ಐಎಸ್‌ಎಸ್‌ಎಫ್: ಮಿಶ್ರ ತಂಡ ವಿಭಾಗದಲ್ಲಿ ಭಾರತಕ್ಕೆ 2 ಬಂಗಾರದ ಪದಕ

ಮ್ಯೂನಿಚ್, ಮೇ 31: ಜರ್ಮನಿಯ ಮ್ಯೂನಿಚ್‌ನಲ್ಲಿ ಗುರುವಾರ (ಮೇ 30) ನಡೆದ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ ವಿಶ್ವಕಪ್‌ನಲ್ಲಿ ಭಾರತ ಮಿಶ್ರ ವಿಭಾಗದಲ್ಲಿ ಎರಡು ಬಂಗಾರದ ಪದಕಗಳನ್ನು ಗೆದ್ದುಕೊಂಡಿದೆ. ಒಟ್ಟು 5 ಚಿನ್ನ, 1 ಬೆಳ್ಳಿ ಪದಕದೊಂದಿಗೆ ಭಾರತ, ವಿಶ್ವಕಪ್ ಕೂಟದಲ್ಲೇ ಅತ್ಯುತ್ತಮ ಸಾಧನೆ ತೋರಿದೆ.
10 ಮೀಟರ್ ಏರ್ ರೈಫಲ್ ಮಿಶ್ರ ವಿಭಾಗದಲ್ಲಿ ಅಂಜುಮ್ ಮೌಡ್ಗಿಲ್ ಮತ್ತು 17ರ ಹರೆಯದ ದಿವ್ಯಾಂಶ್ ಸಿಂಗ್ ಪನ್ವರ್ ಭಾರತದವರೇ ಆದ ಅಪೂರ್ವಿ ಚಾಂದೇಲ ಮತ್ತು ದೀಪಕ್ ಕುಮಾರ್ ಜೋಡಿಯನ್ನು 16-2 ಪಾಯಿಂಟ್ ಅಂತರದಿಂದ ಸೋಲಿಸಿ ಚಿನ್ನ ಗೆದ್ದುಕೊಂಡಿತು.
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಮನು ಭಾಕರ್ ಮತ್ತು ಸೌರಭ್ ಚೌಧರಿ ಜೋಡಿ ಉಕ್ರೇನಿನ ಒಲೆನಾ ಕೊಸ್ಟೆವಿಚ್ ಮತ್ತು ಓಲೆಹ್ ಒಮೆಲ್ಕುಕ್ ಜೋಡಿಯನ್ನು 17-9 ಪಾಯಿಂಟ್ ಅಂತರದಿಂದ ಸೋಲಿಸಿ ಚಿನ್ನಕ್ಕೆ ಕೊರಳೊಡ್ಡಿತು. ಕೂಟದಲ್ಲಿ ಹೆಚ್ಚು ಪದಕ ಗೆದ್ದ ಭಾರತ ಅಗ್ರ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದೆ.
Story first published: Friday, May 31, 2019, 15:59 [IST]
Other articles published on May 31, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications