Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ವಿರಾಟ್ ಕೊಹ್ಲಿಯೊಂದಿಗಿನ ಜಗಳದ ಕುರಿತು ಮೊದಲ ಬಾರಿ ಮೌನ ಮುರಿದ ನವೀನ್-ಉಲ್-ಹಕ್

ಇತ್ತೀಚೆಗೆ ಮುಕ್ತಾಯಗೊಂಡ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಜೊತೆಗೆ ನಡೆದ ವಾಗ್ವಾದದ ಬಗ್ಗೆ ಕೊನೆಗೂ ನವೀನ್-ಉಲ್-ಹಕ್ ಮೌನ ಮುರಿದಿದ್ದಾರೆ.

ಪಂದ್ಯದ ಮಧ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನ್-ಉಲ್-ಹಕ್ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಪಂದ್ಯದ ನಂತರ ಆಟಗಾರರು ಕೈಕುಲುಕುವ ವೇಳೆಯೂ ವಾಗ್ವಾದ ಮುಂದುವರೆದಿತ್ತು. ನವೀನ್-ಉಲ್-ಹಕ್ ಮತ್ತು ವಿರಾಟ್ ಕೊಹ್ಲಿ ನಡುವಿನ ಜಗಳ ಕ್ರೀಡಾಂಗಣದಲ್ಲಿ ದೊಡ್ಡ ಕೋಲಾಹಲ ಎಬ್ಬಿಸಿತ್ತು.

IPL 2023: Naveen-ul-Haq Breaks Silence For The First Time On His Spat With Virat Kohli

ಒಬ್ಬರ ಮೇಲೆ ಒಬ್ಬರು ಏರಿ ಹೋಗುವ ದೃಶ್ಯಗಳು ಪ್ರೇಕ್ಷಕರ ಮೊಬೈಲ್ ಕ್ಯಾಮೆರದಲ್ಲಿ ಸೆರೆಹಿಡಿಯಲಾಗಿತ್ತು ಮತ್ತು ಲಕ್ನೋ ಸೂಪರ್‌ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ಕೂಡ ಈ ಜಗಳದಲ್ಲಿ ಸೇರಿಕೊಂಡು, ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದ್ದರು.

ಇತ್ತೀಚೆಗೆ ಆ ಘಟನೆಯ ಬಗ್ಗೆ ಗೌತಮ್ ಗಂಭೀರ್ ಮಾತನಾಡಿದ್ದರು. ಮೊದಲಿಗೆ ವಿರಾಟ್ ಕೊಹ್ಲಿ ಸ್ಲೆಡ್ಜ್ ಮಾಡಿದ್ದರಿಂದ ನವೀನ್-ಉಲ್-ಹಕ್ ತಿರುಗೇಟು ನೀಡಿದ್ದರು ಎಂದು ಹೇಳಿದ್ದು, ಮತ್ತೊಂದು ವಿವಾದಕ್ಕೆ ಕಾರಣವಾಯಿತು.

IPL 2023: Naveen-ul-Haq Breaks Silence For The First Time On His Spat With Virat Kohli

"ನವೀನ್-ಉಲ್-ಹಕ್ ಸರಿಯಾಗಿರುವುದರಿಂದ ನಾನು ಅವರನ್ನು ಬೆಂಬಲಿಸಿದೆ. ಇದು ನವೀನ್ ಬಗ್ಗೆ ಮಾತ್ರವಲ್ಲ, ನಾನು ಯಾರು ಸರಿಯಾಗಿದ್ದರೂ ಬೆಂಬಲಿಸುವುದನ್ನು ಮುಂದುವರಿಸುತ್ತೇನೆ," ಎಂದು ಎಲ್‌ಎಸ್‌ಜಿ ಮೆಂಟರ್ ಗೌತಮ್ ಗಂಭೀರ್ ತಿಳಿಸಿದ್ದರು.

ಇದೀಗ, ನವೀನ್-ಉಲ್-ಹಕ್ 2023ರ ಐಪಿಎಲ್ ವೇಳೆ ನಡೆದ ಘಟನೆಯನ್ನು ಹಂಚಿಕೊಳ್ಳಲು ಮುಂದೆ ಬಂದಿದ್ದಾರೆ. ಪಂದ್ಯದ ನಂತರದ ಸಂಭ್ರಮಾಚರಣೆ ವೇಳೆ ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್ ಮಾಡುವುದನ್ನು ಪ್ರಾರಂಭಿಸಿದರು. ಹೀಗಾಗಿ ಉದ್ದೇಶಪೂರ್ವಕವಾಗಿ ಅವರು ಕೈಯನ್ನು ಹಿಡಿದು ಎಳೆದರು ಎಂದು ಹೇಳಿದ್ದಾರೆ.

IPL 2023: Naveen-ul-Haq Breaks Silence For The First Time On His Spat With Virat Kohli

"ನನ್ನ ಕ್ರಿಕೆಟ್ ವೃತ್ತಿಜೀವನದುದ್ದಕ್ಕೂ, ನಾನು ಎಂದಿಗೂ ಸ್ಲೆಡ್ಜಿಂಗ್‌ನಲ್ಲಿ ತೊಡಗಿಲ್ಲ. ಆದರೆ ಯಾರಾದರೂ ನನ್ನನ್ನು ಪ್ರಚೋದಿಸಲು ಪ್ರಯತ್ನಿಸಿದರೆ, ಅವರು ಯಾರೆಂಬುದನ್ನು ಲೆಕ್ಕಿಸದೆ ನಾನು ತಿರುಗೇಟು ನೀಡುತ್ತೇನೆ. ಆ ಪಂದ್ಯ ಮುಗಿದ ನಂತರ, ವಿರಾಟ್ ಕೊಹ್ಲಿಗೆ ಹಸ್ತಲಾಘವ ಮಾಡುವಾಗ, ಅವರು ನನ್ನ ಕೈ ಹಿಡಿದುಕೊಂಡರು. ಆಗ ನಾನು ನನ್ನ ಕೈಯನ್ನು ಎಳೆಯಬೇಕಾಯಿತು," ಎಂದು ನವೀನ್-ಉಲ್-ಹಕ್ ಹೇಳಿದರು.

"ನೀವು ಆ ಘಟನೆಯ ವಿಡಿಯೋವನ್ನು ವೀಕ್ಷಿಸಿದರೆ, ಅಲ್ಲಿ ಪಂದ್ಯದ ಅಂಪೈರ್ ಇರುವುದನ್ನು ನೀವು ನೋಡುತ್ತೀರಿ. ನಾನು ನನ್ನ ಸಂಯಮವನ್ನು ಕಾಪಾಡಿಕೊಂಡಿದ್ದೇನೆ. ಆದರೂ, ನಮ್ಮ ಮೇಲೆ ದಂಡ ವಿಧಿಸಲಾಯಿತು. ಅದನ್ನು ಪ್ರಾರಂಭಿಸಿದವರು ಯಾರು ಎಂಬುದಕ್ಕೆ ಪಂದ್ಯದ ಅಂಪೈರ್ ಸಾಕ್ಷಿಯಾಗಿದ್ದಾರೆ," ಎಂದರು.

ಗಮನಿಸಬೇಕಾದ ಅಂಶವೆಂದರೆ, ಲಕ್ನೋ ಸೂಪರ್ ಜೈಂಟ್ಸ್ ವೇಗಿ ನವೀನ್-ಉಲ್-ಹಕ್ ಅವರಿಗೆ ಪಂದ್ಯ ಶುಲ್ಕದಲ್ಲಿ ಶೇ.50ರಷ್ಟು ದಂಡವನ್ನು ವಿಧಿಸಲಾಯಿತು. ಆದರೆ ವಿರಾಟ್ ಕೊಹ್ಲಿ ಅವರು ವಾಗ್ವಾದದಲ್ಲಿ ಭಾಗಿಯಾಗಿದ್ದಕ್ಕಾಗಿ ಅವರ ಪಂದ್ಯದ ಶುಲ್ಕದ ಶೇ.100ರಷ್ಟು ದಂಡವನ್ನು ವಿಧಿಸಿದರು.

Story first published: Thursday, June 15, 2023, 17:49 [IST]
Other articles published on Jun 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+