ISSF World Cup: ಬಂಗಾರಕ್ಕೆ ಗುರಿಯಿಟ್ಟ ಎಲಾವೆನಿಲ್, ದಿವ್ಯಾಂಶ್

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ISSF) ವರ್ಲ್ಡ್ ಕಪ್ ಶೂಟಿಂಗ್ ಕ್ರೀಡಾಕೂಟದಲ್ಲಿ ಭಾರತ ಎಲಾವೆನಿಲ್ ವಲಾರಿವನ್ ಮತ್ತು ದಿವ್ಯಾಂಶ್ ಸಿಂಗ್ ಪಾನ್‌ವರ್ ಜೋಡಿ 10 ಮೀ. ಏರ್ ರೈಫಲ್ ಮಿಶ್ರ ತಂಡದಲ್ಲಿ ಬಂಗಾರ ಜಯಿಸಿದೆ.
ಭಾರತದ ಜೋಡಿ ಎಲಾವೆನಿಲ್ ವಲಾರಿವನ್ ಮತ್ತು ದಿವ್ಯಾಂಶ್ ಸಿಂಗ್, ಹಂಗೇರಿಯನ್ ಜೋಡಿ ಇಸ್ಟ್‌ವಾನ್ ಪೆನಿ ಮತ್ತು ಎಸ್ಜ್ಟರ್ ಡೆನೆಸ್ ಅವರನ್ನು 16-10ರ ಅಂತರದಿಂದ ಸೋಲಿಸಿ ಬಂಗಾರಕ್ಕೆ ಮುತ್ತಿಕ್ಕಿದೆ. ಈ ವಿಭಾಗದಲ್ಲಿ ಯುಎಸ್‌ಎಯ ಲ್ಯೂಕಾಸ್ ಕೊಜೆನಿಸ್ಕಿ ಮತ್ತು ಮೇರಿ ಕ್ಯಾರೊಲಿನ್ ಟಕರ್ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ.
ಪೋಲ್ಯಾಂಡ್‌ನ ಅನೆಟಾ ಸ್ಟಾಂಕಿವಿಕ್ಜ್ ಮತ್ತು ತೋಮಸ್ಜ್ ಬಾರ್ಟ್ನಿಕ್ ಜೋಡಿಯನ್ನು 17-15ರ ಅಂತರದಲ್ಲಿ ಸೋಲಿಸಿದ ಲ್ಯೂಕಾಸ್ ಕೊಜೆನಿಸ್ಕಿ ಮತ್ತು ಮೇರಿ ಕ್ಯಾರೊಲಿನ್ ಟಕರ್ ಕಂಚಿನ ಪದಕ್ಕೆ ಕೊರಳೊಡ್ಡಿದರು.
10 ಮೀಟರ್ ಏರ್ ರೈಫಲ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸಿದ್ದ ಲಾವೆನಿಲ್ ವಲಾರಿವನ್ ಮತ್ತು ದಿವ್ಯಾಂಶ್ ಸಿಂಗ್‌ಗೆ ಕಂಚು ಲಭಿಸಿತ್ತು. ಆದರೆ ಮಿಶ್ರ ತಂಡ ವಿಭಾಗದಲ್ಲಿ ಇಬ್ಬರೂ ಸ್ಪರ್ಧೆಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದರು. ಎದುರಾಳಿಯಿಂದ ಅಂತರವನ್ನು ಮುಂದುವರೆಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications