Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ISSF World Cup: 10 ಮೀ. ಏರ್ ರೈಫಲ್‌ನಲ್ಲಿ ಅಪೂರ್ವಿ ವಿಶ್ವದಾಖಲೆ

ISSF World Cup: Apurvi Chandela shatters 10m air rifle world record

ನವದೆಹಲಿ, ಫೆಬ್ರವರಿ 23: ನವದೆಹಲಿಯಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಪೆಡರೇಷನ್ (ಐಎಸ್‌ಎಸ್‌ಎಫ್‌) ಕ್ರೀಡಾಕೂಟದ ಮಹಿಳೆಯರ ವಿಭಾಗದ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಅಪೂರ್ವಿ ಚಂದೇಲಾ ಅವರು ವಿಶ್ವದಾಖಲೆ ನಿರ್ಮಿಸಿದ್ದಾರೆ.

ಶನಿವಾರ (ಫೆಬ್ರವರಿ 23) ನಡೆದ ಸರ್ಧೆಯಲ್ಲಿ ಅಪೂರ್ವಿ 252.9 ಪಾಯಿಂಟ್ ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡುವ ಮೂಲಕ ದಾಖಲೆ ಬರೆದಿದ್ದಾರೆ. 251.8 ಅಂಕ ಗಳಿಸಿದ ಚೀನಾದ ರುವಾಝ್ ಝಾವೋ ಬೆಳ್ಳಿ ಗೆದ್ದರೆ, ಚೀನಾದ ಮತ್ತೊಬ್ಬ ಸ್ಪರ್ಧಿ ಕ್ಸು ಹಾಂಗ್ (230.4) ಕಂಚಿಗೆ ತೃಪ್ತಿಪಟ್ಟರು.

ಫೈನಲ್‌ನಲ್ಲಿ ಸ್ಪರ್ಧಿಸಿದ್ದ ಎಂಟು ಸ್ಪರ್ಧಿಗಳ ನಡುವೆ ದ್ವಿತೀಯ ಸ್ಥಾನಿಗಿಂತ 1.1 ಹೆಚ್ಚುವರಿ ಅಂಕ ಗಳಿಸಿ ಚಂದೇಲಾ ಬಂಗಾರ ತನ್ನದಾಗಿಸಿಕೊಂಡಿದ್ದಾರೆ. ಟೋಕಿಯೋ ಒಲಿಂಪಿಕ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಅಪೂರ್ವಿ ಅರ್ಹತಾ ಸುತ್ತಿನಲ್ಲಿ 629.3 ಅಂಕಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡಿದ್ದಾರೆ.

Story first published: Saturday, February 23, 2019, 18:14 [IST]
Other articles published on Feb 23, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+