ISSF Shooting World Cup 2023: ಚಿನ್ನಕ್ಕೆ ಕೊರಳು ಒಡ್ಡಿದ ಭಾರತದ ಕುವರಿ
ಭಾರತದ ಭರವಸೆಯ ಶೂಟರ್ ಎಲವೆನಿಲ್ ವಲರಿವನ್ ರಿಯೊದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಸೊಗಸಾದ ಪ್ರದರ್ಶನ ನೀಡುವ ಮೂಲಕ ಮಹಿಳಾ ವಿಭಾಗದಲ್ಲಿ ಚಿನ್ನಕ್ಕೆ ಕೊರಳು ಒಡ್ಡಿದ್ದಾರೆ.
ಭಾರತದ ಎಲವೆನಿಲ್ ವಲರಿವನ್ 10 ಮೀಟರ್ ಏರ್ ರೈಫಲ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಫೈನಲ್‌ನಲ್ಲಿ 252.2 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ಅವರು ಫೈನಲ್‌ನಲ್ಲಿ 24 ಶೂಟ್ ಗಳಲ್ಲಿ 10.1 ಕ್ಕಿಂತ ಕಡಿಮೆ ಸ್ಕೋರ್ ಮಾಡಲಿಲ್ಲ. ಫ್ರಾನ್ಸ್‌ನ ಒಸಿಯಾನ್ನೆ ಮುಲ್ಲರ್ 251.9 ಅಂಕಗಳೊಂದಿಗೆ ಬೆಳ್ಳಿ ಗೆದ್ದರು. ಚೀನಾದ ಜಾಂಗ್ ಜಿಯಾಲೆ ಕಂಚಿನ ಪದಕ ಪಡೆದರು.

ಐದು ಶೂಟ್ ಗಳ ಬಳಿಕ 52.6 ಅಂಕಗಳೊಂದಿಗೆ ಇತರ ಇಬ್ಬರು ಶೂಟರ್‌ಗಳೊಂದಿಗೆ ಎಲವೆನಿಲ್ ಜಂಟಿ ಎರಡನೇ ಸ್ಥಾನ ಪಡೆದರು. ಚೀನಾದ ಜಾಂಗ್ ಜಿಯಾಲೆ 53.4 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರು. 10 ಶಾಟ್‌ಗಳ ನಂತರ, ಜಾಂಗ್ ಯು ಜೊತೆಗೆ ಎಲವೆನಿಲ್ ಅಗ್ರಸ್ಥಾನದಲ್ಲಿದ್ದರು.
ಆಸ್ಟ್ರೇಲಿಯಾದ ಶೂಟರ್ ಮರ್ಲೀನ್ ಪ್ರಿಬಿಟ್ಜರ್ 12 ನೇ ಹೊಡೆತದ ನಂತರ ಹೊರ ನಡೆದರು. ಮತ್ತು ಎಂಟನೇ ಸ್ಥಾನ ಪಡೆದರು. 16 ಶಾಟ್‌ಗಳ ನಂತರವೂ ಎಲವೆನಿಲ್ ಮತ್ತೊಬ್ಬ ಶೂಟರ್‌ನೊಂದಿಗೆ ಮೊದಲ ಸ್ಥಾನದಲ್ಲಿಯೇ ಉಳಿದರು. 17ನೇ ಹೊಡೆತದ ನಂತರ ಆಕೆ ಎರಡನೇ ಸ್ಥಾನಕ್ಕೆ ಕುಸಿದರು.
2 ಶಾಟ್‌ಗಳು ಉಳಿದಿರುವಾಗ, ಅವರು 0.5 ಅಂತರದಿಂದ ಮುಂದಿದ್ದರು. ಒಟ್ಟಾರೆಯಾಗಿ, ಕೊನೆಯ ಶಾಟ್‌ನಲ್ಲಿ 10.6 ಗಳಿಸಿದ ನಂತರ ಅವರು ಫ್ರೆಂಚ್ ಶೂಟರ್‌ಗಿಂತ 0.3 ಪಾಯಿಂಟ್‌ಗಳಿಂದ ಚಿನ್ನ ಗೆದ್ದರು.
ಶನಿವಾರ ಬೆಳಿಗ್ಗೆ ನಡೆದ ಅರ್ಹತಾ ಸುತ್ತಿನಲ್ಲಿ ಇಲಾ 630.5 ಅಂಕಗಳೊಂದಿಗೆ ಎಂಟನೇ ಸ್ಥಾನ ಗಳಿಸಿದ್ದರು. ಫ್ರಾನ್ಸ್‌ನ ಓಷಿಯನ್ ಮುಲ್ಲರ್ 633.7 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರು. ಎಲವೆನಿಲ್ ಅವರು ಸಂದೀಪ್ ಕುಮಾರ್ ಅವರೊಂದಿಗೆ ಮಿಶ್ರ ತಂಡದಲ್ಲಿ ಐದನೇ ಸ್ಥಾನ ಪಡೆದರು. ಅವರು 629.1 ಅಂಕ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications