For Quick Alerts
ALLOW NOTIFICATIONS  
For Daily Alerts

ಐಎಸ್‌ಎಸ್‌ಎಫ್ ವಿಶ್ವಕಪ್: ಪುರುಷರ ಹಾಗೂ ಮಹಿಳೆಯರ ತಂಡದ 10 ಮೀ. ಏರ್ ಪಿಸ್ತೂಲ್‌ನಲ್ಲಿ ಭಾರತಕ್ಕೆ ಚಿನ್ನ

ISSF World Cup: India Win Gold In Men And Womens 10m Air Pistol Team Events

ನವದೆಹಲಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್(ಇಂಟರ್‌ನ್ಯಾಶನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್) ವಿಶ್ವಕಪ್‌ನಲ್ಲಿ ತಂಡಗಳ ವಿಭಾಗದಲ್ಲಿ ಭಾರತದ ಮಹಿಳೆಯ ಹಾಗೂ ಪುರುಷರ ತಂಡ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ಚಿನ್ನದ ಪದಕ ಗೆದ್ದುಕೊಂಡಿದೆ. ಭಾರತದ ಮಹಿಳೆಯ ತಂಡದಲ್ಲಿ ಮನು ಭಾಕರ್, ಯಶಸ್ವಿನಿ ಸಿಂಗ್ ದೇಸ್ವಾಲ್ ಮತ್ತು ಶ್ರೀ ನಿವೆತಾ ಪರಮನಂತಂ ಎದುರಾಳಿಗಳ ವಿರುದ್ಧ ಗೆಲುವು ಸಾಧಿಸಿದರು.

ಪೋಲೆಂಡ್ ತಂಡ ವಿರುದ್ಧ ನಡೆದ ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ತಮ್ಮ ಸಂಪೂರ್ಣ ಸಾಮರ್ಥ್ಯದೊಂದಿಕೆ ಆಡಲು ಇಳಿದಿರಲಿಲ್ಲ. ಆದರೂ ಭಾರತ 16-8ರ ಅಂತರದಿಂದ ಗೆಲುವು ಸಾಧಿಸಿ ಪ್ರಶಸ್ತಿಗೆ ಮುತ್ತಿಕ್ಕಲು ಯಶಸ್ವಿಯಾಗಿದೆ.

ಭಾರತದ ಮಹಿಳೆಯ ತಂಡ ಗೆಲುವು ಸಾಧಿಸಿದ ಬಳಿಕ ಪುರುಷರ ತಂಡವೂ ಇದೇ ಸಾಧನೆಯನ್ನು ಪುನರಾವರ್ತನೆ ಮಾಡುವಲ್ಲಿ ಯಶಸ್ವಿಯಾಯಿತು. ಸೌರಭ್ ಚೌಧರಿ, ಶಹ್ಝಾರ್ ರಿಜ್ವಿ ಮತ್ತು ಅಭಿಶೇಕ್ ವರ್ಮ ಅವರನ್ನು ಒಳಗೊಂಡ ಭಾರತೀಯ ತಂಡ ವಿಯೆಟ್ನಮ್‌ನ ಎದುರಾಳಿಗಳನ್ನು 17-11ರ ಅಂತರದಲ್ಲಿ ಮಣಿಸುವಲ್ಲಿ ಯಶಸ್ವಿಯಾಯಿತು.

ಈ ಮೂಲಕ ಐಎಸ್‌ಎಸ್‌ಎಫ್ ವಿಶ್ವಕಪ್‌ನ ಪದಕ ಪಟ್ಟಿಯಲ್ಲಿ ಭಾರತ ಯುಎಸ್‌ಗಿಂತ ಮುಂದಿದೆ. ಭಾರತ ಈವರೆಗೆ 3 ಚಿನ್ನದ ಪದಕವನ್ನು ಗೆದ್ದಿದ್ದು ಚಿನ್ನದ ಪದಕದಲ್ಲಿ ಅಮೆರಿಕಾ ಜೊತೆಗೆ ಸಮಬಲದ ಸಾಧನೆಯನ್ನು ಮಾಡಿದೆ. ಭಾರತ ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕವನ್ನು ಗೆದ್ದುಕೊಂಡಿದೆ.

Story first published: Sunday, March 21, 2021, 15:21 [IST]
Other articles published on Mar 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+