ಇಸ್ರೇಲಿಗರು ಕೊಲ್ಲಲ್ಪಟ್ಟ ಕರಾಳ ಘಟನೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಮರಣೆ

ಟೋಕಿಯೋ: ಜಪಾನ್‌ನ ಟೋಕಿಯೋದಲ್ಲಿ ಒಲಿಂಪಿಕ್ಸ್ ಹಬ್ಬ ಶುರುವಾಗಿದೆ. ಇದು 32ನೇ ಒಲಿಂಪಿಯಾಡ್ ಗೇಮ್ಸ್. 2020ರಲ್ಲಿ ನಡೆಯಬೇಕಿದ್ದ ಕ್ರೀಡಾಕೂಟ ಒಂದು ವರ್ಷ ಮುಂದೂಡಲ್ಪಟ್ಟು 2021ರಲ್ಲಿ ನಡೆಯುತ್ತಿದೆ. ಈ ವೇಳೆ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಇಸ್ರೇಲಿಗರು ಹಿಂದಿನ ಒಲಿಂಪಿಕ್ಸ್ ಕರಾಳ ದಿನವೊಂದನ್ನು ನೆನಪಿಸಿಕೊಂಡಿದ್ದಾರೆ.
ಜುಲೈ 23ರಂದು ನಡೆದ ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಇಸ್ರೇಲ್ ತಂಡ 1972ರ ಮ್ಯೂನಿಚ್ ಗೇಮ್ಸ್ ವೇಳೆ ನಡೆದ ಇಸ್ರೇಲಿಗರ ಮಾರಣಹೋಮವನ್ನು ನೆನಪಿಸಿಕೊಂಡಿದ್ದಾರೆ. ಆ ಒಲಿಂಪಿಕ್ಸ್ ವೇಳೆ ಮಡಿದವರಿಗಾಗಿ ಮೌನ ಪ್ರಾರ್ಥನೆ ಮಾಡುವ ಮೂಲಕ ಆ ಕರಾಳ ಘಟನೆಯನ್ನು ಸ್ಮರಿಸಿಕೊಳ್ಳಲಾಯ್ತು.
1972ರ ಮ್ಯೂನಿಚ್ ಒಲಿಂಪಿಕ್ಸ್ ವೇಳೆ ಭದ್ರತೆ ಕಳಪೆಯಾಗಿತ್ತು. ಆವತ್ತು ಸೆಪ್ಟೆಂಬರ್ 5ರಂದು ಬಂದೂಕು ಹಿಡಿದು ಒಲಿಂಪಿಕ್ ಗ್ರಾಮಗಳಿಗೆ ಪ್ರವೇಶಿಸಿದ್ದ ಪ್ಯಾಲೆಸ್ತೈನಿಯನ್ ಗನ್‌ಮೆನ್‌ಗಳು 11 ಇಸ್ರೇಲಿಯನ್ಸ್, 5 ಪ್ಯಾಲೆಸ್ತೇನಿಯನ್ ಮತ್ತು ಒಬ್ಬ ಜರ್ಮನ್ ಪೊಲೀಸ್ ಸಾವಿಗೆ ಕಾರಣರಾಗಿದ್ದರು.
ಭಯೋತ್ಪಾದನೆ ನಡೆಸಿದ್ದವರನ್ನು ಬ್ಲ್ಯಾಕ್ ಸೆಪ್ಟೆಂಬರ್ ಗ್ರೂಪಿನವರು ಎನ್ನಲಾಗಿತ್ತು. ಆವತ್ತಿನ ಒಲಿಂಪಿಕ್ಸ್ ಕ್ರೀಡಾಕೂಟ ಒಲಿಂಪಿಕ್ಸ್ ಇತಿಹಾಸದಲ್ಲೇ ಉಗ್ರರ ಅಟ್ಟಹಾಸದ ಒಲಿಂಪಿಕ್ಸ್ ಎಂದು ಗುರುತಿಸಿಕೊಂಡಿತ್ತು. ಟೋಕಿಯೋ ಒಲಿಂಪಿಕ್ಸ್ ಜುಲೈ 23ರಿಂದ ಆಗಸ್ಟ್ 8ರ ವರೆಗೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications