ನವದೆಹಲಿ, ಡಿ. 21: ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಕರಾಟೆ ಚಾಂಪಿಯನ್ ವಂದನಾ ಸೂರ್ಯವಂಶಿ ಈಗ ಚಹಾ ಅಂಗಡಿಯಲ್ಲಿ ಚಾಕರಿ ಮಾಡುತ್ತಿದ್ದಾರೆ. ದೈನಂದಿನ ಬದುಕು ಸಾಗಿಸಲು ಬೇರೆ ಮಾರ್ಗೋಪಾಯ ತಿಳಿಯದೆ ಮಕ್ಕಳಿಗೆ ಕರಾಟೆ ಹೇಳಿಕೊಡುತ್ತಾ, ಚಹಾ ಮಾರುತ್ತಿದ್ದಾರೆ.
ಕಠ್ಮಂಡುವಿನಲ್ಲಿ 2014ರಲ್ಲಿ ಬೆಳ್ಳಿ ಪದಕ ಹಾಗೂ ಪುಣೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದೆ ಕೊನೆ ನಂತರ ಬದುಕಿನಲ್ಲಿ ಎಲ್ಲವೂ ಬದಲಾವಣೆಯಾಗಿಬಿಟ್ಟಿತು ಎಂದು ವಂದನಾ ಎಎನ್ ಐ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಅಂತಾರಾಜ್ಯ, ಜಿಲ್ಲಾ ಹಾಗೂ ರಾಷ್ಟ್ರೀಯ ಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರಾಟೆ ಚಾಂಪಿಯನ್ ಆಗಿ 2014ರಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಪುಣೆಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದೇನೆ.
ಆದರೆ, ನಂತರ ಹಲವು ಸಮಸ್ಯೆ ಎದುರಿಸಬೇಕಾಯಿತು. ಹೀಗಾಗಿ ಜೀವನೋಪಾಯಕ್ಕಾಗಿ ಚಹಾ ಮಾರಾಟ ಮಾಡುತ್ತಿದ್ದೇನೆ. ಬಿಡುವಿದ್ದಾಗ ಮಕ್ಕಳಿಗೆ ಕರಾಟೆ ಹೇಳಿಕೊಡುತ್ತೇನೆ ಎಂದಿದ್ದಾರೆ.