ISSF World Cup: ಐಶ್ವರ್ಯ ಪ್ರತಾಪ್‌ಗೆ 50 ಮೀ. ರೈಫಲ್‌ನಲ್ಲಿ ಚಿನ್ನ ಪದಕ

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ISSF) ವಿಶ್ವಕಪ್ ಕ್ರೀಡಾಕೂಟದಲ್ಲಿ ಭಾರತದ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ಪುರುಷರ ವಿಭಾಗದ 50 ಮೀ. ರೈಫಲ್ ಸ್ಪರ್ಧೆಯಲ್ಲಿ ಬಂಗಾರ ಜಯಿಸಿದ್ದಾರೆ. ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತದ ಬಂಗಾರದ ಬೇಟೆ ಹೆಚ್ಚಿದೆ.
ಬುಧವಾರ (ಮಾರ್ಚ್ 24) ನಡೆದ ಪುರುಷರ ವಿಭಾಗದ 50 ಮೀ. ರೈಫಲ್ 3 ಪೊಸಿಶನ್ಸ್ ಸ್ಪರ್ಧೆಯಲ್ಲಿ 20ರ ಹರೆಯದ ಭೋಪಾಲ್ ಸ್ಪರ್ಧಿ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ಹಂಗೆರಿಯ ಇಸ್ತವಾನ್ ಪೆನಿ ಅವರನ್ನು ಸೋಲಿಸಿ ಬಂಗಾರಕ್ಕೆ ಕೊರಳೊಡ್ಡಿದ್ದಾರೆ.
ಫೈನಲ್ ಸ್ಪರ್ಧೆಯಲ್ಲಿ ಪ್ರತಾಪ್ ಸಿಂಗ್ ತೋಮರ್ ಒಟ್ಟು 462.5 ಅಂಕ ಕಲೆ ಹಾಕಿದರು. ದ್ವಿತೀಯ ಸ್ಥಾನಿ ಇಸ್ತವಾನ್ ಪೆನಿ 461.6 ಅಂಕ ಪಡೆದರೆ, ತೃತೀಯ ಸ್ಥಾನಿ ಡೆನ್ಮಾರ್ಕ್‌ನ ಸ್ಟೆಫೆನ್ ಓಲ್ಸೆನ್ 450.9 ಪಾಯಿಂಟ್ಸ್ ಗಳಿಸಿದರು. ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಈ ಸ್ಪರ್ಧೆ ನಡೆದಿತ್ತು.
ಈ ಚಿನ್ನದ ಪದಕದೊಂದಿಗೆ ಕ್ರೀಡಾಕೂಟದಲ್ಲಿ ಭಾರತ ಒಟ್ಟು 8 ಚಿನ್ನ, 4 ಬೆಳ್ಳಿ, 4 ಕಂಚಿನ ಪದಕದೊಂದಿಗೆ ಒಟ್ಟು 16 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿರುವ ಯುಎಸ್‌ಎ 2 ಚಿನ್ನ, ತೃತೀಯ ಸ್ಥಾನಿ ಕಝಕೀಸ್ತಾನ್ 1 ಬಂಗಾರ ಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications