IPL 2024: ಐಪಿಎಲ್‌ಗೂ ಮುನ್ನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್‌ಸಿಬಿ ಸ್ಟಾರ್ ಬೌಲರ್!
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 17ನೇ ಸೀಸನ್ ಮಾರ್ಚ್ ಕೊನೆಯ ವಾರದಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಆಟಗಾರರು ಮತ್ತು ಫ್ರಾಂಚೈಸಿಗಳು ಎಲ್ಲ ರೀತಿಯ ತಯಾರಿ ಆರಂಭಿಸಿವೆ.
ಇದೇ ವೇಳೆ ಪ್ರತಿ ಬಾರಿಯಂತೆ ಈ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ. ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿಗಾಗಿ ತಂಡವು ಎದುರು ನೋಡುತ್ತಿದೆ.

ಮೊದಲ ಐಪಿಎಲ್ ಪ್ರಶಸ್ತಿ ಗೆಲ್ಲುವ ಆರ್‌ಸಿಬಿ ಕನಸು ನನಸಾಗುತ್ತದೋ ಇಲ್ಲವೋ ಎಂಬುದು ಈ ಆವೃತ್ತಿ ಮುಕ್ತಾಯದ ನಂತರ ತಿಳಿಯಲಿದೆ. ಆದರೆ ಸದ್ಯಕ್ಕೆ ಆರ್‌ಸಿಬಿ ತಂಡಕ್ಕೆ ಮತ್ತು ತಂಡದ ಅಭಿಮಾನಿಗಳಿಗೆ ಒಂದು ಒಳ್ಳೆಯ ಸುದ್ದಿ ಸಿಕ್ಕಿದೆ.
ಐಪಿಎಲ್ 17ನೇ ಆವೃತ್ತಿಗೂ ಮುನ್ನ ಆರ್‌ಸಿಬಿ ತಂಡದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ಏಕೆಂದರೆ ಆರ್‌ಸಿಬಿ ವೇಗದ ಬೌಲರ್ ಲಾಕಿ ಫರ್ಗುಸನ್ ತಮ್ಮ ಗೆಳತಿ ಎಮ್ಮಾ ಕೊಮೊಕಿ (emma komocki) ಅವರನ್ನು ಮದುವೆಯಾಗಿದ್ದಾರೆ.

ನ್ಯೂಜಿಲೆಂಡ್‌ನ ಸ್ಟಾರ್ ವೇಗಿ ಲಾಕಿ ಫರ್ಗುಸನ್ ಅವರ ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಪ್ರತಿಕ್ರಿಯಿಸಿ ವಿವಾಹಿತ ದಂಪತಿಗಳಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಎಮ್ಮಾ ಕೊಮೊಕಿ ಯಾರು?
ಎಮ್ಮಾ ಕೊಮೊಕಿಯವರು ಫಿಸಿಯೋಥೆರಪಿಸ್ಟ್ ಆಗಿದ್ದಾರೆ. ಅವರು 2013ರಲ್ಲಿ ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಎಮ್ಮಾ ಕೊಮೊಕಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿರುವುದಿಲ್ಲ.
ಇನ್ನು ಎಮ್ಮಾ ಕೊಮೊಕಿ ಮತ್ತು ಲಾಕಿ ಫರ್ಗುಸನ್ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಫೆಬ್ರವರಿ 2ರಂದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಲಾಕಿ ಫರ್ಗುಸನ್ ಅವರ ಪತ್ನಿ ಎಮಾ ಕೊಮೊಕಿ ಅವರು ಫಿಸಿಯೋಥೆರಪಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇವರು ಮೂಲತಃ ಬ್ರಿಟನ್ ಪ್ರಜೆ ಆಗಿದ್ದು, ಕಳೆದ 5 ವರ್ಷಗಳಿಂದ ನ್ಯೂಜಿಲೆಂಡ್ ನಲ್ಲಿ ನೆಲೆಸಿದ್ದಾರೆ.
ಇನ್ನು 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಲಾಕಿ ಫರ್ಗುಸನ್ ಅವರನ್ನು ಬರೋಬ್ಬರಿ 2 ಕೋಟಿ ರೂಪಾಯಿಗೆ ಖರೀದಿಸಿತು. ಶೀಘ್ರದಲ್ಲೇ ಕಿವೀಸ್ ವೇಗಿ ಲಾಕಿ ಫರ್ಗುಸನ್ ಕೆಂಪು ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದಲ್ಲದೇ ಲಾಕಿ ಫರ್ಗುಸನ್ ಅವರು ತಮ್ಮ ರಾಷ್ಟ್ರೀಯ ತಂಡ ನ್ಯೂಜಿಲೆಂಡ್ ಪರ 1 ಟೆಸ್ಟ್, 65 ಏಕದಿನ ಮತ್ತು 36 ಟಿ20 ಪಂದ್ಯಗಳನ್ನು ಆಡಿದ್ದು, ಐಪಿಎಲ್‌ನಲ್ಲಿ 38 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications