಈ ಬೆಳವಣಿಗೆಯ ಬಗ್ಗೆ FIDEನ ಚೆಸ್ ಮಾಸ್ಟರ್‌ ಶ್ರೇಣಿಯನ್ನು ಹೊಂದಿರುವ ಟ್ರಾನ್ಸ್ ಮಹಿಳಾ ವೃತ್ತಿಪರ ಚೆಸ್ ಆಟಗಾರ್ತಿ ಯೋಶಾ ಇಗ್ಲೇಷಿಯಸ್ ಪ್ರತಿಕ್ರಿಯೆ ನೀಡಿದ್ದಾರೆ. ಈ ನೀತಿಯು ಟ್ರಾನ್ಸ್ ಆಟಗಾರರು ಮತ್ತು ಮಹಿಳೆಯರಿಗೆ ಅನಗತ್ಯ ಹಾನಿಯುಂಟಾಗಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ "ಈ ಭಯಾನಕ ಪರಿಸ್ಥಿತಿ ಖಿನ್ನತೆ ಮತ್ತು ಆತ್ಮಹತ್ಯೆ ಪ್ರಯತ್ನಗಳಿಗೆ ಕಾರಣವಾಗುತ್ತದೆ" ಎಂದಿದ್ದಾರೆ ಇಗ್ಲೇಷಿಯಸ್.

ಇನ್ನು FIDEನ ಈ ನಿರ್ಧಾರವನ್ನು ವುಮನ್ ಗ್ರ್ಯಾಂಡ್‌ಮಾಸ್ಟರ್ ಮತ್ತು ಎರಡು ಬಾರಿಯ ಯುಎಸ್ ಮಹಿಳಾ ಚಾಂಪಿಯನ್ ಜೆನ್ನಿಫರ್ ಶಾಹೇಡ್ ಕೂಡ ಟೀಕಿಸಿದ್ದಾರೆ. ಈ ನಿರ್ಧಾರ "ಹಾಸ್ಯಾಸ್ಪದ ಮತ್ತು ಅಪಾಯಕಾರಿ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ. "ಈ ನಿರ್ಧಾರವನ್ನು ತೆಗೆದುಕೊಳ್ಳುವಾಗ ಅವರು ಯಾವುದೇ ಟ್ರಾನ್ಸ್‌ಮಜಂಡರ್ ಆಟಗಾರರ ಜೊತೆಗೆ ಚರ್ಚೆ ನಡೆಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ" ಎಂದಿದ್ದಾರೆ ಶಾಹೇಡ್.

Story first published: Saturday, August 19, 2023, 11:24 [IST]
Other articles published on Aug 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+