Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನವದೆಹಲಿಯಲ್ಲಿ ನಡೆಯಲಿದ್ದ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್ ರದ್ದು

ISSF World Cup in New Delhi cancelled due to Covid-19 pandemic

ನವದೆಹಲಿ, ಏಪ್ರಿಲ್ 7: ನವದೆಹಲಿಯಲ್ಲಿ ನಡೆಯಲಿದ್ದ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್(ಐಎಸ್‌ಎಸ್‌ಎಫ್‌)ನ ವಿಶ್ವಕಪ್ ಶೂಟಿಂಗ್ ಕ್ರೀಡಾಕೂಟ ರದ್ದಾಗಿದೆ. ಕೊರೊನಾವೈರಸ್‌ನಿಂದಾಗಿ ಭಾರತದಲ್ಲಿ ನಡೆಯಲಿದ್ದ ರೈಫಲ್/ಪಿಸ್ತೂಲ್ ಶೂಟಿಂಗ್ ವಿಶ್ವಕಪ್ ಅನ್ನು ಶೂಟಿಂಗ್ ಅಂತಾರಾಷ್ಟ್ರೀಯ ಕಮಿಟಿ ಐಎಸ್‌ಎಸ್‌ಎಫ್‌ ರದ್ದು ಮಾಡಿದೆ.

ರೈಫಲ್ ಮತ್ತು ಪಿಸ್ತೂಲ್ ಶೂಟಿಂಗ್ ಸ್ಪರ್ಧೆ ಮೇ 5-13ರ ವರೆಗೆ ನಡೆಯಲಿತ್ತು. ಶಾಟ್‌ಗನ್ ಸ್ಪರ್ಧೆ ಮೇ 20-29ರ ವರೆಗೆ ನಡೆಯಲಿತ್ತು. ಐಎಸ್‌ಎಸ್‌ಎಫ್‌ ರೈಫಲ್/ಪಿಸ್ತೂಲ್/ಶಾಟ್‌ಗನ್ ವಿಶ್ವಕಪ್ ಸ್ಪರ್ಧೆ ಅಜೆರ್ಬೈಜಾನ್ ದೇಶದ ಬಾಕುವಿನಲ್ಲಿ ಜೂನ್ 22ರಿಂದ ಜುಲೈ 3ರ ವರೆಗೆ ನಡೆಯಲಿತ್ತು. ಇದೂ ಕೂಡ ರದ್ದಾಗಿದೆ ಎಂದು ಶೂಟಿಂಗ್ ಕಮಿಟಿ ಹೇಳಿದೆ.

'ಕೋವಿಡ್-19 ಸೋಂಕಿನ ಕಾರಣ ರೈಫಲ್/ಪಿಸ್ತೂಲ್ ವಿಶ್ವಕಪ್ ಅನ್ನು ದೆಹಲಿಯ ಆಯೋಜನಾ ಸಮಿತಿ ರದ್ದುಗೊಳಿಸಿದೆ. ರೈಫಲ್/ಪಿಸ್ತೂಲ್ ಎರಡೂ ಸ್ಪರ್ಧೆಗಳು ದೆಹಲಿಯಲ್ಲಿ ನಡೆಯಲಿತ್ತು,' ಎಂದು ಐಎಸ್‌ಎಸ್‌ಎಫ್‌ ತನ್ನ ಅಧಿಕೃತ ಹೇಳಿಕೆಯ ಮೂಲಕ ತಿಳಿಸಿದೆ.

ಮಾರಕ ಕೊರೊನಾವೈರಸ್‌ನಿಂದಾಗಿ ಎಲ್ಲಾ ಕ್ರೀಡಾಸ್ಪರ್ಧೆಗಳು ಮುಂದೂಡಲ್ಪಡುತ್ತಿದೆ ಇಲ್ಲವೆ ರದ್ದಾಗುತ್ತಿವೆ. ಲಾ ಲಿಗಾ, ಬುಂಡೆಸ್ಲಿಗಾ, ಐಪಿಎಲ್, ಟೋಕಿಯೋ ಒಲಿಂಪಿಕ್ಸ್, ಎನ್‌ಬಿಎ, ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳೆಲ್ಲ ಮುಂಡೂಲ್ಪಟ್ಟಿವೆ.

Story first published: Saturday, May 2, 2020, 22:05 [IST]
Other articles published on May 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+