For Quick Alerts
ALLOW NOTIFICATIONS  
For Daily Alerts

ISSF ವಿಶ್ವ ಚಾಂಪಿಯನ್‌ಶಿಪ್: ಏರ್‌ ಪಿಸ್ತೂಲ್‌ನ ಮಿಶ್ರ ತಂಡ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ

ಅಜರ್‌ಬೈಜಾನ್‌ನ ಬಾಕುದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತದ ಮಿಕ್ಸ್‌ಡ್ ಡಬಲ್ಸ್ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. 10 ಮೀಟರ್ ಏರ್‌ ಪಿಸ್ತೂಲ್ ವಿಭಾಗದಲ್ಲಿ ಟರ್ಕಿಯನ್ನು ಸೋಲಿಸುವ ಮೂಲಕ ಶೂಟರ್‌ಗಳಾದ ಇಶಾ ಸಿಂಗ್ ಮತ್ತು ಶಿವ ನರ್ವಾಲ್ ಚಿನ್ನದ ಪದಕವನ್ನು ಭಾರತದ ಕೊರಳಿಗೇರಿಸಿದ್ದಾರೆ.

ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಟರ್ಕಿಯ ಇಲಯ್ಡಾ ತರ್ಹಾನ್ ಮತ್ತು ಯೂಸುಫ್ ಡಿಕೆಕ್ ಜೋಡಿಯನ್ನು 16-10 ಅಂತರದಿಂದ ಸೋಲಿಸಿ ಭಾರತದ ಜೋಡಿ ಈ ಸಾಧನೆ ಮಾಡಿದೆ. ಈ ಮೂಲಕ ಈ ಟೂರ್ನಿಯಲ್ಲಿ ಭಾರತದ ಪದಕಗಳ ಸಂಖ್ಯೆಯನ್ನು ಎರಡಕ್ಕೆ ಏರಿದೆ. ಭಾರತ ಪ್ರಸ್ತುತ ಒಂದು ಚಿನ್ನ ಮತ್ತು ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚೀನಾ ಐದು ಚಿನ್ನ ಮತ್ತು ಎರಡು ಕಂಚಿನ ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ISSF World Championships: India won Mixed Team Air Pistol Gold medal

ಅರ್ಹತಾ ಸುತ್ತಿನಲ್ಲಿ ಇಶಾ 290 ಮತ್ತು ನರ್ವಾಲ್ 293 ಅಂಕ ಗಳಿಸುವುದರೊಂದಿಗೆ ಭಾರತೀಯ ಜೋಡಿ ಮೇಲುಗೈ ಸಾಧಿಸಿತ್ತು. ಭಾರತದ ಶೂಟರ್‌ಗಳು ಒಟ್ಟು 583 ಅಂಕಗಳಿಸಿ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನಕ್ಕೇರೊದರೆ ಟರ್ಕಿ 581 ಅಂಕಗಳಿಮದ ಎರಡನೇ ಸ್ಥಾನವನ್ನು ಪಡೆದುಕೊಂಡಿತ್ತು. ತಲಾ 580 ಅಂಕಗಳನ್ನು ಗಳಿಸಿದ ಚೀನಾ ಮತ್ತು ಇರಾನ್ ನಂತರದ ಸ್ಥಾನವನ್ನು ಪಡೆದುಕೊಂಡಿತು.

ಆದರೆ ಮತ್ತೊಂದೆಡೆ ಭಾರತದ ರೈಫಲ್ ಶೂಟರ್‌ಗಳು 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಅರ್ಹತಾ ಹಂತವನ್ನು ದಾಟಲು ವಿಫಲವಾಗಿ ನಿರಾಸೆ ಮೂಡಿಸಿದ್ದಾರೆ. ಮತ್ತೊಂದೆಡೆ ಮಹಿಳಾ ಸ್ಕೀಟ್ ತಮಡ ಕೂಡ ಪ್ರಶಸ್ಸತಿ ಹಂತಕ್ಕೆ ತಲುಪಲು ವಿಫಲವಾಗಿದ್ದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ರೈಫಲ್ ಮಿಶ್ರ ತಂಡದ ಜೋಡಿಯಾದ ಮೆಹುಲಿ ಘೋಷ್ (316.0) ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ (314.2) ಒಟ್ಟು 630.2 ಅಂಕಗಳನ್ನು ಗಳಿಸಿ ಅರ್ಹತಾ ಸುತ್ತಿನಲ್ಲಿ ಒಂಬತ್ತನೇ ಸ್ಥಾನ ಗಳಿಸಿದರು. ಇನ್ನು ಭಾರತದ ಎರಡನೇ ಜೋಡಿ ರಮಿತಾ (313.7) ಮತ್ತು ದಿವ್ಯಾಂಶ್ ಸಿಂಗ್ ಪನ್ವಾರ್(314.6) ಒಟ್ಟು 628.3 ಅಂಕಗಳನ್ನು ಗಳಿಸಿ 77 ತಂಡಗಳ ಪೈಕಿ 17ನೇ ಸ್ಥಾನವನ್ನು ಗಳಿಸಿದರು.

Story first published: Friday, August 18, 2023, 20:32 [IST]
Other articles published on Aug 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+