For Quick Alerts
ALLOW NOTIFICATIONS  
For Daily Alerts

ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸುತ್ತಾರಾ ವೀರೇಂದ್ರ ಸೆಹ್ವಾಗ್?

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಸದ್ಯ ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದೆ. ಈ ರೇಸ್‌ನಲ್ಲಿ ಹಲವು ಹೆಸರುಗಳು ಕೇಳಿಬಂದಿದ್ದು, 2011ರ ವಿಶ್ವಕಪ್ ವಿಜೇತ ಆಟಗಾರರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಇನ್ನು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರು ಆಯ್ಕೆ ಸಮಿತಿಯಲ್ಲಿ ಉತ್ತರ ವಲಯವನ್ನು ಪ್ರತಿನಿಧಿಸುವ ಸಾಲಿನಲ್ಲಿದ್ದಾರೆ. ಮಾಜಿ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಬದಲಿಗೆ ವೀರೇಂದ್ರ ಸೆಹ್ವಾಗ್ ಆಯ್ಕೆ ಸಮಿತಿ ಮುಖ್ಯಸ್ಥನಾಗಬಹುದು ಎಂದು ವರದಿಯಾಗಿದೆ.

Is Virender Sehwag Interested In Becoming BCCI Selection Committee Chief? Will He Apply For This Post?

ಆದರೆ, ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಹುದ್ದೆಯ ವೇತನ ಪ್ಯಾಕೇಜ್ ವೀರೇಂದ್ರ ಸೆಹ್ವಾಗ್ ಅವರಂತಹವರಿಗೆ ಹೆಚ್ಚಿನ ಲಾಭದಾಯಕವಲ್ಲ ಎಂದೂ ಹೇಳಲಾಗುತ್ತಿದೆ. ಇದೇ ಕಾರಣದಿಂದ ಅವರು ಅರ್ಜಿ ಸಲ್ಲಿಸಲು ಹಿಂದುಮುಂದು ನೋಡುತ್ತಿದ್ದಾರೆ.

ಆಯ್ಕೆ ಸಮಿತಿ ಮುಖ್ಯಸ್ಥರ ಪ್ರಸ್ತುತ ವೇತನವು 1 ಕೋಟಿ ರೂ. ಇದೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈ ಹಿಂದೆ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅನಿಲ್ ಕುಂಬ್ಳೆ ಅವರನ್ನು ಆಯ್ಕೆ ಮಾಡಲಾಯಿತು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಕಡಿಮೆ ವೇತನ ಪ್ಯಾಕೇಜ್ ಪರಿಗಣಿಸಿ ವೀರೇಂದ್ರ ಸೆಹ್ವಾಗ್ ಸ್ವತಃ ಅರ್ಜಿ ಸಲ್ಲಿಸುವ ಸಾಧ್ಯತೆಯಿಲ್ಲ ಎಂದಿದ್ದಾರೆ.

"2016-17ರಲ್ಲಿ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ವೀರೇಂದ್ರ ಸೆಹ್ವಾಗ್ ಅವರನ್ನು ಕೇಳಲಾಯಿತು. ಆದರೆ ಅದು ಅನಿಲ್ ಕುಂಬ್ಳೆ ಪಾಲಾಯಿತು. ಇದೀಗ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಸ್ವತಃ ಅರ್ಜಿ ಸಲ್ಲಿಸುವ ಸಾಧ್ಯತೆಯಿಲ್ಲ. ವೇತನ ಪ್ಯಾಕೇಜ್ ಅವರಂತಹ ಮಾಜಿ ಆಟಗಾರರಗೆ ಆರ್ಥಿಕವಾಗಿ ಲಾಭದಾಯಕವಲ್ಲ," ಎಂದು ಬಿಸಿಸಿಐ ಅಧಿಕಾರಿಯ ಹೇಳಿದ್ದಾರೆ ಎಂದು ವರದಿಯಾಗಿದೆ.

ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಪಾತ್ರಕ್ಕೆ ಮಾಜಿ ಆಟಗಾರರು ಅರ್ಜಿ ಸಲ್ಲಿಸಿದರೆ, ಅದರ ವೇತನವನ್ನು ಹೆಚ್ಚಿಸುವ ಬಗ್ಗೆಯೂ ಬಿಸಿಸಿಐ ಯೋಚಿಸಬಹುದು ಎಂದು ಅಧಿಕಾರಿ ಬಹಿರಂಗಪಡಿಸಿದ್ದಾರೆ.

"ಬಿಸಿಸಿಐ ಮುಖ್ಯ ಆಯ್ಕೆಗಾರನಿಗೆ ಕನಿಷ್ಠ 4-5 ಕೋಟಿ ರೂಪಾಯಿ ವೇತನ ಪಾವತಿಸಲು ಸಾಧ್ಯವಿಲ್ಲ. ನಿಜವಾಗಿಯೂ ಇದು ಹಿತಾಸಕ್ತಿ ಸಂಘರ್ಷದ ಬಹಳಷ್ಟು ಸಮಸ್ಯೆಗಳನ್ನು ಪರಿಹರಿಸಬಹುದು. ಕಡಿಮೆ ವೇತನದ ಪ್ಯಾಕೇಜ್ ಪ್ರಮುಖ ಮಾಜಿ ಆಟಗಾರರು ಆಯ್ಕೆ ಸಮಿತಿಗೆ ಬರಲು ಯೋಚಿಸುವುದನ್ನು ತಡೆಯುತ್ತದೆ," ಎಂದು ಬಿಸಿಸಿಐ ಅಧಿಕಾರಿ ಹೇಳಿದರು.

ಗಮನಾರ್ಹ ವಿಷಯವಾಗಿ, ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾದ ಪ್ರಮುಖ ಕ್ರಿಕೆಟ್ ಆಟಗಾರರೆಂದರೆ, ಭಾರತದ ಮಾಜಿ ನಾಯಕರಾದ ದಿಲೀಪ್ ವೆಂಗ್‌ಸರ್ಕರ್ (2006-2008) ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ (2008-2012) ಕಾರ್ಯನಿರ್ವಹಿಸಿದ್ದರು.

ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಸಂಭಾವ್ಯ ಹೆಸರಾಗಿರುವ ವೀರೇಂದ್ರ ಸೆಹ್ವಾಗ್ ಭಾರತ ತಂಡದ ಪರ ಆಡಿದ ಅತ್ಯುತ್ತಮ ಆರಂಭಿಕರಲ್ಲಿ ಒಬ್ಬರಾಗಿದ್ದಾರೆ. ಮೂರು ಸ್ವರೂಪದ ಆಟದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

44 ವರ್ಷದ ವೀರೇಂದ್ರ ಸೆಹ್ವಾಗ್ ತಮ್ಮ ವೃತ್ತಿ ಜೀವನದಲ್ಲಿ 104 ಟೆಸ್ಟ್ ಪಂದ್ಯ, 251 ಏಕದಿನ ಪಂದ್ಯ ಮತ್ತು 19 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಮತ್ತು ಏಕದಿನ ಮಾದರಿಗಳಲ್ಲಿ ತಮ್ಮ ಹೆಸರಿಗೆ 8000 ರನ್ ಬಾರಿಸಿದ್ದಾರೆ.

ದೆಹಲಿ ಮೂಲದ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ಭಾಗವಾಗಿದ್ದರು.

ಸದ್ಯ ಪೂರ್ವ ವಲಯದಿಂದ ಭಾರತದ ಮಾಜಿ ಕ್ರಿಕೆಟಿಗ ಶಿವಸುಂದರ್ ದಾಸ್ ಅವರು ಪ್ರಸ್ತುತ ಆಯ್ಕೆ ಸಮಿತಿಯ ನೇತೃತ್ವ ವಹಿಸಿದ್ದು, ಆಯ್ಕೆ ಸಮಿತಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ಆ ಪಾತ್ರ ನಿರ್ವಹಿಸಲಿದ್ದಾರೆ.

Story first published: Thursday, June 22, 2023, 16:07 [IST]
Other articles published on Jun 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+