ಐಎಸ್ಎಸ್ಎಫ್ ವಿಶ್ವಕಪ್: ಚಿನ್ನಕ್ಕೆ ಮುತ್ತಿಕ್ಕಿದ ಜಿತು ರಾಯ್
ನವದೆಹಲಿ, ಮಾರ್ಚ್. 01 : ಐಎಸ್ ಎಸ್‌ಎಫ್ ವಿಶ್ವಕಪ್ ನಲ್ಲಿ ಕೊನೆಗೂ ಭಾರತ ಚಿನ್ನ ಪಡೆದ ದೇಶಗಳ ಸಾಲಿನಲ್ಲಿ ಕಾಣಿಸಿಕೊಂಡಿದೆ.
ಬುಧವಾರ ನಡೆದ ಪುರುಷರ 50 ಮೀ ಶೂಟಿಂಗ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಶೂಟರ್ ಜಿತು ರಾಯ್ ಅವರು ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.
ಇದೇ ಸ್ಪರ್ಧೆಯಲ್ಲಿ ಮತ್ತೊಬ್ಬ ಭಾರತದ ಶೂಟರ್ ಅಮನ್ ಪ್ರೀತ್ ಸಿಂಗ್ ಬೆಳ್ಳಿ ಪದಕ ಪಡೆದರು. ಇದರಿಂದ ಬುಧವಾರ ಐಎಸ್ ಎಸ್‌ಎಫ್ ವಿಶ್ವಕಪ್ ನಲ್ಲಿ ಭಾರತದ ಪಾಲಿಗೆ ಡಬಲ್ ಧಮಾಕ ಸಿಕ್ಕಿದಂತಾಗಿದೆ.[ಐಎಸ್ ಎಸ್ ಎಫ್ ವಿಶ್ವಕಪ್ ಭಾರತದ ಶೂಟರ್ ಜಿತು ರಾಯ್ ಗೆ ಕಂಚು]

ದಾಖಲೆಯ 230.1 ಅಂಕಗಳೊಂದಿಗೆ ಜಿತು ರಾಯ್ ಚಿನ್ನ ಜಯಿಸಿದರು. ಅಮನ್ ಪ್ರೀತ್ ಸಿಂಗ್ 226.9 ಅಂಕದೊಂದಿಗೆ ಬೆಳ್ಳಿ ಗೆದಿದ್ದರೆ ಇರಾನಿನ ಆಟಗಾರ 208.0 ಅಂಕಗಳೊಂದಿಗೆ ಕಂಚಿಗೆ ತೃಪ್ತಿಪಟ್ಟರು.
ಮೊದಲ ಐದು ಶೂಟ್ ಗಳಲ್ಲಿ ಜಿತು ರಾಯ್ ಮೊದಲು ಮತ್ತು ಅಂತಿಮ ಶೂಟ್ ನಲ್ಲಿ 9 ಮತ್ತು 8.8 ಪಾಯಿಂಟ್ಸ್ ಗಳಿಸಿದರು. ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿದ ಜಿತು 15 ಮತ್ತು 20ನೇ ಶೂಟ್ ನಲ್ಲಿ ಬರೋಬ್ಬರಿ 10 ಅಂಕ ಪಡೆದರು.
ಮಂಗಳವಾರ ನಡೆದಿದ್ದ 10 ಮೀ ಶೂಟಿಂಗ್ ಏರ್ ಪಿಸ್ತೂಲ್ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಜಿತು ಕಂಚಿಗೆ ಕೊರಳೊಡ್ಡಿದ್ದರು.
ಟೂರ್ನಿಯ ಆರಂಭದಲ್ಲಿ ಮಹಿಳಾ ವಿಭಾಗದ 10 ಮೀ. ಏರ್ ರೈಫಲ್‌ನಲ್ಲಿ ಪೂಜಾ ಗಾಟ್ಕರ್ ಕಂಚು ಮತ್ತು ಪುರುಷರ ಡಬಲ್ ಟ್ರ್ಯಾಪ್ ನಲ್ಲಿ ಅಂಕುರ್ ಮಿತ್ತಲ್ ಬೆಳ್ಳಿ ಪಡೆದಿದ್ದರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications